More

    ಕರೊನಾ ವೈರಸ್‌ಗೂ ಬಗ್ಗದ ಜನ, ಸ್ಟೇಡಿಯಂನಲ್ಲಿ ರಗ್ಬಿ ಪಂದ್ಯ ನೋಡಿದ್ರು 22 ಸಾವಿರ ಮಂದಿ

    ದುನೆಡಿನ್: (ನ್ಯೂಜಿಲೆಂಡ್): ಕೋವಿಡ್-19ರಿಂದಾಗಿ ಕಳೆದ ಮೂರು ತಿಂಗಳಿಂದ ಜಾಗತಿಕ ಕ್ರೀಡಾಲೋಕವೇ ಸ್ತಬ್ಧಗೊಂಡಿತ್ತು. ಲಾಕ್‌ಡೌನ್ ಸಡಿಲಿಕೆಯಿಂದಾಗಿ ದಿನಗಳೆದಂತೆ ನಿಧಾನಗತಿಯಲ್ಲಿ ಕ್ರೀಡಾ ಚಟುವಟಿಕೆಗಳು ಪುನರಾರಂಭಗೊಳ್ಳುತ್ತಿವೆ. ಸತತ 22 ದಿನಗಳ ಕಾಲ ಯಾವುದೇ ಪ್ರಕರಣ ಕಂಡು ಬರದ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ದೇಶವನ್ನು ಕರೊನಾ ವೈರಸ್ ಮುಕ್ತ ಎಂದು ೋಷಿಸಲಾಯಿತು. ಇದರ ಬೆನ್ನಲ್ಲೇ ನಡೆದ ಪ್ರತಿಷ್ಠಿತ ಪ್ರತಿಷ್ಠಿತ ರಗ್ಬಿ ಲೀಗ್‌ಗೆ ಚಾಲನೆ ನೀಡಲಾಯಿತು. ಮೊದಲ ದಿನದ ಮೊದಲ ಪಂದ್ಯಕ್ಕೆ 22 ಸಾವಿರ ಪ್ರೇಕ್ಷಕರು ಸಾಕ್ಷಿಯಾದರು.

    ಇದನ್ನೂ ಓದಿ: ಕ್ರಿಕೆಟ್ ದಿಗ್ಗಜರನ್ನೂ ಕಾಡುತ್ತಿರುವ ಕರೊನಾ; ಈಗ ಶಾಹಿದ್ ಅಫ್ರಿದಿ ಸರದಿ

    ವೃತ್ತಿಪರ ರಗ್ಬಿ ಲೀಗ್‌ನ ಮೊದಲ ಪಂದ್ಯಕ್ಕೆ ಕ್ರೀಡಾಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಯಿತು. ಹೈಲ್ಯಾಂಡರ್ಸ್‌ ಹಾಗೂ ಹ್ಯಾಮಿಲ್ಟನ್ ಮೂಲದ ಚ್‌ಸೀ ನಡುವಿನ ಪಂದ್ಯಕ್ಕೆ ಸುಮಾರು 20 ಸಾವಿರ ಟಿಕೆಟ್ ಮಾರಾಟ ಮಾಡಲಾಗಿತ್ತು. 22 ಸಾವಿರಕ್ಕೂ ಅಧಿಕ ಮಂದಿ ಪಂದ್ಯ ವೀಕ್ಷಿಸಿದರು. ಕಳೆದ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ, ಅರ್ಜೆಂಟೀನಾ, ಜಪಾನ್, ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಒಳಗೊಂಡ ಸೂಪರ್ ರಗ್ಬಿ ಟೂರ್ನಿ ಕರೊನಾದಿಂದಾಗಿ ರದ್ದುಗೊಂಡಿತ್ತು. ನ್ಯೂಜಿಲೆಂಡ್‌ನ ಪ್ರತಿಷ್ಠಿತ ಸೂಪರ್ ರಗ್ಬಿ ಲೀಗ್‌ನಲ್ಲಿ ಐದು ತಂಡಗಳು ಆಡಲಿದ್ದು, ಮುಂದಿನ 5 ವಾರಗಳ ಕಾಲ ಲೀಗ್ ನಡೆಯಲಿದೆ. ಸೆಪ್ಟೆಂಬರ್‌ನಲ್ಲಿ ಅಂತಾರಾಷ್ಟ್ರೀಯ ರಗ್ಬಿ ಟೂರ್ನಿ ನಡೆಯುವ ಸಾಧ್ಯತೆಗಳಿವೆ.ಕರೊನಾ ವೈರಸ್‌ಗೂ ಬಗ್ಗದ ಜನ, ಸ್ಟೇಡಿಯಂನಲ್ಲಿ ರಗ್ಬಿ ಪಂದ್ಯ ನೋಡಿದ್ರು 22 ಸಾವಿರ ಮಂದಿ

    ನ್ಯೂಜಿಲೆಂಡ್‌ನಲ್ಲಿ ರಗ್ಬಿ ಆರಂಭಗೊಂಡ ಬೆನ್ನಹಿಂದೆಯೇ ಇತರ ಕ್ರೀಡಾ ಚಟುವಟಿಕೆಗಳಿಗೂ ಚಾಲನೆ ಸಿಗಲಿದೆ. ಇತ್ತೀಚೆಗಷ್ಟೇ ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದ್ದು, ಸರಣಿ ಆರಂಭಕ್ಕೂ ಮುನ್ನ ಮೂರು ವಾರಗಳ ಕಾಲ ಕ್ವಾರಂಟೈನ್‌ನಲ್ಲಿದೆ.

    ನಾಟಕವಾಗ್ತಿದೆ ಸಂಜಯ್​ ಲೀಲಾ ಬನ್ಸಾಲಿಯ ಬಾಜಿರಾವ್ ಮಸ್ತಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts