More

    ನಿಯಮ ಪಾಲಿಸದಿದ್ದರೆ ಪರವಾನಗಿ ರದ್ದು, ಔಷಧ ವ್ಯಾಪಾರಿಗಳಿಗೆ ನೋಡಲ್ ಅಧಿಕಾರಿ ಜಿ.ಪಿ.ರವಿಪ್ರಸಾದ ಎಚ್ಚರಿಕೆ

    ಗಂಗಾವತಿ: ಔಷಧ ಮಾರಾಟ ನಿಯಮ ಪಾಲಿಸದಿದ್ದರೆ ಮಾರಾಟದ ಪರವಾನಗಿ ರದ್ದುಪಡಿಸಲಾಗುವುದು ಎಂದು ವ್ಯಾಪಾರಿಗಳಿಗೆ ಕೊಪ್ಪಳ ವೃತ್ತದ ಸಹಾಯಕ ಔಷಧ ನಿಯಂತ್ರಕ ಮತ್ತು ನೋಡಲ್ ಅಧಿಕಾರಿ ಜಿ.ಪಿ.ರವಿಪ್ರಸಾದ ಎಚ್ಚರಿಕೆ ನೀಡಿದರು.

    ನಗರದ ಔಷಧೀಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಔಷಧ ವ್ಯಾಪಾರಿಗಳ ಸಭೆಯಲ್ಲಿ ಮಾತನಾಡಿದರು. ಜ್ವರ, ನೆಗಡಿ ಮತ್ತು ಕೆಮ್ಮು ರೋಗಗಳಿಗೆ ಔಷಧ ಸೇವಿಸುವವರ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕಡ್ಡಾಯ ನೀಡಬೇಕಿದೆ. ಮಾಹಿತಿ ಕಳುಹಿಸದ ವ್ಯಾಪಾರಿಗಳ ಪಟ್ಟಿ ತಯಾರಿಸಲಾಗುತ್ತಿದ್ದು, ಕ್ರಮ ಕೈಗೊಳ್ಳುವ ಅನಿವಾರ್ಯತೆ ಎದುರಾಗಲಿದೆ. ಸಾಮಾಜಿಕ ಅಂತರ ಕಾಪಾಡಬೇಕಿದ್ದು, ಇಲಾಖೆ ಸೂಚಿಸುವ ಮಾಹಿತಿಯನ್ನು ಕಡ್ಡಾಯವಾಗಿ ನೀಡುವಂತೆ ಮನವಿ ಮಾಡಿದರು. ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕ ಸ್ವಾಮಿ ಹೇರೂರು, ಸಂಘದ ವಿವಿಧ ಘಟಕದ ಪದಾಧಿಕಾರಿಗಳಾದ ಕನಕರಾಜ ದರೋಜಿ, ಶಿವಾನಂದಸ್ವಾಮಿ, ಮಲ್ಲಿಕಾರ್ಜುನ, ಬಸವೇಶ್ವರರಾವ್, ರಘುನಾಥ ದರೋಜಿ, ಸಂತೋಷ ಪಾಟೀಲ್, ವೀರೇಶ, ಸುರೇಂದ್ರ, ಗಣೇಶ ಸುಳೇಕಲ್, ಲಿಂಗಣ್ಣಮಲ್ಲಾಪುರ, ನಾಗರಾಜಸ್ವಾಮಿ, ಮಹಾಂತೇಶ ಭಾವಿಕಟ್ಟಿ, ಮನ್ಸೂರ್ ಪಾಟೀಲ್, ನವೀನ್ ಚವಾಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts