More

    ಬಾತ್​ರೂಮ್​ಗೆ ಮೊಬೈಲ್​ ತೆಗೆದುಕೊಂಡು ಹೋದ ಯುವತಿ ಮರುಕ್ಷಣದಲ್ಲೇ ದುರಂತ ಸಾವು..!

    ಮಾಸ್ಕೋ: ಸ್ನಾನದ ಕೋಣೆಗೆ ಮೊಬೈಲ್​ ತೆಗೆದುಕೊಂಡು ಹೋದ ಯುವತಿಯೊಬ್ಬಳು ವಿದ್ಯುತ್​ ಶಾಕ್​ನಿಂದ ದುರಂತ ಸಾವಿಗೀಡಾಗಿರುವ ಘಟನೆ ರಷ್ಯಾದ ಅರ್ಖಾಂಗೆಲ್ಸ್ಕ್ ನಗರದಲ್ಲಿ ನಡೆದಿದೆ.

    ಒಲೆಸ್ಯಾ ಸೆಮೆನೋವಾ (24) ಮೃತ ಯುವತಿ. ಸ್ನಾನದ ಕೋಣೆಗೆ ತನ್ನ ಐಫೋನ್​ ತೆಗೆದುಕೊಂಡು ಹೋಗಿದ್ದ ಒಲೆಸ್ಯಾ, ಚಾರ್ಜ್​ಗೆ ಹಾಕಿ ಸ್ನಾನ ಮಾಡುವಾಗ ಆಕಸ್ಮಿಕವಾಗಿ ಚಾರ್ಜಿಂಗ್​ ಐಫೋನ್​​ ಬಾತ್​ಟಬ್​ ಒಳಗೆ ಬಿದ್ದಿದೆ. ಇದರಿಂದ ವಿದ್ಯುತ್​ ಶಾಕ್​ ಹೊಡೆದು ಮೃತಪಟ್ಟಿದ್ದಾಳೆ.

    ಒಲೆಸ್ಯಾ ಸಾವಿನ ಬಗ್ಗೆ ಮಾತನಾಡಿರುವ ಆಕೆಯ ಸ್ನೇಹಿತೆ ದರಿಯಾ, ಆಕೆಯನ್ನು ನೋಡಿದ ನನಗೆ ಶಾಕ್​ ಆಯಿತು. ಒಮ್ಮೆ ಜೋರಾಗಿ ಕೂಗಿದೆ. ಆದರೆ, ಅಷ್ಟರಲ್ಲಾಗಲದೇ ಆಕೆ ಮುಖ ಬಾಡಿದಂತಿತ್ತು. ಉಸಿರಾಟ ಇರಲಿಲ್ಲ. ಬದುಕಿದ್ದಾಳೆಂಬ ಯಾವ ಸೂಚನೆಯು ಇರಲಿಲ್ಲ. ಇದರಿಂದ ಮತ್ತಷ್ಟು ಗಾಬರಿಗೊಂಡೆ. ಆಕೆಯನ್ನು ಮುಟ್ಟಿದಾಗ ನನಗೂ ವಿದ್ಯುತ್​ ಶಾಕ್​ ಹೊಡೆಯಿತು. ಬಾತ್​ಟಬ್​ನಲ್ಲಿ ಸ್ಮಾರ್ಟ್​ಫೋನ್​ ಇತ್ತು. ಅದು ಚಾರ್ಜ್​ ಆಗುತ್ತಿತ್ತು ಎಂದು ಹೇಳಿದ್ದಾಳೆ.

    ಇದನ್ನೂ ಓದಿ: ಸುಂದರವಾಗಿದ್ದ ಈಕೆಯ ಮುಖ ಹೀಗೇಕಾಯಿತು? ಹುಡುಗಿಯ ಮಾತು ಕೇಳಿದ್ರೆ ಶಾಕ್​ ಆಗ್ತೀರಾ..!

    ಒಲೆಸ್ಯಾ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಚಾರ್ಜ್​ನಲ್ಲಿರುವಾಗಲೇ ಮೊಬೈಲ್​ ನೀರಿನೊಳಗೆ ಬಿದ್ದಿದ್ದರಿಂದ ದುರಂತವಾಗಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಸಹ ಖಚಿತಪಡಿಸಿದ್ದಾರೆ. ಇದರ ಬೆನ್ನಲ್ಲೇ ಬಾತ್​ಟಬ್​ನಲ್ಲಿ ಒಲೆಸ್ಯಾ ಸ್ನಾನ ಮಾಡುತ್ತಿರುವ ವರ್ಷದ ಹಿಂದಿನ ವಿಡಿಯೋವೊಂದು ವೈರಲ್​ ಆಗಿದೆ.

    ಇದೀಗ ಒಲೆಸ್ಯಾ ಸಾವಿನಿಂದ ಎಚ್ಚೆತ್ತಿರುವ ರಷ್ಯಾದ ತುರ್ತು ಸಚಿವಾಲಯ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ. ನೀರು ಮತ್ತು ವಿದ್ಯುತ್ ಉಪಕರಣಗಳು ಒಂದಕ್ಕೊಂದು ಹೊಂದಿಕೆಯಾಗುವುದಿಲ್ಲ ಎಂಬುದು ಈ ದುರಂತವು ಮತ್ತೊಮ್ಮೆ ನಮಗೆ ನೆನಪಿಸುತ್ತದೆ. ಯಾವುದೇ ಮೊಬೈಲ್​ ಸಾಧನವಾಗಿರಲಿ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದಿರುವ ರಷ್ಯಾ ಸರ್ಕಾರ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಿ ಎಂದಿದೆ.

    ಇಂತಹ ದುರಂತಗಳು ಇದೇ ಮೊದಲೇನಲ್ಲ. ಕಳೆದ ಆಗಸ್ಟ್​ನಲ್ಲಿ ಸ್ನಾನ ಮಾಡುವಾಗ ವಿದ್ಯುತ್​ ಶಾಕ್​ನಿಂದ 15 ವರ್ಷದ ಶಾಲಾ ಬಾಲಕಿ ಅನ್ನಾ ಕೆ ಮೃತಪಟ್ಟಿದ್ದಳು. ಕಳೆದ ವರ್ಷ ಲಿಲಿಯಾ ನೊವಿಕೊವಾ (26) ಬಾತ್​ರೂಮ್​ನಲ್ಲಿ ಕರೆಂಟ್​ ಶಾಕ್​ನಿಂದ ಜೀವ ಕಳೆದುಕೊಂಡಿದ್ದರು. (ಏಜೆನ್ಸೀಸ್​)

    ಮದ್ವೆಯಾದ ಹತ್ತೇ ದಿನದಲ್ಲಿ ಗಂಡನ ಕಳೆದುಕೊಂಡ ನವವಿವಾಹಿತೆಗೆ ಮತ್ತೊಂದು ಆಘಾತ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts