More

    ಜಪಾನ್​ನಲ್ಲಿ ರಜನಿಕಾಂತ್​ ಚಿತ್ರವನ್ನು ಹಿಂದಿಕ್ಕಿ ಹೊಸ ದಾಖಲೆ ಬರೆದ ‘RRR’

    ಟೋಕಿಯೋ: ರಾಜಮೌಳಿ ನಿರ್ದೇಶನದ ‘ಆರ್​.ಆರ್.ಆರ್’ ಚಿತ್ರವು ಕೆಲವು ತಿಂಗಳುಗಳ ಹಿಂದೆ ಜಪಾನ್​ನಲ್ಲಿ ಬಿಡುಗಡೆಯಾಗುತ್ತದೆ ಎಂದು ಸುದ್ದಿಯಾದಾಗ, ಅದು ರಜನಿಕಾಂತ್ ಬರೆದ ದಾಖಲೆಯನ್ನು ಮುರಿಯುತ್ತದಾ? ಎಂಬ ಪ್ರಶ್ನೆ ಎಲ್ಲರಿಗೂ ಇದ್ದೇ ಇತ್ತು. ಆ ಪ್ರಶ್ನೆಗೂ ಕೊನೆಗೂ ಉತ್ತರ ಸಿಕ್ಕಿದೆ. ರಜನಿಕಾಂತ್​ ಚಿತ್ರದ ದಾಖಲೆಯನ್ನು ಮುರಿದಿರುವ ‘ಆರ್​.ಆರ್.ಆರ್’, ಜಪಾನ್​ನಲ್ಲಿ ಹೊಸ ದಾಖಲೆಯೊಂದನ್ನು ಬರೆದಿದೆ.

    ಇದನ್ನೂ ಓದಿ: ರಿಷಭ್​ ಶೆಟ್ಟಿ ಕಂಡರೆ ಹೊಟ್ಟೆಕಿಚ್ಚಂತೆ! ಕಾಂತಾರ ಯಶಸ್ಸಿನ ಬಗ್ಗೆ ನವಾಜುದ್ದೀನ್​ ಸಿದ್ದಿಖಿ ಆಡಿದ ಮಾತುಗಳಿವು…

    ರಜನಿಕಾಂತ್​ ಅವರಿಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟ ಚಿತ್ರವೆಂದರೆ ಅದು ‘ಮುತ್ತು’. ಈ ಚಿತ್ರವು ಭಾರತದಲ್ಲಷ್ಟೇ ಅಲ್ಲ, ಜಪಾನ್​ನಲ್ಲೂ ಬಿಡುಗಡೆಯಾಗಿ ದೊಡ್ಡ ಜಯ ಸಾಧಿಸಿತ್ತು. ಅಷ್ಟೇ ಅಲ್ಲ, ಈ ಚಿತ್ರದ ನಂತರ ಜಪಾನ್​ನಲ್ಲಿ ರಜನಿಕಾಂತ್​ ಅವರಿಗೆ ದೊಡ್ಡ ಅಭಿಮಾನಿ ವೃಂದ ಹುಟ್ಟಿಕೊಂಡಿತ್ತು.

    ಅಲ್ಲಿನ ಬಾಕ್ಸ್​-ಆಫೀಸ್​ ಸುದ್ದಿಯ ಪ್ರಕಾರ ‘ಮುತ್ತು’ ಚಿತ್ರವು 23.50 ಕೋಟಿ ರೂ.ಗಳನ್ನು ಆಗ ಸಂಪಾದಿಸಿತ್ತಂತೆ. ಆದರೆ, ‘ಆರ್​.ಆರ್.ಆರ್’ ಚಿತ್ರವು 400 ಮಿಲಿಯನ್​ ಯೆನ್​ ಅಥವಾ 24.10 ಕೋಟಿ ರೂ.ಗಳನ್ನು ಸಂಪಾದಿಸುವ ಮೂಲಕ ‘ಮುತ್ತು’ ಚಿತ್ರದ ದಾಖಲೆಯನ್ನು ಮುರಿದಿದೆ. ಅಷ್ಟೇ ಅಲ್ಲ, ಜಪಾನ್​ನಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

    ಇದನ್ನೂ ಓದಿ: ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿಲ್ಲ ರಶ್ಮಿಕಾ ಅಭಿನಯದ ಎರಡನೇ ಬಾಲಿವುಡ್​ ಚಿತ್ರ … ಯಾಕೆ?

    ರಾಜಮೌಳಿ ನಿರ್ದೇಶನದ ‘ಆರ್​.ಆರ್.ಆರ್’ ಚಿತ್ರಕ್ಕೆ ಜಗತ್ತಿನಾದ್ಯಂತ ಮೆಚ್ಚುಗೆ ವ್ಯಕ್ತವಾಗಿದ್ದು, ಚಿತ್ರವು ಆಸ್ಕರ್​ ಪ್ರಶಸ್ತಿಗೆ ಒಟ್ಟು 15 ವಿಭಿನ್ನ ವಿಭಾಗಗಳಿಗೆ ನಾಮನಿರ್ದೇಶನಗೊಂಡಿದೆ. ಇದಲ್ಲದೆ ಗೋಲ್ಡನ್​ ಗ್ಲೋಬ್​ ಪ್ರಶಸ್ತಿಗಳಿಗೆ ಚಿತ್ರವು ಎರಡು ವಿಭಾಗಗಳಲ್ಲಿ ನಾಮಿನೇಟ್​ ಆಗಿದೆ.

    ನನ್ನ ಸಿನಿಮಾ, ನನ್ನ ಹಾಡು, ಯಾರೂ ಬಳಸುವಂತಿಲ್ಲ … ‘ಸ್ವಾತಿಮುತ್ತಿನ ಮಳೆ ಹನಿಯೇ’ ಟೈಟಲ್ ಕೊಡಲ್ಲ ಎಂದ ಬಾಬು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts