More

    ಆಸ್ಕರ್​ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲು ರಾಜಮೌಳಿ ಮಾಡಿದ ಖರ್ಚೆಷ್ಟು?

    ಹೈದರಾಬಾದ್​: 95ನೇ ಆಸ್ಕರ್ಸ್​ ಪ್ರಶಸ್ತಿ ಪ್ರದಾನ ಸಮಾರಂಭ ಕಳೆದ ವಾರವಷ್ಟೇ ಮುಗಿದಿದ್ದು, ಈ ಪೈಕಿ ಭಾರತಕ್ಕೆ ಎರಡು ಪ್ರಶಸ್ತಿಗಳು ಸಿಕ್ಕಿವೆ. ‘RRR’ ಚಿತ್ರದ ‘ನಾಟು ನಾಟು’ ಹಾಡು ಅತ್ಯುತ್ತಮ ಎಂದನಿಸಿಕೊಂಡರೆ, ‘ದಿ ಎಲಿಫೆಂಟ್​ ವಿಸ್ಪರರ್ಸ್​’ ಎಂಬ ಸಾಕ್ಷ್ಯಚಿತ್ರವು ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಸಮಾರಂಭದಲ್ಲಿ ‘RRR’ ಚಿತ್ರತಂಡದವರು ಹಾಜರಿದ್ದು, ಪ್ರಶಸ್ತಿ ಪಡೆದ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಮತ್ತು ಗೀತರಚನೆಕಾರ ಚಂದ್ರಬೋಸ್​ ಅವರನ್ನು ಪ್ರೋತ್ಸಾಹಿಸಿದರು.

    ಇದನ್ನೂ ಓದಿ: ‘ಲವ್​ 360’ ಪ್ರವೀಣ್​ ಈಗ ‘ದೇಸಾಯಿ’; ಬಾಗಲಕೋಟೆಯಲ್ಲಿ ಚಿತ್ರ ಪ್ರಾರಂಭ

    ಈ ಪೈಕಿ, ಚಿತ್ರತಂಡದಿಂದ ಸಮಾರಂಭಕ್ಕೆ ಆಹ್ವಾನ ಸಿಕ್ಕಿದ್ದು ಕೇವಲ ಕೀರವಾಣಿ ಮತ್ತು ಚಂದ್ರಬೋಸ್​ ಅವರಿಗೆ ಮಾತ್ರವಂತೆ. ಅವರಿಬ್ಬರೂ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರಿಂದ ಅವರಿಗೆ ಸಮಾರಂಭದಲ್ಲಿ ಭಾಗವಹಿಸುವುದಕ್ಕೆ ಉಚಿತ ಪಾಸ್​ ನೀಡಲಾಯಿತಂತೆ. ಮಿಕ್ಕಂತೆ RRR ಚಿತ್ರತಂಡದವರೆಲ್ಲ ದೊಡ್ಡ ಮೊತ್ತ ಖರ್ಚು ಮಾಡಿ, ಸಮಾರಂಭದಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಹೌದು, ಮೂಲಗಳ ಪ್ರಕಾರ ಆಸ್ಕರ್ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕೆ ಒಂದು ಟಿಕೆಟ್​ಗೆ 25 ಸಾವಿರ ಡಾಲರ್​ ನಿಗದಿಪಡಿಸಲಾಗಿತ್ತಂತೆ. ಇದನ್ನು ಭಾರತೀಯ ರೂಪಾಯಿಯಲ್ಲಿ ಲೆಕ್ಕ ಹಾಕಿದ್ದರೆ. 20 ಲಕ್ಷದಷ್ಟಾಗುತ್ತದೆ. ಈ ಸಮಾರಂಭದಲ್ಲಿ ರಾಜಮೌಳಿ ಅಲ್ಲದೆ, ‘RRR’ ಚಿತ್ರದ ನಾಯಕರಾದ ಜ್ಯೂನಿಯರ್​ ಎನ್​.ಟಿ.ಆರ್​, ರಾಮ್​ಚರಣ್​ ತೇಜ ಸೇರಿದಂತೆ ಹಲವರು ಭಾಗವಹಿಸಿದ್ದರು. ರಾಜಮೌಳಿ ಅವರೇ ಅವರೆಲ್ಲರ ಟಿಕೆಟ್​ ಮೊತ್ತವನ್ನು ಭರಿಸಿದ್ದಾರೆ ಎಂದು ಹೇಳಲಾಗಿದ್ದು, ಅದಕ್ಕಾಗಿಯೇ ಅವರು ಎರಡ್ಮೂರು ಕೋಟಿಗಳನ್ನು ಎತ್ತಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ವೈಭವ್​ ಈಗ ರವಿ … ಹೊಸ ಚಿತ್ರದಲ್ಲಿ ’ಅಪ್ಪು ಅಭಿಮಾನಿ’

    ಅಷ್ಟು ಖರ್ಚು ಮಾಡಿ ಸಮಾರಂಭಕ್ಕೆ ಹೋದರೂ, ಚಿತ್ರತಂಡದವರಿಗೆ ಬಹಳ ಹಿಂದೆ ಸೀಟು ಸಿಕ್ಕಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಕೇಳಿಬರುತ್ತಿದ್ದು, ಅಷ್ಟು ದುಡ್ಡು ಕೊಟ್ಟು ಹೋಗಿದ್ದಕ್ಕಾದರೂ ‘RRR’ ಚಿತ್ರತಂಡದವರಿಗೆ ಒಳ್ಳೆಯ ಜಾಗ ಕೊಡಬೇಕಿತ್ತು ಎಂದು ಹಲವು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಉರಿಗೌಡ-ನಂಜೇಗೌಡ ನಮಗೆ ಹೆಮ್ಮೆ, ಆದರೆ…; ಸಿನಿಮಾ ಚಿತ್ರಕಥೆ ಬಗ್ಗೆ ಅಶ್ವತ್ಥ ನಾರಾಯಣ್ ಹೇಳಿದ್ದಿಷ್ಟು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts