More

    ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಆದ್ಯತೆ

    ಕಾಗವಾಡ: ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಂಡು ಸಾರ್ವಜನಿಕರಿಗೆ ಸುಸಜ್ಜಿತ ರಸ್ತೆಗಳನ್ನು ನಿರ್ಮಿಸಬೇಕು ಎಂದು ರಾಜ್ಯ ಕೈಮಗ್ಗ
    ಮತ್ತು ಜವಳಿ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ ಪಾಟೀಲ ಹೇಳಿದರು.

    ಅವರು ಸೋಮವಾರ ಪಟ್ಟಣದಲ್ಲಿ 90 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಾಗವಾಡ-ನರವಾಡ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಗುತ್ತಿಗೆದಾರರು ಕಾಮಗಾರಿಯನ್ನು ಗುಣಮಟ್ಟದಿಂದ ನಿರ್ಮಿಸಬೇಕು. ಕಳಪೆ ಮಟ್ಟದ ಕಾಮಗಾರಿಗಳನ್ನು ಮಾಡಿದ್ದೇ ಆದಲ್ಲಿ ಸಹಿಸಿಕೊಳ್ಳಲಾಗುವುದಿಲ್ಲ. ರಾಜ್ಯ ಸರ್ಕಾರ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಹೆಚ್ಚಿನ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.

    ಉಗಾರ ಖುರ್ದ್ ಶಾಲಾ ಕಟ್ಟಡದ ಕಾಮಗಾರಿ, ಕೃಷ್ಣಾ ಕಿತ್ತೂರ ಗ್ರಾಮದಲ್ಲಿ ಜಾಕ್‌ವೆಲ್ ರಸ್ತೆ ಸುಧಾರಣೆ, ಕೆಂಪವಾಡ ಗ್ರಾಮದ ಶಾಲಾ ಕಟ್ಟಡ ಕಾಮಗಾರಿ, ಗುಂಡೇವಾಡಿ ಅಗ್ರಾಣಿ ರಸ್ತೆ ಖಡೀಕರಣ, ಅನಂತಪುರ-ಬಾರಿಗಡ್ಡಿ ರಸ್ತೆ ಕಾಮಗಾರಿ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರು ಭೂಮಿಪೂಜೆ ನೆರವೇರಿಸಿದರು.

    ಜಿಪಂ ಸದಸ್ಯ ಅಜಿತ ಚೌಗಲಾ, ಸುಭಾಷ ಕಟಾರೆ, ಪ್ರಕಾಶ ಚೌಗಲೆ, ಕಾಕಾಸಾಬ ಚೌಗಲೆ, ಬಿ.ಜೆ. ಪಾಟೀಲ, ಬಿ.ಎ. ಪಾಟೀಲ, ಅರುಣ ಗಣೇಶವಾಡಿ, ಗುತ್ತಿಗೆದಾರ ಐ.ಬಿ. ಪಾಟೀಲ, ಪ್ರಕಾಶ ಮೋನೆ, ಸಚಿನ ಕವಟಗೆ, ಅರುಣ ಜೋಶಿ, ಜಾವೇದ ಶೇಖ್, ಬಾಳಾಸಾಬ ಕಾಂಬಳೆ, ಮಹಾದೇವ ಮಾಳಿ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts