More

    15 ಸಾವಿರ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ: ಈ ಬಾರಿ ಇವೆ ಹಲವು ವಿಶೇಷ- ಇಲ್ಲಿದೆ ಡಿಟೇಲ್ಸ್​

    ಬೆಂಗಳೂರು: 6 ರಿಂದ 8 ನೇ ತರಗತಿಯ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ಚಾಲನೆ ಕೊಟ್ಟಿದ್ದು, 15 ಸಾವಿರ ಶಿಕ್ಷಕರ ನೇಮಕಕಕ್ಕೆ ಮಾರ್ಚ್ 21 ರಂದು ಅಧಿಸೂಚನೆ ಹೊರಡಿಸಲಿದೆ.

    ಈ ಕುರಿತು ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅರ್ಜಿ ಸಲ್ಲಿಕೆಗೆ ಸಂಪೂರ್ಣ ಮಾಹಿತಿಯನ್ನು ಅವರು ತಿಳಿಸಿದ್ದಾರೆ. ಅದರ ವಿವರ ಇಲ್ಲಿದೆ..

    * ಅರ್ಜಿ ಸಲ್ಲಿಕೆಗೆ – ಮಾರ್ಚ್ 23 ರಿಂದ ಏಪ್ರಿಲ್ 22 ವರೆಗೆ ಅವಕಾಶ.

    * ಮೇ 21, 22 ರಂದು ರಾಜ್ಯಾದ್ಯಂತ ಶಿಕ್ಷಕರ ಹುದ್ದೆಗೆ ಪರೀಕ್ಷೆ. ಈ ಬಾರಿ ನೇಮಕಾತಿಯಲ್ಲಿ ಮಂಗಳಮುಖಿಯರಿಗೆ 1% ಮೀಸಲಾತಿ.

    * ಬಿಎಡ್, ಟಿಇಟಿ ಮಾಡಿದ ಎಂಜಿನಿಯರ್ ವಿದ್ಯಾರ್ಥಿಗಳಿಗೂ ಈ ಬಾರಿ ಪರೀಕ್ಷೆ ಬರೆಯಲು ಅವಕಾಶ.


    * CBZ, PCM ಕಾಂಬಿನೇಷನ್ ಅಭ್ಯರ್ಥಿಗಳಿಗೂ ಅವಕಾಶ.


    * ಈ ಬಾರಿ ಅಭ್ಯರ್ಥಿಗಳ ವಯಸ್ಸಿನ ಮಿತಿ ಎರಡು ವರ್ಷ ಹೆಚ್ಚಳ. SC,ST, ಪ್ರವರ್ಗ 1- 47 ವರ್ಷ. OBC- 45 ಸಾಮಾನ್ಯ ವರ್ಗ – 42


    * ಒಟ್ಟು 400 ಅಂಕದ‌ ಪರೀಕ್ಷೆ ಇರುತ್ತೆ. ಮೊದಲ ಪತ್ರಿಕೆ – ಸಾಮಾನ್ಯ ಜ್ಞಾನ -150 ಅಂಕ. 2ನೇ ಪತ್ರಿಕೆ ಐಚ್ಛಿಕ ವಿಷಯ- 150 ಅಂಕ ( ಎಲಿಜಬಲ್ 45% ಅಂಕ ಪಡೆಯೋದು ಕಡ್ಡಾಯ) 3 ನೇ ಪೇಪರ್ – ಭಾಷೆಯ ವಿಷಯ – 100 ಅಂಕ ( ಎಲಿಜಬಲ್ 50% ಕಡ್ಡಾಯವಾಗಿ ಅಂಕ ಪಡೆಯಬೇಕು)

    ಮದ್ಯದ ಕಿಕ್ಕೇರಿಸಿಕೊಂಡು ಪಾಠ ಮಾಡ್ತಿದ್ದ ಕುಣಿಗಲ್​ ಸರ್ಕಾರಿ ಟೀಚರ್ ಸಸ್ಪೆಂಡ್​!

    2ನೇ ಕ್ಲಾಸ್​ನಲ್ಲಿದ್ದಾಗ ಅವಮಾನ ಮಾಡಿದ ಟೀಚರ್​ಗೆ 30 ವರ್ಷಗಳ ಬಳಿಕ ಇರಿದು ಬರ್ಬರವಾಗಿ ಹತ್ಯೆ ಮಾಡಿದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts