More

    ಪ್ಲಾಸ್ಟಿಕ್ ಮಿತಬಳಕೆ ಕಾಳಜಿ ಮೂಡಲಿ

    ಶೃಂಗೇರಿ: ಪ್ಲಾಸ್ಟಿಕ್‌ಮುಕ್ತ ಶೃಂಗೇರಿ ಎಂಬುದು ಸರ್ವರ ಧ್ಯೇಯವಾದಾಗ ಮಾತ್ರ ಪರಿಸರ ಸೌಂದರ್ಯ ಹೆಚ್ಚಿ ಆರೋಗ್ಯಕರ ವಾತಾವರಣ ಕಾಣಲು ಸಾಧ್ಯ ಎಂದು ರೋಟರಿ ಸಂಸ್ಥೆ ಮಾಜಿ ಕಾರ್ಯದರ್ಶಿ ಸುಬ್ರಹ್ಮಣ್ಯ ಅಂಬಲಮನೆ ತಿಳಿಸಿದರು.
    ಶಾರದಾ ನಗರ ನಿವಾಸಿಗಳು ಭಾನುವಾರ ಆಯೋಜಿಸಿದ್ದ ಸ್ವಚ್ಛ ಶಾರದಾನಗರ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೀದಿಗಳಲ್ಲಿ ಅಲ್ಲಲ್ಲಿ ಹರಡಿರುವ ಕಸ ಮತ್ತು ತ್ಯಾಜ್ಯ ಪ್ರಸ್ತುತ ನಾವು ಎದುರಿಸುತ್ತಿರುವ ಗಂಭೀರ ಸಮಸ್ಯೆ. ನಮ್ಮ ಮನೆ, ಕೆಲಸದ ಸ್ಥಳ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಮುಖ್ಯ ಎಂದರು.
    ಸ್ವಚ್ಛತೆಯೇ ದೈವಭಕ್ತಿ ಎಂದು ಗಾಂಧೀಜಿ ಹೇಳಿದ್ದಾರೆ. ಮರುಬಳಕೆಯ ಕಾಗದಚೀಲ ಅಥವಾ ಬಟ್ಟೆ ಚೀಲಗಳನ್ನು ನಾವು ಹೆಚ್ಚಾಗಿ ಬಳಸಬೇಕು. ಪ್ಲಾಸ್ಟಿಕ್ ಮಿತಬಳಕೆಯ ಪ್ರಜ್ಞೆ ಸರ್ವರಲ್ಲೂ ಮೂಡಬೇಕು ಎಂದು ಹೇಳಿದರು.
    ಸ್ವಚ್ಛತಾ ಅಭಿಯಾನದಲ್ಲಿ ಪಪಂ ಮಾಜಿ ಅಧ್ಯಕ್ಷ ನಾಗೇಶ್ ಕಾಮತ್, ಸುಮಾ ಸೋಮಶೇಖರ್, ಪತ್ರಕರ್ತ ಪ್ರಕಾಶ್ ಭಟ್, ಪಪಂ ಸದಸ್ಯರಾದ ಎಚ್.ಎಸ್.ವೇಣುಗೋಪಾಲ್, ಬಿ.ಅರುಣ್, ಇನ್ನರ್‌ವ್ಹೀಲ್ ಸಂಸ್ಥೆ ಅಧ್ಯಕ್ಷೆ ಸೌಮ್ಯಾ ವಿಜಯ್‌ಕುಮಾರ್, ಪಪಂ ಸಮುದಾಯ ಅಭಿವೃದ್ಧಿ ಅಧಿಕಾರಿ ಕುಪ್ಪೇರಾವ್ ಮೂರಾಮನಿ, ವೀಣಾ ಅರುಣ್, ಪ್ರಿಯದರ್ಶಿನಿ ಹೆಗ್ಗಡೆ, ಮೀನಾಶೆಟ್ಟಿ, ಲತಾ ಶ್ರೀನಿವಾಸ್, ಜಿ.ಎಸ್.ಶ್ಯಾನುಭೋಗ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts