More

    “ಜೈ ಶ್ರೀರಾಮ್”​ ಘೋಷಣೆ ನೇತಾಜಿಗೂ, ರಾಮನಿಗೂ ತೋರಿದ ಅಗೌರವ: ಆರ್​ಎಸ್​ಎಸ್​

    ನವದೆಹಲಿ: ಅಪ್ರತಿಮ ಸ್ವಾಂತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್​ ಚಂದ್ರ ಬೋಸ್​ ಅವರು 124ನೇ ಜನ್ಮದಿನೋತ್ಸವ ಹಿನ್ನೆಲೆಯಲ್ಲಿ ಕೋಲ್ಕತದಲ್ಲಿ ನಡೆದ ಸಮಾರಂಭದಲ್ಲಿ ಕೇಳಿಬಂದ “ಜೈ ಶ್ರೀರಾಮ್​” ಘೋಷಣೆಯನ್ನು ನಾವು ಸಹ ಬೆಂಬಲಿಸುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್​ ಬುಧವಾರ ತಿಳಿಸಿದೆ.

    ಕಾರ್ಯಕ್ರಮವನ್ನು ಉದ್ದೇಶಿಸಿ ಸಿಎಂ ಮಮತಾ ಬ್ಯಾನರ್ಜಿ ಭಾಷಣ ಆರಂಭಿಸುತ್ತಿದ್ದಂತೆ ಜೈ ಶ್ರೀರಾಮ್​ ಘೋಷಣೆ ಕೂಗಿದ್ದರು. ಈ ವಿಚಾರ ಭಾರಿ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಆರ್​ಎಸ್​ಎಸ್​ನ ಪಶ್ಚಿಮ ಬಂಗಾಳ ಘಟಕದ ಪ್ರಧಾನ ಕಾರ್ಯದರ್ಶಿ ಜಿಷ್ಣು ಬಸು ಮಾತನಾಡಿ, ನೇತಾಜಿಗೆ ಗೌರವ ಸಲ್ಲಿಸುವ ಕಾರ್ಯಕ್ರಮದಲ್ಲಿ ಜೈ ಶ್ರೀರಾಮ್​ ಘೋಷಣೆ ಮಾಡಬಾರದಿತ್ತು ಎಂದಿದ್ದಾರೆ.

    ಇದನ್ನೂ ಓದಿರಿ: ರಾತ್ರಿ ಫೋನ್ ಕಾಲ್​ ಬಂದ ಬೆನ್ನಲ್ಲೇ ತೆರಳಿದ ಅಪ್ರಾಪ್ತೆ ಬೆಳ್ಳಂಬೆಳಗ್ಗೆ ಕೆರೆಯಲ್ಲಿ ಶವವಾಗಿ ಪತ್ತೆ!

    ಜನವರಿ 23ರ ನೇತಾಜಿ 124ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಘೋಷಣೆ ಕೇಳಿಬಂದಿತ್ತು. ಪಶ್ಚಿಮ ಬಂಗಾಳ ಸಿಎಂ ಮತ್ತು ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ಜನರನ್ನು ಉದ್ದೇಶಿಸಿ ಮಾತನಾಡಲು ವೇದಿಕೆ ಆಹ್ವಾನಿಸುತ್ತಿದ್ದಂತೆ ಅಲ್ಲಿ ನೆರೆದಿದ್ದ ಒಂದು ವರ್ಗದ ಮಂದಿ “ಜೈ ಶ್ರೀರಾಮ್​” ಮತ್ತು “ಮೋದಿ-ಮೋದಿ” ಎಂದು ಘೋಷಣೆ ಕೂಗಿದರು. ಇದರಿಂದ ಮಮತಾ ಕೋಪಗೊಂಡರು.

    ಅಂದು ಏನು ನಡೆಯಿತು ಆ ಬಗ್ಗೆ ಸಂಘ (ಆರ್​ಎಸ್​ಎಸ್​)ಕ್ಕೆ ಅಸಮಾಧಾನವಿದೆ. ಅಂದು ಘೋಷಣೆ ಕೂಗಿದವರು ರಾಮನಿಗಾಗಲಿ ಅಥವಾ ನೇತಾಜಿ ಸುಭಾಷ್​ ಚಂದ್ರ ಬೋಸ್​ಗಾಗಲಿ ಗೌರವನ್ನು ತೋರಿಲ್ಲ. ನೇತಾಜಿಗೆ ಗೌರವಪೂರ್ವಕವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜೈ ಶ್ರೀರಾಮ್​ ಎಂದು ಕೂಗಿದವರನ್ನು ಖಂಡಿತವಾಗಿ ಪತ್ತೆಹಚ್ಚಬೇಕಿದೆ. ಯಾರು ಇದರಲ್ಲಿ ಒಳಗೊಂಡಿದ್ದಾರೋ ಅವರನ್ನು ಬಿಜೆಪಿ ಪಕ್ಷ ಹುಡುಕಬೇಕಿದೆ. ಇಂದು ಒಂದು ರೀತಿಯಲ್ಲಿ ವಿಧ್ವಂಸಕ ಕೃತ್ಯವೇ ಆಗಿದೆ ಎಂದು ಜಿಷ್ಣು ಬಸು ಹೇಳಿದರು.

    ಇದನ್ನೂ ಓದಿರಿ: 35ರ ಶಿಕ್ಷಕಿ 15ರ ವಿದ್ಯಾರ್ಥಿಯನ್ನು ಪುಸಲಾಯಿಸಿದ್ಹೇಗೆ? ಇಬ್ಬರ ನಡುವಿನ ಸೆಕ್ಸ್​ ಚಾಟ್​ ಬಹಿರಂಗ!

    ಇನ್ನು ಬಂಗಾಳದ ಬಿಜೆಪಿ ನಾಯಕರೊಬ್ಬರು ಮಾತನಾಡಿ ಕಾರ್ಯಕ್ರಮದಲ್ಲಿ ಮೋದಿ ಪಕ್ಕದಲ್ಲೇ ಕುಳಿತಿದ್ದ ಮಮತಾ ಅವರು ಜೈ ಶ್ರೀ ರಾಮ್​ ಘೋಷಣೆಯನ್ನು ತಮ್ಮ ಲಾಭಕ್ಕಾಗಿ ಬಳಸಿಕೊಂಡರು. ಬಿಜೆಪಿಯನ್ನು ಮುಜುಗರಕ್ಕೀಡುಮಾಡಲು ಕ್ಷಿಪ್ರವಾಗಿ ತನ್ನ ಯೋಜನೆಯನ್ನು ಕಾರ್ಯಗತಗೊಳಿಸಿದರು ಎಂದು ಟೀಕಿಸಿದ್ದಾರೆ. (ಏಜೆನ್ಸೀಸ್​)

    ಕೊನೆಯಾಸೆ ಈಡೇರಿಸಿಕೊಂಡು ಶಾಸಕರಾಗಿಯೇ ಕೊನೆಯುಸಿರೆಳೆದರು

    ಟಿಕ್​ಟಾಕ್​ನಲ್ಲಿ ಅರೆಬೆತ್ತಲೆ ವಿಡಿಯೋ ಹರಿಬಿಡ್ತಿದ್ದ ಪ್ರಭಾವಿ ಮಹಿಳೆ ಗಂಡನಿಂದಲೇ ದುರಂತ ಅಂತ್ಯ!

    ರೈಲಿಗೆ ತಲೆ ಕೊಟ್ಟು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts