More

    ಕೊನೆಗೂ ಸೆರೆಯಾಯ್ತು ರೌಡಿ ಕೋತಿ !

    ಧಾರವಾಡ: ನಾಲ್ಕೈದು ದಿನಗಳಿಂದ ರೌಡಿಯಂತೆ ಸಾರ್ವಜನಿಕರಿಗೆ ಉಪಟಳ ಕೊಡುತ್ತ, ಅರಣ್ಯ ಇಲಾಖೆ ಸಿಬ್ಬಂದಿಗೂ ಚಳ್ಳೆಹಣ್ಣು ತಿನ್ನಿಸಿ ಓಡಾಡುತ್ತಿದ್ದ ಒಂಟಿ‌ ಕೋತಿಯನ್ನು ಇಂದು(ಶನಿವಾರ) ಸೆರೆ ಹಿಡಿಯಲಾಗಿದೆ.

    ಇದನ್ನೂ ಓದಿರಿ ಕ್ವಾರಂಟೈನ್​ ಕೇಂದ್ರದಲ್ಲಿ ಕಾಂಡೋಮ್ ರಾಶಿ!

    ಧಾರವಾಡದ ಮದಿಹಾಳ ಮತ್ತು ಡಿಪೋ ಸರ್ಕಲ್ ಏರಿಯಾದಲ್ಲಿ ಓಡಾಡುತ್ತಿದ್ದ ಒಂಟಿ‌ ಕೋತಿ ನಾಲ್ಕೈದು ದಿನದಿಂದ 20ಕ್ಕೂ ಹೆಚ್ಚು ಜನರನ್ನು ಕಚ್ಚಿ ಗಾಯಗೊಳಿತ್ತು. ಸಾರ್ವಜನಿಕರ ಮೇಲೆ ಏಕಾಏಕಿ ದಾಳಿ ಮಾಡುತ್ತಿದ್ದ ಈ ಮಂಗ ಸ್ಥಳೀಯರ ಪಾಲಿಗೆ ರೌಡಿ ಕೋತಿಯೇ ಆಗಿತ್ತು.

    ಇದನ್ನೂ ಓದಿರಿ ನಾಳೆ ಲಾಕ್​ಡೌನ್​ ಇರಲ್ಲ!

    ಈ ಕೋತಿಯನ್ನು ಸೆರೆ ಹಿಡಿಯಲು ಶುಕ್ರವಾರದಿಂದ ನಿರಂತರ ಕಾರ್ಯಾಚರಣೆ ನಡೆಸಲಾಗಿದ್ದು, ಶನಿವಾರ ಬೆಳಗ್ಗೆ ಸಿಕ್ಕಿದೆ. ಈ ನಡುವೆ ಎರಡು ಸಲ ಬಲೆಗೆ ಬಿದ್ದರೂ ಕೋತಿ ಎಸ್ಕೇಪ್​ ಆಗಿತ್ತು. ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ಮುಂದುವರಿಸಿದ ಅರಣ್ಯ ಸಿಬ್ಬಂದಿ ಕೊನೆಗೂ ಕೋತಿಯನ್ನು ಸೆರೆ ಹಿಡಿದರು. ಅದಕ್ಕೆ ಮಂಪರು ಇಂಜೆಕ್ಷನ್ ಕೊಟ್ಟು ಕರೆದೊಯ್ದರು.

    ರೌಡಿ ಕೋತಿ ಸೆರೆ ಸಿಕ್ಕಿದ್ದು ಹೀಗೆ ನೋಡಿ !

    ಈ ಹಿಂದೆ ಎರಡು ಬಾರಿ ಬಲೆಗೆ ಬಿದ್ದು ತಪ್ಪಿಸಿಕೊಂಡಿದ್ದ ರೌಡಿ ಕೋತಿಯನ್ನು ಇಂದು (ಶನಿವಾರ) ಸೆರೆ ಹಿಡಿಯಲಾಗಿದೆ. ಧಾರವಾಡ ಮದಿಹಾಳ ಮತ್ತು ಡಿಪೋ ಸರ್ಕಲ್ ಬಳಿ ನಾಲ್ಕೈದು ದಿನಗಳಿಂದ 20ಕ್ಕೂ ಹೆಚ್ಚು ಜನರನ್ನು ಕಚ್ಚಿದ್ದ ಒಂಟಿ ಕೋತಿಯ ಉಪಟಳಕ್ಕೆ ಇಡೀ ಏರಿಯಾ ಜನತೆ ಭೀತಿಗೊಂಡಿದ್ದರು. #Dharwad #Monkey #Arrested #Forest

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶನಿವಾರ, ಮೇ 30, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts