More

    ರೋಟರಿ ಸಂಸ್ಥೆ ಸೇವಾ ಚಟುವಟಿಕೆ ನಿರಂತರ

    ಪಿರಿಯಾಪಟ್ಟಣ: ರೋಟರಿ ಸಂಸ್ಥೆ ಸೇವಾ ಚಟುವಟಿಕೆ ನಿರಂತರವಾಗಿ ಮುಂದುವರಿಯುತ್ತಲೇ ಇರುತ್ತದೆ ಎಂದು ಪಿರಿಯಾಪಟ್ಟಣ ರೋಟರಿ ಐಕಾನ್ಸ್ ನ ಅಧ್ಯಕ್ಷ ಕೆ.ರಮೇಶ್ ತಿಳಿಸಿದರು.

    ತಾಲೂಕಿನ ಹರಿಲಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಪಿರಿಯಾಪಟ್ಟಣ ರೋಟರಿ ಐಕಾನ್ಸ್ ವತಿಯಿಂದ ಊಟದ ತಟ್ಟೆಗಳನ್ನು ಶನಿವಾರ ವಿತರಿಸಿ ಮಾತನಾಡಿ, ವೈಯಕ್ತಿಕ ಹಿತಾಸಕ್ತಿಗಳನ್ನು ಇಟ್ಟುಕೊಂಡು ಯಾರೂ ದಾನ ಮಾಡಬಾರದು. ಸೇವಾ ಮನೋಭಾವನೆಯಿಂದ ಹೃದಯಪೂರ್ವಕವಾಗಿ ದಾನ ಮಾಡಿದಲ್ಲಿ ಮಾತ್ರ ಶ್ರೇಯಸ್ಸು ದೊರಕಲಿದೆ ಎಂದರು.

    ಶಿಕ್ಷಕರು ಹಿಂಜರಿಕೆ ಮನೋಭಾವವನ್ನು ಬಿಟ್ಟು ತಮ್ಮ ಶಾಲೆಯ ಮಕ್ಕಳಿಗೆ ಅಗತ್ಯವಿರುವ ಪರಿಕರಗಳನ್ನು ಪಡೆಯಲು ಸಂಘ ಸಂಸ್ಥೆಗಳಿಗೆ ಬೇಡಿಕೆಗಳನ್ನು ಸಲ್ಲಿಸಬೇಕು. ರೋಟರಿಯು ಶೈಕ್ಷಣಿಕ, ಆರೋಗ್ಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಹಲವು ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ವಿಶ್ವಮಾನ್ಯತೆ ಪಡೆದಿದೆ ಎಂದರು.

    ಶಾಲೆಯ ಮುಖ್ಯಶಿಕ್ಷಕ ಶ್ರೀನಿವಾಸಗೌಡ ಮಾತನಾಡಿ, ಯಾವುದೇ ಪ್ರತಿಫಲವನ್ನು ನಿರೀಕ್ಷಿಸದೆ ಮಾಡುವ ಸೇವೆಯು ಸಾರ್ಥಕತೆಯನ್ನು ನೀಡಲಿದೆ. ಎಲ್ಲರಲ್ಲೂ ಕೊಡುಗೆ ನೀಡಬೇಕೆನ್ನುವ ಮನೋಭಾವವಿರುವುದಿಲ್ಲ. ದಾನ ಮಾಡುವುದಕ್ಕಿಂತ ದಂಡ ತೆರುವವರ ಸಂಖ್ಯೆಯೇ ಹೆಚ್ಚಿದೆ ಎಂದರು.
    ತಾಲೂಕಿನಲ್ಲಿ 300ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿದ್ದರೂ ರೋಟರಿ ಐಕಾನ್ಸ್ ಸಂಸ್ಥೆಯು ನಮ್ಮ ಶಾಲೆ ಆಯ್ದುಕೊಂಡಿರುವುದು ಸಂತಸದ ವಿಷಯವಾಗಿದೆ ಎಂದರು.

    ಶಾಲೆಯ 35ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಊಟದ ತಟ್ಟೆಗಳನ್ನು ನೀಡಲಾಯಿತು. ರೋಟರಿ ಐಕಾನ್ಸ್ ಸದಸ್ಯರಾದ ಸಿ.ಎನ್.ವಿಜಯ್, ಎಚ್.ಪಿ.ಪರಮೇಶ್, ಡಿ.ರಮೇಶ್, ಎಚ್.ಎಸ್.ನಾಗರಾಜು, ಎಚ್.ಟಿ.ಪರಮೇಶ್, ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಜಗದೀಶ್, ಶಿಕ್ಷಕ ನಾಗೇಂದ್ರ ಸೇರಿದಂತೆ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts