More

    ದೇಶದ ಎಲ್ಲ ಸಂಸ್ಥೆಗಳು ಆರ್​ಎಸ್​ಎಸ್​ ಹಿಡಿತದಲ್ಲಿವೆ: ರಾಹುಲ್​ ಗಾಂಧಿ ಗಂಭೀರ ಆರೋಪ

    ಶ್ರೀನಗರ: ಜಮ್ಮ ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದಾಗಿನಿಂದ ಇದೇ ಮೊದಲ ಬಾರಿಗೆ ಲಡಾಖ್​ಗೆ ಭೇಟಿ ನೀಡಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್​) ದ ವಿರುದ್ಧ ಹರಿಹಾಯ್ದಿದ್ದಾರೆ.

    ಶುಕ್ರವಾರ ಲಡಾಖ್​ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ರಾಹುಲ್​ ಗಾಂಧಿ, ಆರ್​ಎಸ್​ಎಸ್​ ತನ್ನ ಸಂಘಟನೆಯ ಜನರನ್ನು ದೇಶದ ಪ್ರತಿಯೊಂದು ಸಂಸ್ಥೆಯಲ್ಲೂ ಇರಿಸಿದೆ. ನೀವು ಕೇಂದ್ರ ಸರ್ಕಾರದ ಯಾವುದೇ ಸಚಿವರನ್ನು ಕೇಳಿದರೂ, ಅವರು ನಿಜವಾಗಿಯೂ ತಮ್ಮ ಸಚಿವಾಲಯಗಳನ್ನು ನಡೆಸುತ್ತಿಲ್ಲ ಎಂದು ಹೇಳುತ್ತಾರೆ. ಆರ್‌ಎಸ್‌ಎಸ್‌ನಿಂದ ನಿಯೋಜಿತರಾದವರು ವಾಸ್ತವವಾಗಿ ಈ ಸಚಿವಾಲಯಗಳನ್ನು ನಡೆಸುತ್ತಿದ್ದಾರೆ ಮತ್ತು ಎಲ್ಲವನ್ನೂ ಸೂಚಿಸುತ್ತಿದ್ದಾರೆ ಹಾಗೂ ಎಲ್ಲವರೂ ಅವರ ಹಿಡಿತದಲ್ಲಿದೆ ಎಂದರು.

    ಇದನ್ನೂ ಓದಿ: ರೈಲ್ವೆ ಕ್ಷೇತ್ರ ಅಭಿವೃದ್ಧಿಗೆ ರೂ.1311 ಕೋಟಿ ಅನುದಾನ ತಂದಿದ್ದೇನೆ; ಸಂಸದ ರಮೇಶ ಜಿಗಜಿಣಗಿ

    ಇದೇ ದಿನ ಲೇಹ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಹುಲ್​ ಗಾಂಧಿ ಯುವಕರೊಂದಿಗೆ ಸಂವಾದ ನಡೆಸಿದರು. ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿತು ಮತ್ತು ಭಾರತದಲ್ಲಿ ಸ್ವಾತಂತ್ರ್ಯದ ಬಲವರ್ಧನೆಯು ಸಂವಿಧಾನವಾಗಿದೆ. ಸಂವಿಧಾನವು ನಿಯಮಗಳ ಗುಂಪಾಗಿದೆ ಎಂದು ಯುವಕರಿಗೆ ಸಂವಿಧಾನ ಪಾಠ ಮಾಡಿದರು.

    ನೀವು ಸಂವಿಧಾನವನ್ನು ಕಾರ್ಯರೂಪಕ್ಕೆ ತರುವ ವಿಧಾನವೆಂದರೆ ಸಂವಿಧಾನದ ದೃಷ್ಟಿಕೋನವನ್ನು ಬೆಂಬಲಿಸುವ ಸಂಸ್ಥೆಗಳನ್ನು ಸ್ಥಾಪಿಸುವುದು. ಬಿಜೆಪಿ ಮತ್ತು ಆರ್​ಎಸ್​​ಎಸ್​ ಮಾಡುತ್ತಿರುವುದೇನೆಂದರೆ ತಮ್ಮದೇ ಆದ ಜನರನ್ನು ಸಾಂಸ್ಥಿಕ ರಚನೆಯ ಪ್ರಮುಖ ಸ್ಥಾನಗಳಲ್ಲಿ ಇರಿಸುವುದು ಎಂದರು.

    ಇದಕ್ಕೂ ಮುನ್ನ ರಾಹುಲ್ ಗಾಂಧಿ ಲೇಹ್​ನಲ್ಲಿ ಫುಟ್ ಬಾಲ್ ಪಂದ್ಯವನ್ನು ವೀಕ್ಷಿಸಿದರು. (ಏಜೆನ್ಸೀಸ್​)

    ತನ್ನ ವಿದ್ಯಾರ್ಥಿನಿ ಮನೆಯಲ್ಲೇ ಬಾಡಿಗೆಗೆ ಉಳಿದುಕೊಂಡಿದ್ದ ಬೀದರ್​ ಶಿಕ್ಷಕನ ಬೇಸಿಗೆ ರಹಸ್ಯ ಬಯಲು!

    ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದ ನರ್ಸ್​..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts