More

    ಹೊಸ ವರ್ಷಕ್ಕೆ ಮದ್ಯದ ವಹಿವಾಟು ಜೋರು: 4 ದಿನದಲ್ಲಿ ಅಬಕಾರಿ ಇಲಾಖೆಗೆ ಹರಿದುಬಂತು ಭಾರಿ ಮೊತ್ತ!

    ಬೆಂಗಳೂರು: ಹೊಸ ವರ್ಷದಲ್ಲಿ ಮದ್ಯ ಕಿಕ್ ಜೋರಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹಾಟ್ ಡ್ರಿಂಕ್ಸ್ ಹಾಗೂ ಬಿಯರ್ ಮಾರಾಟದಲ್ಲಿ ತುಸು ಹೆಚ್ಚಳವಾಗಿದೆ.ಕಳೆದ ವರ್ಷ 2019ರ ಡಿ.31ರಂದು 119.97 ಕೋಟಿ ರೂ. ಮೌಲ್ಯದ 3.62 ಲಕ್ಷ ಬಾಕ್ಸ್ ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್) ಹಾಗೂ 1.30 ಲಕ್ಷ ಬಾಕ್ಸ್ ಬಿಯರ್ ಸೇಲಾದರೆ, 2020ರ ಡಿ.31ರಂದು 120.21 ಕೋಟಿ ರೂ. ಮೌಲ್ಯದ 2.23 ಲಕ್ಷ ಬಾಕ್ಸ್ ಐಎಂಎಲ್ ಹಾಗೂ 30.73 ಕೋಟಿ ರೂ.ಮೌಲ್ಯದ 1.73 ಲಕ್ಷ ಬಾಕ್ಸ್ ಬಿಯರ್ ಸೇರಿ ಒಟ್ಟು 150.94 ಕೋಟಿ ರೂ.ಮೌಲ್ಯದ ಮದ್ಯ ಮಾರಾಟವಾಗಿದೆ. 2018ರ ಡಿ.31ರಂದು 18.50 ಲಕ್ಷ ಬಾಕ್ಸ್ ಐಎಂಎಲ್ ಹಾಗೂ 1.48 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು.

    4 ದಿನದಲ್ಲಿ 571 ಕೋಟಿ ಮದ್ಯ ವಹಿವಾಟು: ಕಳೆದ 4 ದಿನಗಳಲ್ಲಿ 571 ಕೋಟಿ ರೂ. ಮದ್ಯ ವಹಿವಾಟು ನಡೆದಿದೆ. ಕಳೆದ 2 ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮದ್ಯ ವಹಿವಾಟು ಏರಿಕೆಯಾಗಿದೆ. ಡಿ.28ರಂದು 166.65 ಕೋಟಿ ರೂ.ಮೌಲ್ಯದ 3.57 ಲಕ್ಷ ಬಾಕ್ಸ್ ಐಎಂಎಲ್ ಹಾಗೂ 39.56 ಕೋಟಿ ರೂ.ಮೌಲ್ಯದ 2.25 ಲಕ್ಷ ಬಾಕ್ಸ್ ಬಿಯರ್, ಡಿ.29ರಂದು 131.41 ಕೋಟಿ ರೂ.ಮೌಲ್ಯದ 2.61 ಲಕ್ಷ ಬಾಕ್ಸ್ ಐಎಂಎಲ್ ಹಾಗೂ 31.25 ಕೋಟಿ ರೂ.ಮೌಲ್ಯದ 1.77 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ. ಡಿ.30ರಂದು 40.27 ಕೋಟಿ ರೂ.ಮೌಲ್ಯದ 59 ಸಾವಿರ ಬಾಕ್ಸ್ ಐಎಂಎಲ್, 10.44 ಕೋಟಿ ರೂ.ಮೌಲ್ಯದ 56 ಸಾವಿರ ಬಾಕ್ಸ್ ಬಿಯರ್ ಹಾಗೂ 120.21 ಕೋಟಿ ರೂ. ಮೌಲ್ಯದ 2.23 ಲಕ್ಷ ಬಾಕ್ಸ್ ಐಎಂಎಲ್ ಹಾಗೂ 30.73 ಕೋಟಿ ರೂ.ಮೌಲ್ಯದ 1.73 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ.

    22,700 ಕೋಟಿ ರೂ ಗುರಿ: 2020-21 ಸಾಲಿನಲ್ಲಿ ಅಬಕಾರಿ ಇಲಾಖೆಗೆ ಸರ್ಕಾರ 22,700 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ ನೀಡಿದೆ. ಕಳೆದ ಬಾರಿ ಈ ಅವಧಿಗೆ ಹೋಲಿಸಿದರೆ ಒಟ್ಟು ಆದಾಯದಲ್ಲಿ ತುಸು ಹಿಂದಿದೆ. ಆದರೂ. ಕರೊನಾ ಸಂಕಷ್ಟದಲ್ಲಿಯೂ ಆರ್ಥಿಕ ವರ್ಷ ತುಂಬುವ ವೇಳೆಗೆ ಸರ್ಕಾರ ನೀಡಿದ ಗುರಿಯನ್ನು ಮುಟ್ಟುವ ನಿರೀಕ್ಷೆ ಇದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts