More

  ಹುಬ್ಬಳ್ಳಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸ

  ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಪುಡಿ ರೌಡಿಗಳು ಅಟ್ಟಹಾಸ ಮೆರೆದಿದ್ದಾರೆ. ಕೆಲ ತಿಂಗಳ ಹಿಂದೆ ಹೋಟೆಲ್‌ವೊಂದರಲ್ಲಿ ಊಟದ ವಿಷಯವಾಗಿ ಎರಡು ಗುಂಪುಗಳ ಮಧ್ಯೆ ಮಾರಾಮರಿ ನಡೆದಿತ್ತು. ಈಗ ಮತ್ತೆ ಅಂಥದ್ದೇ ಘಟನೆ ವಿದ್ಯಾನಗರದ ಹೋಟೆಲ್‌ನಲ್ಲಿ ನಡೆದಿದೆ.

  ಪುಡಿ ರೌಡಿ ವಿಜಯ ಬಿಜವಾಡ ಹಾಗೂ ಸಂಗಡಿಗರು ವಿವಿನ್ ರಾಜು ರಿಚರ್ಡ್ ಎಂಬುವರ ಮೇಲೆ ಹಲ್ಲೆ ಮಾಡಿದ್ದಲ್ಲದೆ ಕೊಠಡಿಯಲ್ಲಿರಿಸಿರುವುದು ಬಯಲಾಗಿದೆ. ಸೋಮವಾರ ರಾತ್ರಿ ಹೋಟೆಲ್‌ನಲ್ಲಿ ಊಟ ಮಾಡಿ ಗೆಳೆಯರೊಂದಿಗೆ ವಿವಿನ್ ಮಾತನಾಡುತ್ತ ನಿಂತಿದ್ದ. ಮೂವರು ಗೆಳೆಯರೊಂದಿಗೆ ಆಗಮಿಸಿದ ವಿಜಯ ಬಿಜವಾಡ ವೃಥಾ ಜಗಳ ತೆಗೆದಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಮುಖ, ಬೆನ್ನು ಹಾಗೂ ಹೊಟ್ಟೆಗೆ ಹೊಡೆದಿದ್ದಾರೆ. ಅಲ್ಲದೆ ಕಾರಿನಲ್ಲಿ ವೀರಾಪೂರ ಓಣಿಗೆ ಕರೆದುಕೊಂಡು ಹೋಗಿ ಕೊಠಡಿಯೊಂದರಲ್ಲಿ ಕೂಡಿಹಾಕಿದ್ದಾರೆ. ಮತ್ತಿಬ್ಬರು ಗೆಳೆಯರನ್ನು ಕರೆಯಿಸಿದ ವಿಜಯ, ವಿವಿನ್ ಮೇಲೆ ಮತ್ತೆ ಹಲ್ಲೆ ಮಾಡಿದ್ದಾರೆ. ಕೊಲೆ ಮಾಡುವ ಉದ್ದೇಶದಿಂದ ಮಾರಾಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ವಿವಿನ್ ದೂರಿನಲ್ಲಿ ವಿವರಿಸಿದ್ದಾರೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ನಿಯಂತ್ರಣ ಅಗತ್ಯ

  ಈಗೀಗ ಹುಬ್ಬಳ್ಳಿಯಲ್ಲಿ ರೌಡಿಗಳ ದರ್ಬಾರು ಜೋರಾಗಿದೆ. ಸೆಟ್ಲಮೆಂಟ್ ಏರಿಯಾದಲ್ಲಿ ಯುವಕನೊಬ್ಬನನ್ನು ಬೆತ್ತಲೆಗೊಳಿಸಿದ್ದ ಗುಂಪು, ಅಮಾನವೀಯವಾಗಿ ಮೆರೆದಿತ್ತು. ಕಳ್ಳತನ, ಗಾಂಜಾ ಮಾರಾಟ, ಜೂಜಾಟ ಪ್ರಕರಣಗಳು ಹೆಚ್ಚುತ್ತಿವೆ. ಪುಡಿ ರೌಡಿಗಳ ನಿಯಂತ್ರಣ ಕ್ಕೆ ಪೊಲೀಸರು ಮೂಗುದಾರ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts