More

    ರೋಟರಿ ಕ್ಲಬ್ ಸೇವೆ ಎಲ್ಲರಿಗೂ ಮಾದರಿ

    ಅಥಣಿ: ಜಗತನ್ನು ಕಾಡಿದ ಮಹಾಮಾರಿ ಕರೊನಾ ಸಮಯದಲ್ಲೂ ಅಥಣಿ ರೋಟರಿ ಕ್ಲಬ್ ಉತ್ತಮವಾಗಿ ಕಾರ್ಯ ನಿರ್ವಹಿಸಿರುವುದು ಹೆಮ್ಮೆಯ ಸಂಗತಿ ಎಂದು ಕೊಲ್ಲಾಪುರದ ರೋಟರಿ ಪ್ರಾಂತಪಾಲ ಸಂಗ್ರಾಮ ಪಾಟೀಲ ಹೇಳಿದ್ದಾರೆ.

    ಇಲ್ಲಿನ ಆರ್.ಎಚ್.ಕುಲಕರ್ಣಿ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿದ 2020-21ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, 21 ವರ್ಷಗಳಿಂದ ಉತ್ತಮ ಸೇವೆ ಮಾಡುತ್ತಿರುವ ಅಥಣಿ ರೋಟರಿ ಸಂಸ್ಥೆಯ ಕೆಲಸ ಶ್ಲಾಘನೀಯ ಎಂದರು.

    ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಮಾತನಾಡಿ, ಸರ್ಕಾರ ಮಾಡದ ಅನೇಕ ಕೆಲಸವನ್ನು ರೋಟರಿ ಸಂಸ್ಥೆ ಮಾಡಿದೆ. ರೋಟರಿ ಕ್ಲಬ್ ನಿರಂತರವಾಗಿ ಸಾಮಾಜಿಕ ಸೇವೆಯಲ್ಲಿದೆ ಎಂದರು. ನೂತನ ಅಧ್ಯಕ್ಷ ಮೇಘರಾಜ ಪರಮಾರ ಮಾತನಾಡಿ, ರಾಜಸ್ಥಾನದಲ್ಲಿ ಹುಟ್ಟಿದ ನನಗೆ ಬದುಕು ಕಟ್ಟಿಕೊಟ್ಟ ಅಥಣಿಯಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷನಾಗುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ ಎಂದು ತಿಳಿಸಿದರು.

    ನಿಕಟಪೂರ್ವ ಅಧ್ಯಕ್ಷ ಶ್ರೀಕಾಂತ ಅಥಣಿ, ಉತ್ಕರ್ಷಾ ಪಾಟೀಲ ಮಾತನಾಡಿದರು. ವಿದ್ಯಾವರ್ಧಕ ಶಾಲೆಗೆ 40 ಸಾವಿರ ರೂ.ಮೊತ್ತದ ಪ್ರೊಜೆಕ್ಟರ್ ದೇಣಿಗೆ ನೀಡಿದರು. ಪರಮಾರ ಅವರು ಕೃಷ್ಣ ಗೋಶಾಲೆಗೆ 10 ಸಾವಿರ ರೂ. ನೀಡಿದರು. ಕಾರ್ಯದರ್ಶಿಯಾಗಿ ಸಂತೋಷ ಬೋಮ್ಮಣವರ, ಖಜಾಂಚಿಯಾಗಿ ಪ್ರಭಾಕರ ಸತ್ತಿ ಪದಗ್ರಹಣ ಮಾಡಿದರು. ವಿಜಯಕುಮಾರ ಬುರ್ಲಿ, ಸಚಿನ ದೇಶಮಾನೆ, ಸುರೇಶ ಬಳೊಳ್ಳಿ, ಸಚಿನ ದೇಸಾಯಿ, ಭರತ ಸೋಮಯ್ಯ, ಅರುಣ ಯಲಗುದ್ರಿ, ಡಾ.ಪಿ.ಪಿ,ಮಿರಜ, ಡಾ.ಚಿದಾನಂದ ಮೇತ್ರಿ, ಡಾ.ಆನಂದ ಕುಲಕರ್ಣಿ, ಡಾ.ಅಮೃತ ಕುಲಕರ್ಣಿ, ಅನಿಲ ದೇಶಪಾಂಡೆ, ಪ್ರವೀಣ ಭಾಟೆ, ದೀಪಕ ಪಾಟೀಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts