More

    ಮನಸ್ಸು ಸ್ವಸ್ಥವಾಗಿದ್ದರೆ ರೋಗ ಸುಳಿಯದು


    ಮೈಸೂರು : ನಮ್ಮ ಮನಸ್ಸು ಸ್ವಸ್ಥವಾಗಿದ್ದರೆ ಯಾವುದೇ ರೋಗಗಳು ನಮ್ಮ ಬಳಿ ಸುಳಿಯುವುದಿಲ್ಲ ಎಂದು ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಅಭಿಪ್ರಾಯಪಟ್ಟರು.
    ಮಾನಸಿಕ ಸ್ವಾಸ್ಥ್ಯ, ನೀರಿನ ಸಂರಕ್ಷಣೆ ಮತ್ತು ಗಿಡ ಮರಗಳನ್ನು ಬೆಳೆಸುವ ಕುರಿತು ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ರೋಟರಿ ಜಿಲ್ಲೆ 3181ಯಿಂದ ಇತ್ತೀಚೆಗೆ ಪಿರಿಯಾಪಟ್ಟಣ ರೋಟರಿ ಐಕಾನ್ಸ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.


    ಚಿತೆ ಮತ್ತು ಚಿಂತೆಯ ನಡುವೆ ಒಂದು ಸೊನ್ನೆಯ ವ್ಯತ್ಯಾಸ ಇದೆ. ಚಿತೆ ಶವವನ್ನು ಸುಟ್ಟರೆ, ಚಿಂತೆ ಜೀವಂತ ವ್ಯಕ್ತಿಯನ್ನೇ ಸುಡುತ್ತದೆ. ಸಂತೋಷದಿಂದ ಇದ್ದಲ್ಲಿ ಯಾವುದೇ ರೀತಿಯ ಮಾನಸಿಕ ವ್ಯಥೆಯೂ ನಮ್ಮನ್ನು ಕಾಡದು. ಮಾನಸಿಕ ಶಕ್ತಿಯು ನಮಗೆ ವಿಶೇಷವಾದ ಚೈತನ್ಯವನ್ನು ನೀಡುತ್ತದೆ. ಯಾವುದೇ ಒತ್ತಡದ ಪರಿಸ್ಥಿತಿ ಎದುರಾದಲ್ಲಿ ಉದ್ವೇಗಕ್ಕೆ ಒಳಗಾಗದೆ ಶಾಂತಚಿತ್ತದಿಂದ ಇತರರೊಂದಿಗೆ ಚರ್ಚಿಸಿ ಸಲಹೆ, ಸೂಚನೆಗಳನ್ನು ಪಡೆಯುವುದು ಅತ್ಯವಶ್ಯಕವಾಗಿದೆ ಎಂದರು.


    ರೋಟರಿ ಐಕಾನ್ಸ್ ಸಂಸ್ಥೆಯ ಅಧ್ಯಕ್ಷ ಕೆ.ರಮೇಶ್, ನಿಯೋಜಿತ ಅಧ್ಯಕ್ಷ ಜೆ.ಎಸ್.ನಾಗರಾಜ್, ಸದಸ್ಯರಾದ ಸಿ.ಎನ್.ವಿಜಯ್, ಡಿ.ರಮೇಶ್, ಎಂ.ಬಿ.ಸಂಪತ್, ಮಾದು, ಕೆ.ಆರ್.ಕೆಂಪಣ್ಣ, ನವೀನ್ ಕುಮಾರ್, ರೋಟರಿ ಜಿಲ್ಲಾ ಪದಾಧಿಕಾರಿಗಳಾದ ಸತೀಶ್ ಬೋಲಾರ್, ಕಿರಣ್ ಪ್ರಸಾದ್ ರೈ, ಗೋಪಾಲಕೃಷ್ಣ ಶೆಟ್ಟಿ, ಡಾ.ಅನಂತನ್, ವಿನೋದ್ ಕುಡುವ, ಪಿ.ಡಿ.ಶೆಟ್ಟಿ, ಶಿವಾನಿ ಬಾಳಿಗ, ಸುಬೋಧ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts