More

    ಇವರು ಇನ್​ಸ್ಟಾಗ್ರಾಮ್​ಗೆ ಬಂದಿದ್ದೇ ತಡ, ಭರ್ಜರಿ ಫಾಲೋವರ್ಸ್!; ನಾಲ್ಕೇ ಗಂಟೆಗಳಲ್ಲಿ ದಾಖಲೆ!

    ಬೆಂಗಳೂರು: ಸೋಷಿಯಲ್​ ಮೀಡಿಯಾದಲ್ಲಿ ಫಾಲೋವರ್ಸ್​ ಜಾಸ್ತಿ ಇದ್ರೇನೇ ಆ ಪ್ರೊಫೈಲ್​ಗೊಂದು ತೂಕ. ಆದರೆ ಎಷ್ಟೋ ಮಂದಿ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳಲು ಸ್ಪಾನ್ಸರ್​ ಮಾಡುವುದರಿಂದ ಹಿಡಿದು ಏನೇನೋ ಸರ್ಕಸ್​ ಮಾಡುತ್ತಾರೆ. ಅದಾಗ್ಯೂ ಫಾಲೋವರ್ಸ್​ ಸಂಖ್ಯೆ ಭಾರಿ ಎನಿಸಿಕೊಳ್ಳಲು ಸಾಕಷ್ಟು ಸಮಯವೇ ತೆಗೆದುಕೊಳ್ಳುತ್ತದೆ.

    ಆದರೆ ಇಲ್ಲೊಬ್ಬರು ಇನ್​ಸ್ಟಾಗ್ರಾಮ್​ನಲ್ಲಿ ಖಾತೆ ತೆರೆದ ಕೆಲವೇ ಗಂಟೆಗಳಲ್ಲಿ ಈತನನ್ನು ಲಕ್ಷಾಂತರ ಮಂದಿ ಫಾಲೋ ಮಾಡಿದ್ದಾರೆ. ಮಾತ್ರವಲ್ಲ, ಈ ಮೂಲಕ ದಾಖಲೆಯನ್ನೇ ಬರೆದಿದ್ದಾರೆ. ಅಂದಹಾಗೆ ಇವರು ಬೇರಾರೂ ಅಲ್ಲ, ರುಪರ್ಟ್ ಗ್ರಿಂಟ್​. ಹೌದು.. ‘ಹ್ಯಾರಿ ಪಾಟರ್’​ ಸಿನಿಮಾ ಸರಣಿಯಲ್ಲಿ ಮೂರು ಪ್ರಮುಖ ಪಾತ್ರಗಳ ಪೈಕಿ ರಾನ್​ ವೀಸ್ಲೆ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅದೇ ರುಪರ್ಟ್ ಗ್ರಿಂಟ್​.

    ತನ್ನ ಪುತ್ರಿಯನ್ನು ಎತ್ತಿಕೊಂಡಿರುವ ಫೋಟೋವೊಂದನ್ನು ಪೋಸ್ಟ್​ ಮಾಡುವ ಮೂಲಕ ಇನ್​ಸ್ಟಾಗ್ರಾಮ್​ಗೆ ಪ್ರವೇಶಿಸಿದ ರುಪರ್ಟ್​, ಖಾತೆ ತೆರೆದ 241 ನಿಮಿಷಗಳಲ್ಲಿ 10 ಲಕ್ಷ ಫಾಲೋವರ್ಸ್​ ಹೊಂದಿದ್ದಾರೆ. 2001ರಿಂದ 2011ರ ವರೆಗಿನ ‘ಹ್ಯಾರಿ ಪಾಟರ್’ ಸರಣಿಯ ಎಲ್ಲ ಎಂಟು ಸಿನಿಮಾಗಳಲ್ಲಿ ರಾನ್​ ವೀಸ್ಲೆ ಆಗಿ ಅಭಿನಯಿಸಿದ್ದರು. 32 ವರ್ಷದ ಇವರು ಈ ವರ್ಷಾರಂಭದಲ್ಲಿ ತಂದೆಯಾಗಿದ್ದರು.

    ಹತ್ತು ವರ್ಷ ತಡವಾಗಿ ಇನ್​ಸ್ಟಾಗ್ರಾಮ್​ಗೆ ಪ್ರವೇಶಿಸುತ್ತಿದ್ದೇನೆ. ಅದೂ ನನ್ನ ಮಗಳನ್ನು ಜಗತ್ತಿಗೇ ಪರಿಚಯಿಸುವ ಸಲುವಾಗಿ ಎಂಬ ಕ್ಯಾಪ್ಷನ್​ನೊಂದಿಗೆ ಗ್ರಿಂಟ್​ ಮೂರು ದಿನಗಳ ಹಿಂದೆ ಇನ್​ಸ್ಟಾಗ್ರಾಮ್​ಗೆ ಪ್ರವೇಶಿಸಿದ್ದರು. ಆದರೆ 4 ಗಂಟೆ 1 ನಿಮಿಷದಲ್ಲಿ 10 ಲಕ್ಷ ಫಾಲೋವರ್ಸ್ ಹೊಂದುವ ಮೂಲಕ ಸರ್ ಡೇವಿಡ್​ ಅಟೆನ್​ಬರೋ ಅವರ ಹೆಸರಿನಲ್ಲಿದ್ದ ದಾಖಲೆ ಮುರಿದಿದ್ದಾರೆ. ಡೇವಿಡ್​ 2019ರ ಅಕ್ಟೋಬರ್ 15ರಂದು ಇನ್​ಸ್ಟಾಗ್ರಾಮ್​ಗೆ ಪ್ರವೇಶಿಸಿದ್ದು, 5 ಗಂಟೆ 16 ನಿಮಿಷಗಳಲ್ಲಿ 10 ಲಕ್ಷ ಫಾಲೋವರ್ಸ್​ಅನ್ನು ಹೊಂದಿದ್ದರು.

    https://www.guinnessworldrecords.com/news/2020/11/rupert-grint-shatters-instagram-followers-record-637700

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts