More

    ವಿಶ್ವ ನಂ. 1 ಆಲ್ರೌಂಡರ್ ಐಪಿಎಲ್‌ಗೆ ಬರುವುದೇ ಅನುಮಾನ

    ದುಬೈ: ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ಹಾಲಿ ವಿಶ್ವ ಕ್ರಿಕೆಟ್‌ನಲ್ಲಿ ನಂ. 1 ಆಲ್ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ. ಆದರೆ ಈ ಬಾರಿ ಅವರು ಐಪಿಎಲ್‌ನಲ್ಲಿ ಆಡಲು ಆಗಮಿಸುವ ಬಗ್ಗೆಯೇ ಅನುಮಾನ ಮೂಡಿದೆ. ರಾಜಸ್ಥಾನ ರಾಯಲ್ಸ್ ತಂಡದ ಜತೆಗೆ 12.5 ಕೋಟಿ ರೂಪಾಯಿ ಮೊತ್ತದ ಬೃಹತ್ ಒಪ್ಪಂದವನ್ನು ಹೊಂದಿರುವ ಸ್ಟೋಕ್ಸ್, ವೈಯಕ್ತಿಕ ಕಾರಣಗಳಿಗಾಗಿ ಐಪಿಎಲ್‌ಗೆ ಅಲಭ್ಯರಾಗುವ ಸಾಧ್ಯತೆ ಕಾಣಿಸಿದೆ.

    ಬೆನ್ ಸ್ಟೋಕ್ಸ್ ಟೂರ್ನಿಗೆ ಲಭ್ಯರಾಗುವರೇ ಎಂಬ ಬಗ್ಗೆ ತಮಗೆ ಸ್ಪಷ್ಟತೆ ಇಲ್ಲ ಎಂದು ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯ ಕೋಚ್ ಆಂಡ್ರೋ ಮೆಕ್‌ಡೊನಾಲ್ಡ್ ಅವರೇ ಮಂಗಳವಾರ ಹೇಳಿದ್ದಾರೆ. ಇದರಿಂದಾಗಿ ಸ್ಟೋಕ್ಸ್ ಈಗಾಗಲೆ ಟೂರ್ನಿಯಿಂದ ಹೊರಗುಳಿದಿರುವ ಸುರೇಶ್ ರೈನಾ, ಲಸಿತ್ ಮಾಲಿಂಗ, ಹರ್ಭಜನ್ ಸಿಂಗ್ ಅವರಂಥ ಸ್ಟಾರ್ ಆಟಗಾರರ ಪಟ್ಟಿಗೆ ಸೇರ್ಪಡೆಗೊಳ್ಳುವ ಅಪಾಯ ಕಾಣಿಸಿದೆ.

    ಬೆನ್ ಸ್ಟೋಕ್ಸ್ ಅವರ ತಂದೆ ಜೆಡ್ ಮೆದುಳು ಕ್ಯಾನ್ಸರ್‌ಗಾಗಿ ಈಗ ನ್ಯೂಜಿಲೆಂಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರೊಂದಿಗೆ ಇರುವ ಸಲುವಾಗಿ ಸ್ಟೋಕ್ಸ್ ಕಳೆದ ತಿಂಗಳು ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯ ನಡುವೆಯೇ ತೆರಳಿದ್ದರು.

    ಇದನ್ನೂ ಓದಿ: ಐಪಿಎಲ್ ಪಂದ್ಯಗಳನ್ನು ಯಾವೆಲ್ಲ ಚಾನಲ್‌ಗಳಲ್ಲಿ ನೋಡಬಹುದು ಗೊತ್ತೇ?

    ಕಳೆದ ವರ್ಷ ಇಂಗ್ಲೆಂಡ್ ತಂಡದ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಸ್ಟೋಕ್ಸ್ ಅಲಭ್ಯರಾದರೆ ರಾಜಸ್ಥಾನ ರಾಯಲ್ಸ್ ತಂಡ ದೊಡ್ಡ ಹಿನ್ನಡೆಯಲ್ಲೇ ಎದುರಿಸಲಿದೆ. ಈ ಮುನ್ನ ಅವರು ತಡವಾಗಿ ತಂಡವನ್ನು ಕೂಡಿಕೊಳ್ಳುವರು ಎಂದು ಹೇಳಲಾಗಿತ್ತು.

    ಚೀನಾ ಹೂಡಿಕೆಯ ಕಂಪನಿಗೆ ಪ್ರಚಾರ, ಸಚಿನ್ ವಿರುದ್ಧ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts