More

    ಫುಟ್‌ಬಾಲ್ ಸ್ಟೇಡಿಯಮ್​ನಲ್ಲಿ ರೌಡಿಯ ಚೆಂಡಾಡಿ ಕೊಂದರು!; ಕೆಎಸ್‌ಎಫ್​​ಎ ರೆಫ್ರಿ ಕೊಠಡಿಯಲ್ಲಿ ಅಡಗಿದ್ದರೂ ಬಿಡದ ಪುಂಡರು..

    ಬೆಂಗಳೂರು: ಫುಟ್​ಬಾಲ್​ ಆಟವಾಡಲು ಬಂದಿದ್ದ ರೌಡಿಶೀಟರ್‌ನನ್ನು ದುಷ್ಕರ್ಮಿಗಳು ಕೊಠಡಿ ಬಾಗಿಲು ಮುರಿದು ಒಳನುಗ್ಗಿ, ಚೆಂಡಾಡಿ ಹತ್ಯೆ ಮಾಡಿದ್ದಾರೆ.
    ಕಮಿಷನರೇಟ್ ರಸ್ತೆ ಶಾಂತಲನಗರದಲ್ಲಿ ಇರುವ ರಾಜ್ಯ ಫುಟ್‌ಬಾಲ್ ಅಸೋಸಿಯೇಷನ್ (ಕೆಎಸ್‌ಎಫ್​ಎ) ಆವರಣದಲ್ಲಿ ಭಾನುವಾರ ಮಧ್ಯಾಹ್ನ 4 ಗಂಟೆಯಲ್ಲಿ ಈ ಕೃತ್ಯ ನಡೆದಿದೆ.

    ಪುಲಿಕೇಶಿನಗರದ ಅರವಿಂದ್ ಅಲಿಯಾಸ್ ಲೀ (30) ಮೃತಪಟ್ಟ ರೌಡಿ. ಹಳೇ ವೈಷಮ್ಯಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಐದಾರು ಮಂದಿಯ ಗ್ಯಾಂಗ್ ದಾಳಿ ನಡೆಸಿರುವುದು ಮಾಹಿತಿ ಲಭ್ಯವಾಗಿದ್ದು, ಬಂಧನಕ್ಕೆ ಬಲೆಬೀಸಲಾಗಿದೆ ಕೇಂದ್ರ ವಿಭಾಗ ಡಿಸಿಪಿ ಎಂ.ಎನ್. ಅನುಚೇತ್ ತಿಳಿಸಿದ್ದಾರೆ.
    ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ ಅರವಿಂದ್ ವಿರುದ್ಧ ರೌಡಿ ಪಟ್ಟಿ ತೆರೆಯಲಾಗಿತ್ತು. ಅಲ್ಲದೆ, ಭಾರತೀನಗರ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇತ್ತೀಚೆಗೆ ಜಾಮೀನು ಪಡೆದು ಹೊರಬಂದ ಅರವಿಂದ್, ಫುಟ್‌ಬಾಲ್ ತಂಡವೊಂದರ ವ್ಯವಸ್ಥಾಪಕನಾಗಿದ್ದ.

    ಇದನ್ನೂ ಓದಿ: ‘ರಾಣಿ’ಯನ್ನು ಕೊಂದು ಹೂತಿಟ್ಟ ಭೂಪ; ದೇವಸ್ಥಾನದಲ್ಲೂ ಕದ್ದು ಸಿಕ್ಕಿಬಿದ್ದ; ಇಂದು ಆಕೆಯ ಶವ ಹೊರತೆಗೆದ ಪೊಲೀಸರು..

    ಭಾನುವಾರ ಫುಟ್‌ಬಾಲ್ ಪಂದ್ಯವಿದ್ದ ಕಾರಣಕ್ಕೆ ಸ್ನೇಹಿತರ ಜತೆ ಕೆಎಸ್‌ಎಫ್​ಎ ಮುಂಭಾಗದ ಬಿಬಿಎಂಪಿ ಮೈದಾನಕ್ಕೆ ಬಂದಿದ್ದ. ಪಂದ್ಯ ಮುಗಿದ ಮೇಲೆ ಪಕ್ಕದಲ್ಲಿದ್ದ ಅಂಗಡಿಯಲ್ಲಿ ಜ್ಯೂಸ್ ಕುಡಿಯುತ್ತಿದ್ದಾಗ ಏಕಾಏಕಿ ಐದಾರು ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ಹಿಡಿದು ದಾಳಿ ನಡೆಸಿದ್ದರು.

    ಪ್ರಾಣ ಭಯದಿಂದಾಗಿ ಹಂತಕರಿಂದ ತಪ್ಪಿಸಿಕೊಂಡ ಅರವಿಂದ್ ಕೆಎಸ್‌ಎಫ್​ಎ ಆವರಣಕ್ಕೆ ತೆರಳಿ ರೆಫ್ರಿ ಕೊಠಡಿ ಒಳ ಪ್ರವೇಶಿಸಿ ಲಾಕ್ ಮಾಡಿಕೊಂಡಿದ್ದ. ಆದರೂ ಬಿಡದ ಆರೋಪಿಗಳು ಬಾಗಿಲು ಮುರಿದು ಒಳನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವ ಉಂಟಾಗಿ ಅರವಿಂದ್ ಸ್ಥಳದಲ್ಲೇ ಅಸುನೀಗಿದ್ದಾನೆ.

    ಇದನ್ನೂ ಓದಿ: ಎರಡನೇ ಮದ್ವೆಯಾಗಿ ಹೊಸ ಜೀವನದ ಕನಸು ಕಂಡಿದ್ದವಳು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ಯಾಗ್ ಕದ್ದು ಜೈಲುಪಾಲಾದ್ಲು…

    ವಿಷಯ ತಿಳಿದ ಅಶೋಕನಗರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಶವವನ್ನು ತೆರವು ಮಾಡಿದ್ದಾರೆ. ಹಂತಕರ ಸುಳಿವು ಲಭ್ಯವಾಗಿದೆ. ಬಂಧನಕ್ಕೆ 2 ವಿಶೇಷ ತಂಡ ರಚನೆ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಶೋಕನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

    ಜೊಮ್ಯಾಟೊದಿಂದ ಇನ್ನುಮುಂದೆ ಈ ಸೇವೆ ಇರುವುದಿಲ್ಲ; ಸೆ.17ರಿಂದಲೇ ಅನ್ವಯ..

    ಮಹಿಳೆ ಸತ್ತು 4 ತಿಂಗಳಾಗಿತ್ತು; ಮೊನ್ನೆ ಎರಡನೇ ಡೋಸ್ ಲಸಿಕೆಯೂ ಆಯ್ತು, ಪ್ರಮಾಣಪತ್ರವೂ ಬಂತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts