More

    ಮರೆಯಾಗುತ್ತಿವೆ ಗ್ರಾಮೀಣ ಕ್ರೀಡೆಗಳು

    ಜಯಪುರ: ಮೊಬೈಲ್, ಟಿವಿಗಳ ಅಬ್ಬರ ಹಾಗೂ ಅತಿಯಾದ ಕೆಲಸದ ಒತ್ತಡದಿಂದ ಗ್ರಾಮೀಣ ಕ್ರೀಡೆಗಳು ಮಾಯವಾಗುತ್ತಿವೆ. ಇದರ ನಡುವೆಯೂ ಕೂಳೂರು ಗೆಳೆಯರ ಬಳಗ ಗ್ರಾಮೀಣ ದಸರಾ ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯ ಎಂದು ಎಎಸ್‌ಐ ಗಿರೀಶ್ ಹೇಳಿದರು.
    ಕೂಳೂರು ಗೆಳೆಯರ ಬಳಗದಿಂದ ಭಾನುವಾರ ಕೂಳೂರಿನಲ್ಲಿ ಆಯೋಜಿಸಿದ್ದ ಗ್ರಾಮೀಣ ದಸರಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಒತ್ತಡದ ಜೀವನದಲ್ಲಿ ಇಂತಹ ಕ್ರೀಡಾಕೂಟಗಳು ಅಗತ್ಯ. ಕ್ರೀಡೆ ಮನುಷ್ಯನಿಗೆ ಸಾಕಷ್ಟು ನೆಮ್ಮದಿ ನೀಡುತ್ತದೆ ಎಂದರು.
    ಕೂಳೂರು ಗೆಳೆಯರ ಬಳಗದ ಸದಸ್ಯ ನವೀನ್ ಹೆಗಡೆ ಮಾತನಾಡಿ, ಗ್ರಾಮೀಣ ಕ್ರೀಡಾಪಟುಗಳು ಉತ್ಸಾಹದಿಂದ ಭಾಗವಹಿಸುತ್ತಿರುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಗ್ರಾಮೀಣ ಸ್ಪರ್ಧೆಗಳನ್ನು ನಡೆಸುವ ಸ್ಪೂರ್ತಿ ಬರುತ್ತಿದೆ ಮುಂದಿನ ವರ್ಷ ಹೆಚ್ಚು ಗ್ರಾಮೀಣ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
    ಜಿಲ್ಲಾಮಟ್ಟದ ಕೆಸರುಗದ್ದೆ, ಹಗ್ಗಜಗ್ಗಾಟ, ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕೆಸರುಗದ್ದೆ ಓಟದ ಸ್ಪರ್ಧೆಯಲ್ಲಿ ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗೆ ಬೇರೆ ಬೇರೆ ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ನಂತರ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಹಗ್ಗ-ಜಗ್ಗಾಟ ಸ್ಪರ್ಧೆ ನಡೆಯಿತು.
    ಕೃಷಿಕ ಶೇಷಪ್ಪ ಗೌಡ, ಕಾಫಿ ಸುರೇಶ್, ಆಯೋಜಕರಾದ ಮಹೇಶ್, ಕಾಫಿ ಪ್ರದೀಪ್, ನವೀನ್ ಹೆಗಡೆ, ಸಾತ್ವಿಕ್, ಸಂದೇಶ್, ಸುಮುಖ, ಉಮೇಶ್, ಆದರ್ಶ, ರಾಜು ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts