More

    ಅಂದು ಕಾರಸೇವಕರ ಮೇಲೆ ಶೂಟೌಟ್‌ಗೆ ಆದೇಶಿಸಿದ್ದ ಮಾವ: ಇಂದು ರಾಮಮಂದಿರಕ್ಕೆ 11 ಲಕ್ಷ ರೂ ದೇಣಿಗೆ ಕೊಟ್ಟ ಸೊಸೆ!

    ಲಖನೌ: ಅದು 1990ರ ಅವಧಿ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್‌ ನೇತೃತ್ವದ ಸರ್ಕಾರ ಅಧಿಕಾರದಲ್ಲಿತ್ತು. ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಚಟುವಟಿಕೆಗಳು ನಡೆಯುತ್ತಿದ್ದವು. ಅದೇ ಸಂದರ್ಭದಲ್ಲಿ ಅಯೋಧ್ಯೆಗೆ ವಿವಿಧೆಡೆಗಳಿಂದ ಬಂದಿದ್ದ ಕಾರಸೇವಕರ ಮೇಲೆ ಗುಂಡು ಹಾರಿಸಲು ಆದೇಶಿಸಿದ್ದರು ಮುಖ್ಯಮಂತ್ರಿ ಮುಲಾಯಂ ಸಿಂಗ್‌ ಯಾದವ್‌. ಈ ಘಟನೆಯಲ್ಲಿ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದರು.

    ಅದೇ ಮುಲಾಯಂ ಸಿಂಗ್‌ ಯಾದವ್‌ ಅವರ ಸೊಸೆ ಅಪರ್ಣಾ ಯಾದವ್ ಇಂದು ರಾಮಮಂದಿರ ನಿರ್ಮಾಣಕ್ಕೆ 11 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ನನಗೆ ರಾಮನಲ್ಲಿ ನಂಬಿಕೆ ಹಾಗೂ ಗೌರವ ಇದೆ. ಹೀಗಾಗಿ ಸ್ವಯಂಪ್ರೇರಿತರಾಗಿ ನಾನು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ 11 ಲಕ್ಷ ದೇಣಿಗೆ ನೀಡಿದ್ದೇನೆ ಎಂದು ಅಪರ್ಣಾ ಹೇಳಿದ್ದಾರೆ.

    ರಾಮಂದಿರ ನಿರ್ಮಾಣಕ್ಕೆ ನಾನು ಸ್ವ-ಇಚ್ಛೆಯಿಂದ ದೇಣಿಗೆ ನೀಡಿದ್ದೇನೆ. ನನ್ನ ಕುಟುಂಬ ಈ ಹಿಂದೆ ಮಾಡಿರುವುದಕ್ಕೆ ನಾನು ಜವಾಬ್ದಾರಿಯಾಗಲಾರೆ. ಹಿಂದೆ ನಡೆದಿರುವ ಘಟನೆಯಗಳು ಎಂದಿಗೂ ಮುಂದಿನ ಭವಿಷ್ಯಕ್ಕೆ ಸಮನಾಗಿರುವುದಿಲ್ಲ. ನಮ್ಮ ಮುಂದಿನ ಪೀಳಿಗೆ ಶ್ರದ್ಧೆ ಇರಬೇಕು ಎಂದು ಬಯಸುವವಳು ನಾನು. ಇದರಿಂದಾಗಿ ಹಿಂದೆ ಆಗಿರುವ ಎಲ್ಲಾ ಘಟನೆಗಳಿಗೆ ಜವಾಬ್ದಾರಿ ಹೊರದೆ 11 ಲಕ್ಷ ರೂಪಾಯಿ ದೇಣಿಗೆ ನೀಡುತ್ತಿದ್ದೇನೆ ಎಂದು ಅಪರ್ಣಾ ಹೇಳಿದ್ದಾರೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ಸ್​ ಮಾಡಿ

    ತ್ರಿಕೋನ ಪ್ರೇಮ ಕಥೆಯ ಭೀಕರ ಅಂತ್ಯ: ಕ್ಲಾಸ್‌ ಒಳಗೆ ನುಗ್ಗಿ ಗೆಳೆಯನ ಮೇಲೆ ಗುಂಡು- ಪ್ರೇಯಸಿಯ ಕೊಲೆ!

    ಮದುವೆ ಹೆಸರಲ್ಲಿ ಲವ್‌ ಜಿಹಾದ್‌ ಹೇಗೆ ನಡೀತಿದೆ ಎನ್ನೋದನ್ನು ನಾನು ಕಂಡಿದ್ದೇನೆ- ಮೆಟ್ರೋಮ್ಯಾನ್‌

    ಏನೋ ಮಾಡಲು ಹೋಗಿ ಮಾಡಬಾರದ್ದನ್ನು ಮಾಡಿ ದಿಶಾಳನ್ನು ಸಂಕಷ್ಟಕ್ಕೆ ಸಿಲುಕಿಸಿದ ಗ್ರೇಟಾ ಮಾಡಿದಳೊಂದು ಟ್ವೀಟ್‌…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts