More

    ವ್ಯಾಪಾರಿಗೆ 2 ಲಕ್ಷ ರೂ. ದೋಖಾ

    ಶಿವಮೊಗ್ಗ: ಚಿನ್ನದ ಮೇಲೆ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸಿ ಎಂದು ಆಸೆ ಹುಟ್ಟಿಸಿ ವ್ಯಾಪಾರಿಯೊಬ್ಬರಿಗೆ 2 ಲಕ್ಷ ರೂ. ವಂಚಿಸಲಾಗಿದೆ.

    ನಗರದ ವ್ಯಾಪಾರಿಯೊಬ್ಬರ ಮೊಬೈಲ್‌ಗೆ ಚಿನ್ನಾಭರಣ ಸಂಸ್ಥೆಯೊಂದರ ಹೆಸರಿನಲ್ಲಿ ಟೆಲಿಗ್ರಾಂ ಆಪ್ಲಿಕೇಷನ್‌ಗೆ ಮೆಸೇಜ್ ಬಂದಿತ್ತು. ಅದರಲ್ಲಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಚಿನ್ನದ ಮೇಲೆ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸಬಹುದೆಂದು ಸೂಚಿಸಲಾಗಿತ್ತು. ಟೆಲಿಗ್ರಾಂನಲ್ಲಿ ಅಲೀನಾ ಹೆಸರಿನಲ್ಲಿ ಮೆಸೇಜ್ ಮಾಡಿ ಹೂಡಿಕೆ ಕುರಿತು ಮಾಹಿತಿ ನೀಡಲಾಗಿತ್ತು.
    ಹಣ ಹೂಡಿಕೆ ಮಾಡಿ ಪ್ರತಿದಿನ 8 ಸಾವಿರ ರೂ. ಕಮಿಷನ್ ಪಡೆಯಬಹುದು ಎಂದು ನಂಬಿಸಿದ್ದು ವ್ಯಾಪಾರಿ 2 ಲಕ್ಷ ರೂ. ಹಣ ಹೂಡಿಕೆ ಮಾಡಿದ್ದರು. ಆದರೆ ಹಣವನ್ನು ವಿತ್ ಡ್ರಾ ಮಾಡಲು ಸಾಧ್ಯವಾಗಲಿಲ್ಲ. ಈ ಕುರಿತು ಅಲೀನಾಗೆ ಟೆಲಿಗ್ರಾಂ ಮಾಡಿದಾಗ ವಿತ್ ಡ್ರಾ ಮಾಡಲು 5 ಸಾವಿರ ರೂ. ಪಾವತಿಸಬೇಕು ಎಂದು ತಿಳಿಸಲಾಗಿತ್ತು. ಅನುಮಾನಗೊಂಡ ಶಿವಮೊಗ್ಗದ ವ್ಯಾಪಾರಿ ಕೊನೆಗೆ ದೂರು ನೀಡಿದ್ದಾರೆ. ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts