More

    ಊಟ ಮಾಡಲೆಂದು ಹೋಟೆಲ್​ಗೆ ಬಂದಿದ್ದ ರೌಡಿಶೀಟರ್​ನ ಬರ್ಬರ ಹತ್ಯೆ

    ಬೆಂಗಳೂರು: ಆಗಷ್ಟೇ ಹೋಟೆಲ್​ನಲ್ಲಿ ಊಟ ಮಾಡಿಕೊಂಡು ಹೊರ ಬಂದ ರೌಡಿಶೀಟರ್​ನನ್ನು ಇನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ಮನಸೋಇಚ್ಛೆ ದಾಳಿ ಮಾಡಿ ಸ್ಥಳದಲ್ಲೇ ಕೊಂದುಹಾಕಿದೆ.

    ಮೈಸೂರು ರಸ್ತೆ ಕೆಂಗೇರಿ ಬಳಿಯ ಚೆಕ್​ಪೋಸ್ಟ್​ ಸಮೀಪ ಶುಕ್ರವಾರ ರಾತ್ರಿ ರೌಡಿಶೀಟರ್​ ಬೆಸ್ತಮಾನಹಳ್ಳಿಯ ಸುನೀಲ್​ ಕುಮಾರ್​(30) ಎಂಬಾತನನ್ನು ಹತ್ಯೆ ಮಾಡಲಾಗಿದೆ. ಹಲವು ಅಪರಾಧ ಪ್ರಕರಣಗಳಲ್ಲಿ ಜೈಲಿಗೆ ಹೋಗಿದ್ದ ಸುನೀಲ್​ ಕುಮಾರ್​ ಜಾಮೀನು ಪಡೆದು ಹೊರಬಂದಿದ್ದ. ನಿನ್ನೆ(ಶುಕ್ರವಾರ) ರಾತ್ರಿ 8 ಗಂಟೆ ಸುಮಾರಿನಲ್ಲಿ ಸುನೀಲ್, ತನ್ನ ಕಾರು ಚಾಲಕನೊಂದಿಗೆ ಮೈಸೂರು ರಸ್ತೆ ಕೆಂಗೇರಿ ಬಳಿಯ ಕದಂಬ ಹೋಟೆಲ್​ಗೆ ಉಪಹಾರ ಸೇವಿಸಲು ಬಂದಿದ್ದ. ಹೋಟೆಲ್​ನಿಂದ ವಾಪಸ್​ ತೆರಳಲು ಕಾರು ಹಿಂದಕ್ಕೆ ತೆಗೆಯುತ್ತಿದ್ದ ವೇಳೆ ಇನೋವಾ ಕಾರಿನಲ್ಲಿ ಬಂದ ಆರೇಳು ಮಂದಿಯ ತಂಡ ಏಕಾಏಕಿ ಮಾರಕಾಸ್ತ್ರಗಳಿಂದ ಸುನೀಲ್​ ಮೇಲೆ ದಾಳಿ ಮಾಡಿತು. ಕಾರಿನ ಗಾಜು ಪುಡಿಪುಡಿ ಮಾಡಿ ಸುನೀಲ್​ನನ್ನು ಹೊರಕ್ಕೆ ಎಳೆದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಸುನೀಲ್​ ಮೇಲಿನ ದಾಳಿ ತಡೆಯಲು ಯತ್ನಿಸಿದ ಚಾಲಕನ ಮೇಲೂ ಹಲ್ಲೆಯಾಗಿದ್ದು, ಜಿಗಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ತೀವ್ರ ಗಾಯಗೊಂಡ ಸುನೀಲ್​ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಇದನ್ನೂ ಓದಿರಿ ಹಳೇ ಲವ್​ ವಿಷ್ಯ ಮುಚ್ಚಿಹಾಕಲು ಉದ್ಯಮಿ ಜತೆ ಅಕ್ರಮ ಸಂಬಂಧ ಬೆಳೆಸಿ ಮತ್ತೆ ಪೇಚಿಗೆ ಸಿಲುಕಿದ್ಳು!

    ಆನೇಕಲ್​, ಹೊಸಕೋಟೆ, ಅತ್ತಿಬೆಲೆ ಸುತ್ತಮುತ್ತಲ ಪ್ರದೇಶದಲ್ಲಿ ಹಲವು ದುಷ್ಕೃತ್ಯದಲ್ಲಿ ತೊಡಗಿದ್ದ ಸುನೀಲ್​ ವಿರುದ್ಧ ಅತ್ತಿಬೆಲೆ ಮತ್ತು ಆನೇಕಲ್​ ಠಾಣೆಯಲ್ಲಿ ರೌಡಿಶೀಟರ್​ ತೆರೆಯಲಾಗಿತ್ತು.
    ಹಲವು ಅಪರಾಧ ಪ್ರಕರಣಗಳಲ್ಲಿ ಜೈಲಿಗೆ ಹೋಗಿದ್ದ ಸುನೀಲ್​, ಜಾಮೀನು ಪಡೆದು ಹೊರಬಂದ ಮೇಲೆ ಹಳೇ ಚಾಳಿ ಬಿಟ್ಟಿರಲಿಲ್ಲ. 2019ರಲ್ಲಿ ನ್ಯಾಯ ಪಂಚಾಯಿತಿ ನೆಪದಲ್ಲಿ ಸ್ನೇಹಿತ ಜಯಂತ್​ ಎಂಬಾತನನ್ನು ಕರೆದು ಹತ್ಯೆ ಮಾಡಿದ್ದ. ಈ ಕೇಸಿನಲ್ಲಿ ಸುನೀಲ್​ ಎ1 ಆರೋಪಿಯಾಗಿದ್ದ.

    ಹಳೇ ದ್ವೇಷಕ್ಕೆ ದುಷ್ಕರ್ಮಿಗಳು ಹತ್ಯೆ ಮಾಡಿರುವ ಸಾಧ್ಯತೆ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕುಂಬಳಗೂಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ರಾಮನಗರ ಎಸ್​ಪಿ ಡಾ. ಅನೂಪ್​ ಶೆಟ್ಟಿ ಪರಿಶೀಲನೆ ನಡೆಸಿದರು. ಸುನೀಲ್​ ಕುಮಾರ್​ ಹತ್ಯೆ ಪ್ರಕರಣದ ಆರೋಪಿಗಳ ಪತ್ತೆಗೆ ಕುಂಬಳಗೂಡು ಠಾಣೆಯಲ್ಲಿ ವಿಶೇಷ ತಂಡ ರಚಿಸಲಾಗಿದೆ ಎಂದು ಎಸ್​ಪಿ ತಿಳಿಸಿದ್ದಾರೆ.

    ದೇವಸ್ಥಾನದಲ್ಲಿ ಪೂಜೆ ಮಾಡುತ್ತಿರುವಾಗಲೇ ಅರ್ಚಕ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts