ಮಾಸ್ಕೋ: ರಷ್ಯಾದ ಪ್ರಭಾವಿ ಮಹಿಳೆಯೊಬ್ಬರು ತನ್ನ ಗಂಡನಿಗೆ ಡಿವೋರ್ಸ್ ನೀಡಿ 20 ವರ್ಷದ ಮಲಮಗನನ್ನು ವಿವಾಹವಾಗಿದ್ದು, ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಚಿತ್ರ-ವಿಚಿತ್ರ ಘಟನೆ ವರದಿಯಾಗಿದೆ.
ಇದನ್ನೂ ಓದಿ: ಯುವತಿಯ ಬರ್ಬರ ಹತ್ಯೆಗೆ ಸ್ನೇಹಿತನಿಗೆ ಸಾಥ್ ನೀಡಿದ ಆರೋಪಿಗಳಿಬ್ಬರ ಬಂಧನ
ಪಶ್ಚಿಮ ರಷ್ಯಾ ವಲಯದ ಕ್ರಾಸ್ನೊಡರ್ ಕ್ರೈ ನಗರದ ನಿವಾಸಿ ಮರಿನಾ ಬಲ್ಮಶೆವಾ (35) ಎಂಬಾಕೆ ಈ ಮೊದಲು ಅಲೆಕ್ಸಿ (45) ಅವರನ್ನು ವರಿಸಿದ್ದರು. 2007ರಿಂದ ಸುಮಾರು 10 ವರ್ಷಗಳ ಅವರ ವೈವಾಹಿಕ ಜೀವನವು ಡಿವೋರ್ಸ್ನಿಂದ ಕೊನೆಯಾಗಿದೆ. ಅಲೆಕ್ಸಿಗೂ ಈ ಮೊದಲೇ ಮದುವೆಯಾಗಿ ಡಿವೋರ್ಸ್ ಸಹ ಆಗಿತ್ತು. ವಿಚಿತ್ರವೇನೆಂದರೆ ಇದೀಗ ಅಲೆಕ್ಸಿಯ ಮೊದಲ ಪತ್ನಿಯ ಮಗ ವ್ಲಾಡಿಮಿರ್ ಶಾವ್ಯರಿನ್ನನ್ನೇ ಮರಿನಾ ವರಿಸಿದ್ದಾಳೆ.
https://www.instagram.com/p/CCqCfnnH-W8/
ವ್ಲಾಡಿಮಿರ್ 7 ವರ್ಷದ ಬಾಲಕನಾಗಿದ್ದಾಗಿನಿಂದಲೂ ಮೆರಿನಾಳೇ ಸಾಕಿ ಸಲುಹಿದ್ದಳು. ಇದೀಗ ಗಂಡನಿಗೆ ಡಿವೋರ್ಸ್ ನೀಡಿ ಮಲಮಗನೊಂದಿಗೆ ಹಸೆಮಣೆ ಏರಿದ್ದಾಳೆ. ಸದ್ಯ ಮಲಮಗನಿಗೆ 20 ವರ್ಷ ವಯಸ್ಸಾಗಿದ್ದು, ಮರಿನಾಗೆ 35 ವರ್ಷ. ಕಳೆದ ವಾರ ಸ್ಥಳೀಯ ನೋಂದಣಿ ಕಚೇರಿಯಲ್ಲಿ ಇಬ್ಬರು ಮದುವೆಯಾದ ವಿಡಿಯೋವನ್ನು ಮರಿನಾ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ, ಇಬ್ಬರು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿಯೂ ಮರಿನಾ ಬಹಿರಂಗಪಡಿಸಿದ್ದಾಳೆ.
ಇದನ್ನೂ ಓದಿ: ಮೀತಿ ಮೀರುತ್ತಿದ್ದೀರಿ ಜೋಕೆ ಎಂದು ಡ್ರೋನ್ ಪ್ರತಾಪ್ ಎಚ್ಚರಿಕೆ ನೀಡಿದ್ಯಾರಿಗೆ?
ಸ್ಥಳೀಯ ರೆಸ್ಟೋರೆಂಟ್ನಲ್ಲಿ ನಡೆದ ಮದುವೆಯನ್ನು ಸಾಕಷ್ಟು ಎಂಜಾಯ್ ಮಾಡಿದೆವು. ಅನೇಕ ಅತಿಥಿಗಳು ಸಹ ಸಮಾರಂಭಕ್ಕೆ ಆಗಮಿಸಿದ್ದರು. ಒಟ್ಟಾರೆ ಕಾರ್ಯಕ್ರಮ ತುಂಬಾ ಸೊಗಸಾಗಿತ್ತು ಎಂದು ಮರಿನಾ ಹೇಳಿಕೊಂಡಿದ್ದಾರೆ. ಇದೇ ವೇಳೆ ಮಾಜಿ ಪತಿಯೊಂದಿಗೆ ಈ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ನಾವಿಬ್ಬರು ಮಾಡಿದ್ದನ್ನು ಆತ ಇಷ್ಟಪಡುವುದಿಲ್ಲ ಎಂದು ಭಾವಿಸುತ್ತೇನೆಂದು ಮರಿನಾ ತಿಳಿಸಿದ್ದಾರೆ.
https://www.instagram.com/p/CCgYG3LnOE2/
ಇನ್ನು ಇನ್ಸ್ಟಾಗ್ರಾಂನಲ್ಲಿ ವ್ಲಾಡಿಮಿರ್ 7 ವರ್ಷದವನಾಗಿದ್ದಾಗ ಹಾಗೂ ಇತ್ತೀಚಿಗೆ ಅವನ ಜತೆ ತೆಗಿಸಿರುವ ಎರಡು ಫೋಟೋಗಳನ್ನು ಮರಿನಾ ಅಪ್ಲೋಡ್ ಮಾಡಿದ್ದಾರೆ. ಜೀವನ ಹೇಗೆ ತಿರುವು ಪಡೆದುಕೊಳ್ಳುತ್ತದೆ ಎಂಬುದು ಎಂದಿಗೂ ತಿಳಿದಿರುವುದಿಲ್ಲ ಮತ್ತು ನಿಮ್ಮ ಮುಖದಲ್ಲಿ ನಗು ತರಿಸುವ ವ್ಯಕ್ತಿಯನ್ನು ಯಾವಾಗ ಭೇಟಿಯಾಗುತ್ತೀರಿ ಎಂಬುದು ಗೊತ್ತಿರುವುದಿಲ್ಲ. ಕೆಲವರು ನಮ್ಮನ್ನು ಜಡ್ಜ್ ಮಾಡುತ್ತಾರೆ. ಇನ್ನು ಕೆಲವರು ಬೆಂಬಲ ನೀಡುತ್ತಾರೆ ಎಂಬುದು ನನಗೆ ತಿಳಿದಿದೆ. ಆದರೆ, ಏನೇ ಹೇಳಲಿ ನಾವು ಸಂತೋಷವಾಗಿರುತ್ತೇವೆ ಎಂದು ಮರಿಯಾ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: VIDEO| ಬೇಕಂತಲೇ ಬಸ್ ಕೆರೆಗೆ ನುಗ್ಗಿಸಿ 21 ಜನರ ಜೀವ ತೆಗೆದ ಚಾಲಕ: ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ಇನ್ನು ಮರಿನಾ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿರುವ ಪೋಸ್ಟ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಮಗುವಿನ ಬೆಳವಣಿಗೆಗೆ ಕಾರಣವಾಗಿ ತಾಯಿ ಸ್ಥಾನ ತುಂಬಿದ ಮಹಿಳೆ ಅದೇ ಬಾಲಕನನ್ನು ವರಿಸುವುದು ಅನೈತಿಕ ಎಂದು ಜರಿದಿದ್ದಾರೆ. ಹೀಗೆ ಮರಿನಾ ವಿರೋಧಿಸಿ ಹಲವಾರು ಕಾಮೆಂಟ್ಗಳು ಹರಿದುಬಂದಿವೆ. ಇದೇ ವಿಚಾರದಿಂದ ಇದೀಗ ರಷ್ಯಾದಲ್ಲಿ ಮರಿನಾ ಹೆಡ್ಲೈನ್ ಆಗಿದ್ದಾರೆ. (ಏಜೆನ್ಸೀಸ್)
ಸೆಕ್ಸ್ ರಾಕೆಟ್ನಲ್ಲಿ ಸಿಕ್ಕಿಬಿದ್ದ ಕಾಶ್ಮೀರ ಯುವತಿಯರು: ಈ ಸುದ್ದಿ ನಂಬುವ ಮುನ್ನ ಒಮ್ಮೆ ಓದಿ ಬಿಡಿ!