More

    ಕಂಟೇನ್​ಮೆಂಟ್​ ಜೋನ್​ನಲ್ಲಿ ಮನೆ ಮನೆಗೆ ತೆರಳುತ್ತಿರುವ ಆರ್​ಎಸ್​ಎಸ್​ ಕಾರ್ಯಕರ್ತರು ಮಾಡುತ್ತಿರೋದೇನು?

    ಬೆಂಗಳೂರು: ರಾಜಧಾನಿಯ ಕಂಟೇನ್​ಮೆಂಟ್​ ಜೋನ್​ಗಳಲ್ಲಿ ಕರೊನಾ ಪರೀಕ್ಷೆ ನಡೆಸಲು ಆರೋಗ್ಯ ಕಾರ್ಯಕರ್ತರು ಕಾಲಿಡಲು ಭಯಪಡುತ್ತಿದ್ದಾರೆ. ಸಾರ್ವಜನಿಕರು ಸಹಕರಿಸುತ್ತಿಲ್ಲ ಎನ್ನುವುದು ಒಂದು ಕಾರಣವಾದರೆ, ತಮ್ಮನ್ನೇ ಕೋವಿಡ್​ ಆವರಿಸಿಕೊಳ್ಳುವ ಭೀತಿ ಇನ್ನೊಂದೆಡೆ.

    ಆದರೆ, ಮಹಾರಾಷ್ಟ್ರದ ಪುಣೆಯಲ್ಲಿ ನಡೆಯುತ್ತಿರುವ ಕಾರ್ಯ ಶ್ಲಾಘನೀಯ ಹಾಗೂ ಅನುಕರಣೀಯ. ಸೇವಾ ಸ್ಫೂರ್ತಿಯೊಂದಿಗೆ 800ಕ್ಕೂ ಅಧಿಕ ಜನರು ಕೋವಿಡ್​ ವಿರುದ್ಧ ಹೋರಾಟದಲ್ಲಿ ತೊಡಗಿಕೊಂಡಿದ್ದಾರೆ. ಮನೆ ಮನೆಗೂ ತೆರಳಿ ಕರೊನಾ ಪರೀಕ್ಷೆ ನಡೆಸುತ್ತಿದ್ದಾರೆ.

    ಕಳೆದ ಏಪ್ರಿಲ್​ 27ರಂದು ಆರ್​ಎಸ್ಎಸ್​ನ ಜನ ಕಲ್ಯಾಣ ಸಮಿತಿ ಕೋವಿಡ್​ ವಿರುದ್ಧ ಹೋರಾಟದಲ್ಲಿ ಕೈಜೋಡಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿತು. ಇದಕ್ಕಾಗಿ ‘ಪುಣೇಕರ್​ ಅಗೇನ್​ಸ್ಟ್​ ಕರೊನಾ’ ಅಭಿಯಾನ ಆರಂಭಿಸಿತು. ಇದಕ್ಕೆ ಉತ್ತಮ ಬೆಂಬಲ ವ್ಯಕ್ತವಾಯಿತು. ಪುಣೆಯ ಖ್ಯಾತ ವೈದ್ಯರು ಇದರಲ್ಲಿ ಪಾಲ್ಗೊಂಡರು. 675ಕ್ಕೂ ಅಧಿಕ ಕಾರ್ಯಕರ್ತರು ಮುಂದೆ ಬಂದರು. ವಿಶೇಷವೆಂದರೆ ಇವರಲ್ಲಿ ಮಹಿಳೆಯರು ಇದ್ದಾರೆ. ಇವರೆಲ್ಲರಿಗೆ ಒಂದು ವಿಶೇಷ ತರಬೇತಿ ನೀಡಲಾಯಿತು. ಈ ತಂಡ ಸಾಮೂಹಿಕ ಕರೊನಾ ತಪಾಸಣೆಯಲ್ಲಿ ತೊಡಗಿಕೊಂಡಿದೆ.

    ಇದನ್ನೂ ಓದಿ; ಭಾರತದೊಂದಿಗೆ ಗಡಿ ಕ್ಯಾತೆ ತೆಗೆದ ಚೀನಾ ಸ್ವಾಟೆಗೆ ತಿವಿದ ಅಮೆರಿಕ 

    ನುರಿತ ವೈದ್ಯಕೀಯ ಸಿಬ್ಬಂದಿ ಒಳಗೊಂಡ ಕಂಟೇನ್​ಮೆಂಟ್​ ಜೋನ್​ಗಳಲ್ಲಿ ಮನೆ ಮನೆಗೆ ತೆರಳಿ ಕರೊನಾ ಪರೀಕ್ಷೆ ಮಾಡುತ್ತಿದೆ. ಸುಡುವ ಬಿಸಿಲಲ್ಲೂ ನಿರಂತರ ಆರು ತಾಸು ಮನೆ ಮನೆ ಸುತ್ತಾಡುವ ತಂಡದ ಸಿಬ್ಬಂದಿ ಬಳಿಕ ಮನೆಗೆ ತೆರಳುವುದಿಲ್ಲ. ಬದಲಿಗೆ ಆರ್​ಎಸ್​ಎಸ್​ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಶಿಬಿರಕ್ಕೆ ಬರುತ್ತದೆ. ಸತತ ಐದು ದಿನಗಳ ಕೆಲಸದ ಬಳಿಕ ಅವರನ್ನು ನಾಲ್ಕು ದಿನಗಳವರೆಗೆ ಕ್ವಾರಂಟೇನ್​ನಲ್ಲಿಡಲಾಗುತ್ತದೆ. ಬಳಿಕ ಪರೀಕ್ಷೆ ನಡೆಸಿ ನೆಗೆಟಿವ್​ ಫಲಿತಾಂಶ ಬಂದರಷ್ಟೇ ಮನೆಗೆ ಕಳುಹಿಸಲಾಗುತ್ತಿದೆ. ಆದರೆ, ಕಾರ್ಯಕರ್ತರು ಮನೆಗೆ ತೆರಳದೇ ಸೇವೆಯನ್ನು ಮುಂದುವರಿಸುತ್ತಿದ್ದಾರೆ.

    ಕಂಟೇನ್​ಮೆಂಟ್​ ಜೋನ್​ಗಳಲ್ಲಿ ಕರೊನಾ ವ್ಯಾಪಿಸುವುದನ್ನು ತಡೆಯಲು ಅಲ್ಲಿರುವವರನ್ನೆಲ್ಲ ಪರೀಕ್ಷೆಗೆ ಒಳಪಡಿಸುವುದೊಂದೇ ಮಾರ್ಗವಾಗಿದೆ. ಪುಣೆಯಲ್ಲಿ ಸದ್ಯ 60ಕ್ಕೂ ಹೆಚ್ಚು ಕಂಟೇನ್​ ಜೋನ್​ಗಳನ್ನು ಗುರುತಿಸಲಾಗಿದೆ. ಹೀಗಾಗಿ ಲಕ್ಷಾಂತರ ಜನರ ಪರೀಕ್ಷೆ ನಡೆಸಲೇಬೇಕಾಗಿದೆ. ಇದಕ್ಕೆ ಸರ್ಕಾರದೊಂದಿಗೆ ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಲೇಬೇಕಿದೆ.

    ಇದನ್ನೂ ಓದಿ; ಈ ವರ್ಷ ನರ್ಸರಿ ಸ್ಕೂಲ್​ ತೆರೆಯಲ್ವಾ…? ಆಡ್ಮಿಷನ್​ ಮಾಡಿಸ್ಬೇಕೋ ಬೇಡ್ವೋ? 

    ಪುಣೇಕರ್​ ಅಗೇನ್​ಸ್ಟ್​ ಕರೊನಾ ಅಭಿಯಾನದಲ್ಲಿ ಪುಣೆ ಮಹಾನಗರ ಪಾಲಿಕೆ ಆಂಬುಲೆನ್ಸ್ ಹಾಗೂ ಪೊಲೀಸ್​ ಹಾಗೂ ಟೆಸ್ಟಿಂಗ್​ ಕಿಟ್​ಗಳನ್ನು ವ್ಯವಸ್ಥೆ ಮಾಡಿದ್ದರೆ, ಮಹಾರಾಷ್ಟ್ರ ಕೈಗಾರಿಕಾ ಹಾಗೂ ವಾಣಿಜ್ಯ ಸಂಸ್ಥೆ ಪಿಪಿಇ ಕಿಟ್​ಗಳನ್ನು ಒದಗಿಸಿದೆ.

    ಈ ಅಭಿಯಾನದಲ್ಲಿ ಈವರೆಗೆ 13,000 ಮನೆಗಳ 62,000 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 1000ಕ್ಕೂ ಹೆಚ್ಚು ಜನರನ್ನು ಮುಂದಿನ ಚಿಕಿತ್ಸೆ ಶಿಫಾರಸು ಮಾಡಲಾಗಿದೆ. ವಿಶೇಷವೆಂದರೆ ಆರ್​ಎಸ್​ಎಸ್​ ನೇತೃತ್ವದ ಈ ಅಭಿಯಾನ ನಡೆಯುತ್ತಿರುವ ಭವಾನಿ ಪೇಟ್​​ ಹಾಗೂ ಕಸಬಾ ಪ್ರದೇಶಗಳು ಮುಸ್ಲಿಂ ಬಾಹುಳ್ಯದ ಪ್ರದೇಶಗಳಾಗಿವೆ. ಹಲವು ಕುಟುಂಬಗಳು ಈ ಅಭಿಯಾನದಲ್ಲಿ ಸ್ವಯಂಪ್ರೇರಣೆಯಿಂದ ಪಾಲ್ಗೊಂಡಿವೆ. ಈ ಕಾರಣಕ್ಕಾಗಿ ಈ ಅಭಿಯಾನದ ದೇಶದ ಇತರ ಪ್ರದೇಶಗಳಿಗೂ ಮಾದರಿ ಎನಿಸಿದೆ.

    ಅಂತರ ಜಿಲ್ಲಾ ಸಂಚಾರಕ್ಕೆ ಬೇಕಿಲ್ಲ ಪಾಸ್​; ಬಸ್​, ರೈಲು, ವಿಮಾನ ಪ್ರಯಾಣಕ್ಕೆ ಈ ನಿಯಮ ಪಾಲನೆ ಕಡ್ಡಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts