More

    ಸೌದಿ ಅರೇಬಿಯಾದಲ್ಲಿ ಉತ್ಪಾದನೆಯಾಗಲಿದೆ ರಷ್ಯನ್​ ಕರೊನಾ ಲಸಿಕೆ; ಫಿಲಿಫೈನ್ಸ್​, ಬ್ರೆಜಿಲ್​ನಲ್ಲೂ ಕ್ಲಿನಿಕಲ್​ ಟ್ರಯಲ್​

    ಮಾಸ್ಕೋ: ಪಾಶ್ಚಾತ್ಯ ರಾಷ್ಟ್ರಗಳಿಂದ ಟೀಕೆಗೆ ಒಳಗಾದರೂ ರಷ್ಯಾದ ಕರೊನಾ ನಿಗ್ರಹ ಲಸಿಕೆ ‘ಸ್ಪುಟ್ನಿಕ್​- ವಿ’ಯನ್ನು ಸೌದಿ ಅರೇಬಿಯಾದಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

    ಈ ಬಗ್ಗೆ ಸೌದಿ ಔಷಧ ಕಂಪನಿಯೊಂದಿಗೆ ಮಾತುಕತೆ ನಡೆಸಲಾಗಿದೆ. ಲಸಿಕೆಯ ಮೊದಲ ಹಾಗೂ ಎರಡನೇ ಹಂತದ ಫಲಿತಾಂಶವನ್ನು ಹಂಚಿಕೊಳ್ಳಲಾಗಿದೆ ಎಂದು ರಷ್ಯನ್​ ಡೈರೆಕ್ಟ್​ ಇನ್​ವೆಸ್ಟ್​ಮೆಂಟ್​ ಫಂಡ್​ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಿರಿಲ್​ ಡಿಮಿಟ್ರಿವ್​ ಹೇಳಿದ್ದಾರೆ.

    ಸೌದಿ ಅರೇಬಿಯಾದ ಔಷಧ ಕಂಪನಿಯೊಂದಿಗೆ ತಾತ್ವಿಕ ಒಪ್ಪಂದಕ್ಕೆ ಬರಲಾಗಿದೆ. ಲಸಿಕೆಯನ್ನು ಸೌದಿ ಅರೇಬಿಯಾ ಹಾಗೂ ಯುನೈಟೆಡ್​ ಅರಬ್​ ಎಮಿರೇಟ್ಸ್​ನಲ್ಲಿ ಮಾನವರ ಮೇಲೆ ಮೂರನೇ ಹಂತದ ಪರೀಕ್ಷೆ ನಡೆಸಲಾಗುತ್ತದೆ ಎಂದು ಕಿರಿಲ್​ ಮಾಹಿತಿ ನೀಡಿದ್ದಾರೆ ಎಂದು ಅರಬ್​ ನ್ಯೂಸ್​ ವರದಿ ಮಾಡಿದೆ. ಆದರೆ, ಕಂಪನಿ ಯಾವುದು ಎಂದು ಹೆಸರಿಸಿಲ್ಲ.

    ಇದನ್ನೂ ಓದಿ; ದೇಶದಲ್ಲಿ ಮೊದಲು ಕರೊನಾ ಲಸಿಕೆ ಪಡೆಯೋದು ಯಾರು? ಪ್ರಶ್ನೆಗೆ ಸಿಕ್ಕಿದೆ ಉತ್ತರ 

    ಸೌದಿ ಅರೇಬಿಯಾದ ತಜ್ಞರು ಹಾಗೂ ಆರೋಗ್ಯ ಸಚಿವಾಲಯದೊಂದಿಗೆ ಸಂಪರ್ಕದಲ್ಲಿದ್ದೇವೆ. ಸ್ಪುಟ್ನಿಕ್​-ವಿ ಲಸಿಕೆ ಉತ್ಪಾದಿಸಲು ಸೌದಿ ಅರೇಬಿಯಾ ಬಲಾಢ್ಯ ಜಂಟಿ ಪಾಲುದಾರನಾಗಿದೆ ಎಂದು ಕಿರಿಲ್​ ಹೇಳಿದ್ದಾರೆ.

    ಆಗಸ್ಟ್​ ಅಂತ್ಯದಲ್ಲಿ ಕ್ಲಿನಿಕಲ್​ ಟ್ರಯಲ್​ ಆರಂಭಿಸುವ ನಿರೀಕ್ಷೆ ಹೊಂದಲಾಗಿದೆ. ಇದಷ್ಟೇ ಅಲ್ಲದೆ, ಫಿಲಿಫೈನ್ಸ್​ ಹಾಗೂ ಬ್ರೆಜಿಲ್​ನಲ್ಲೂ ಲಸಿಕೆಯನ್ನು ಮಾನವರ ಮೇಲೆ ಪ್ರಯೋಗಿಸಲಾಗುವುದು ಎಂದು ರಷ್ಯಾ ಘೋಷಿಸಿದೆ.

    ಕರೊನಾ ಸಂಕಷ್ಟ ಮುಗಿಯುವವರೆಗೆ ಶಾಲೆ ತೆರೆಯಲ್ಲ; ಪಾಲಕರಿಗೆ ಭರವಸೆ ನೀಡಿದ್ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts