More

    ಆರಂಭಿಕ ವಹಿವಾಟಿನಲ್ಲಿ ಅಮೆರಿಕನ್ ಡಾಲರ್ ಎದುರು 8 ಪೈಸೆ ಏರಿಕೆ ದಾಖಲಿಸಿದ ರೂಪಾಯಿ

    ಮುಂಬೈ: ಹೂಡಿಕೆದಾರರ ಭಾವನೆಗಳನ್ನು ಅಮೆರಿಕ-ಚೀನಾ ಟ್ರೇಡ್ ಡೀಲ್ ಬಲಪಡಿಸಿದ್ದು, ಕರೆನ್ಸಿ ವಹಿವಾಟಿನ ಮೇಲೆ ಪರಿಣಾಮ ಬೀರಿದೆ. ಕರೆನ್ಸಿ ಮಾರುಕಟ್ಟೆಯಲ್ಲಿ ಮಂಗಳವಾರದ ವಹಿವಾಟು ಆರಂಭವಾಗುತ್ತಲೇ ಅಮೆರಿಕದ ಡಾಲರ್​ ಎದುರು ರೂಪಾಯಿ 8 ಪೈಸೆ ಏರಿಕೆ ದಾಖಲಿಸಿ ವಹಿವಾಟು ಶುರುಮಾಡಿದೆ.

    ಮಾಧ್ಯಮ ವರದಿಗಳ ಪ್ರಕಾರ, ಚೀನಾದ ಉಪ ಪ್ರಧಾನಿ ಲ್ಯೂ ಹೇ ಈ ವಾರಾಂತ್ಯದಲ್ಲಿ ವಾಷಿಂಗ್ಟನ್​ಗೆ ತೆರಳಲಿದ್ದು, ಅಲ್ಲಿ ಅಮೆರಿಕದ ಜತೆಗೆ ಟ್ರೇಡ್ ಡೀಲ್​ಗೆ ಸಂಬಂಧಿಸಿ ಮಾತುಕತೆ ನಡೆಸಲಿದ್ದಾರೆ. ಲ್ಯೂ ಹೇ ಈ ವಿಚಾರದಲ್ಲಿ ಪ್ರಮುಖ ನೆಗೋಷಿಯೇಟರ್ ಆಗಿದ್ದು, ಒಂದು ಡೀಲ್​ಗೆ ಈ ವಾರಾಂತ್ಯದಲ್ಲಿ ಉಭಯ ದೇಶಗಳ ಪ್ರತಿನಿಧಿಗಳು ಸಹಿ ಹಾಕುವ ನಿರೀಕ್ಷೆ ಹೂಡಿಕೆದಾರರಲ್ಲಿ ಮೂಡಿದೆ.

    ಸಾಗರೋತ್ತರ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಮೌಲ್ಯ ಕುಸಿತ ಕಂಡರೂ, ರೂಪಾಯಿಯ ಬಲವೃದ್ಧಿಯಾಗಿದೆ. ಇದೇ ವೇಳೆ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಏರಿಕೆ ದಾಖಲಾಗಿದೆ. ಇಂಟರ್ ಬ್ಯಾಂಕ್ ಫಾರಿನ್ ಎಕ್ಸ್​ಚೇಂಜ್​ನಲ್ಲಿ ಸೋಮವಾರ ರೂಪಾಯಿ ಮೌಲ್ಯ 71.31ರಲ್ಲಿ ಕೊನೆಗೊಂಡಿತ್ತು. ಮಂಗಳವಾರ ರೂಪಾಯಿ ವಹಿವಾಟು 71.28ರಲ್ಲಿ ಆರಂಭವಾಗಿದ್ದು, ನಂತರ 71.23ರಲ್ಲಿ ವಹಿವಾಟು ಮುಂದುವರಿದಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts