More

    ರೊಟ್ಟಿ, ಕರಿಹಿಂಡಿ ತಿಂದು ಸಂಭ್ರಮಿಸಿದ ಜನ

    ಶಿರೋಳ: ಗ್ರಾಮದ ಶ್ರೀ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವ ನಿಮಿತ್ತ ಬುಧವಾರ ರೊಟ್ಟಿ ಜಾತ್ರೆ ಜರುಗಿತು. ಮಠದಲ್ಲಿ ಸಂಜೆ ಮಹಾಪೂಜೆ ನೆರವೇರಿಸುವ ಮೂಲಕ ರೊಟ್ಟಿ ಜಾತ್ರೆಗೆ ಹುಬ್ಬಳ್ಳಿ ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಚಾಲನೆ ನೀಡಿದರು.

    ಸುಮಾರು 10 ಸಾವಿರ ಜನರು ರೊಟ್ಟಿ, ಕರಿಹಿಂಡಿ, ಬಾನ, ಅಗಸಿ ಚಟ್ನಿ, 10 ತರದ ಕಾಳು ಪಲ್ಲೆಯನ್ನು ಸವಿದರು. ಶಿರೋಳ ತೋಂಟದಾರ್ಯ ಮಠದ ಗುರುಬಸವ ಮಹಾಸ್ವಾಮಿಗಳು, ಹಿರೇಮಠದ ಅಪ್ಪಯ ಹಿರೇಮಠ, ರುದ್ರಯ್ಯ ಹಿರೇಮಠ, ವೀರಯ್ಯ ಹಿರೇಮಠ, ಮಾಜಿ ಶಾಸಕ ಬಿ.ಆರ್. ಯಾವಗಲ್, ಉಮೇಶಗೌಡ ಪಾಟೀಲ, ಪ್ರಕಾಶಗೌಡ ತಿರಕನಗೌಡ್ರ, ಬಸಯ್ಯ ಮಠದ, ಶಿವಯೋಗಿ ಶಾಂತಗೇರಿ, ಶಿವಕುಮಾರ ವಸ್ತ್ರದ, ಮುತ್ತಪ್ಪ ಕುರಿಯವರ, ಯಮನಪ್ಪ ಕಾಡಪ್ಪನವರ, ಬಾಬುಗೌಡ ತಿರಕನಗೌಡ್ರ, ಬಾಪುಗೌಡ ತಿಮ್ಮನಗೌಡ್ರ, ಶಿರೋಳ, ಕಪ್ಪಲಿ, ಕಲ್ಲಾಪುರ, ನಾಗನೂರ, ಭೂಪಳಾಪುರ, ಖಾನಾಪುರ, ಗಂಗಾಪುರ, ಗುಳಗಂದಿ, ಕರಕಿಕಟ್ಟಿ, ಮೆಣಸಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಪಾಲ್ಗೊಂಡಿದ್ದರು.

    ಜಾನುವಾರು ಪ್ರದರ್ಶನ: ಫೆ. 4ರಂದು ಬೆಳಗ್ಗೆ 10ಕ್ಕೆ ಗ್ರಾಮದಲ್ಲಿ ಜಾನುವಾರು ಪ್ರದರ್ಶನ, 11ಕ್ಕೆ ಸಂಗ್ರಾಣಿ ಕಲ್ಲು ಸಿಡಿ ಹೊಡೆಯುವುದು, ಸಂಜೆ 4ಕ್ಕೆ ಲಘು ರಥೋತ್ಸವ, 7ಕ್ಕೆ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾದ ಯೋಗಪಟುಗಳಿಗೆ ಸನ್ಮಾನ, ರಾತ್ರಿ 10ಕ್ಕೆ ಗುರು ಮೆಲೋಡಿಸ್ ಶಿರೋಳ ವತಿಯಿಂದ ಸಂಗೀತ ಸಂಜೆ ಕಾರ್ಯಕ್ರಮ ಜರುಗಲಿದೆ.

    ರಕ್ತದಾನದಿಂದ ಆರೋಗ್ಯ ಸುಧಾರಣೆ: ನಿಯಮಿತ ರಕ್ತ ದಾನದಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ಆರೋಗ್ಯ ಸುಧಾರಣೆಯಾಗುತ್ತದೆ ಎಂದು ಶಿರೋಳ ತೋಂಟದಾರ್ಯ ಮಠದ ಗುರುಬಸವ ಸ್ವಾಮೀಜಿ ಹೇಳಿದರು.

    ಗ್ರಾಮದ ತೋಂಟದಾರ್ಯ ಜಾತ್ರಾ ಮಹೋತ್ಸವ ಅಂಗವಾಗಿ ಶಿರೋಳ ಔಷಧ ವರ್ತಕರ ಸಂಘ, ಗುರುಬಸವ ಜನ ಕಲ್ಯಾಣ ಸಂಸ್ಥೆ, ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್್ಸ) ಹುಬ್ಬಳ್ಳಿ, ಶಿರೋಳ ವಾಸಂತಿ ಕಣ್ಣಿನ ತಪಾಸಣೆ ಕೇಂದ್ರ ಆಶ್ರಯದಲ್ಲಿ ಏರ್ಪಡಿಸಿದ್ದ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

    ಪ್ರತಿ ವರ್ಷ ರಕ್ತದಾನ, ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ ಶಿಬಿರ ಮತ್ತಿತರ ಕಾರ್ಯಕ್ರಮಗಳು ನಡೆಯುತ್ತಿದ್ದು, ಜಾತ್ರೆಯ ಮೆರುಗು ಹೆಚ್ಚಿದಂತಾಗಿದೆ. ಜನಪರ ಕಾರ್ಯಗಳಿಂದ ಜನಪದ ಜಾತ್ರೆಯಾಗಿದೆ ಎಂದರು.

    ಶಿಬಿರದಲ್ಲಿ 20 ಜನರು ರಕ್ತದಾನ ಮಾಡಿದರು. 70 ಜನರ ನೇತ್ರ ತಪಾಸಣೆ ಮಾಡಲಾಯಿತು. ಹುಬ್ಬಳ್ಳಿ ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರ ಪಾದ ಪೂಜೆ ಮಾಡಿ ಜಂಗಮೋತ್ಸವ ನೆರವೇರಿಸಲಾಯಿತು.

    ಡಾ. ವೀರಣ್ಣ ಬ್ಯಾಳಿ, ತಾಪಂ ಸದಸ್ಯ ಪ್ರಕಾಶಗೌಡ ತಿರಕನಗೌಡ್ರ, ಬಿ.ಎಸ್. ಸಾಲಿಮಠ, ಚಂದ್ರಶೇಖರ ಹುಬ್ಬಳ್ಳಿ, ರಮಜಾನ್​ಸಾಬ್ ನದಾಫ್, ನಿತೀಶ ಕುಬಸದ, ಮಹಾಬಳೇಶ್ವರ ಕೋಡಬಳ್ಳಿ, ನಜೀರಸಾಬ್ ಚಳ್ಳಮರದ, ಬಸಯ್ಯ ಮಠದ, ಶಿವಯೋಗಿ ಶಾಂತಗೇರಿ, ಶಿವಕುಮಾರ ವಸ್ತ್ರದ, ಮುತ್ತಪ್ಪ ಕುರಿಯವರ, ಯಮನಪ್ಪ ಕಾಡಪ್ಪನವರ, ಬಾಬುಗೌಡ ತಿರಕನಗೌಡ್ರ, ಬಾಪುಗೌಡ ತಿಮ್ಮನಗೌಡ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts