More

    ಸಮಾಜ ಸೇವೆಗೆ ರೋಟರಿ ಕ್ಲಬ್ ಮಾದರಿ

    ಹಾನಗಲ್ಲ: ಅಧಿಕಾರದ ಆಸೆ, ಸ್ವಾರ್ಥಕ್ಕಿಂತ ಸೇವೆಯೇ ಮುಖ್ಯ ಎನ್ನುವ ಧ್ಯೇಯೋದ್ದೇಶ ಹೊಂದಿರುವ ಜಗತ್ತಿನ ಅತಿದೊಡ್ಡ ಸೇವಾ ಸಂಸ್ಥೆ ಎನಿಸಿರುವ ರೋಟರಿ ಕ್ಲಬ್ ತಾಲೂಕಿನಲ್ಲಿ ತನ್ನ ಸೇವಾ ಚಟುವಟಿಕೆ ಆರಂಭಿಸುತ್ತಿರುವುದು ಸಂತಸದ ಸಂಗತಿ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

    ಪಟ್ಟಣದಲ್ಲಿ ರೋಟರಿ ಕ್ಲಬ್ ಆಫ್ ಹಾನಗಲ್ಲ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ರೋಟರಿ ಕ್ಲಬ್ ಸಮಾಜ ಸೇವೆಗೆ ಮಾದರಿ. ದುರ್ಬಲ ಹಾಗೂ ಬಡ ವಿದ್ಯಾರ್ಥಿಗಳ ಏಳಿಗೆಗೆ ಸಂಸ್ಥೆ ಮೊದಲಿನಿಂದಲೂ ಶ್ರಮಿಸುತ್ತಿದೆ. ಉತ್ಸಾಹಿ ಪದಾಧಿಕಾರಿಗಳನ್ನು ಒಳಗೊಂಡ ಹೊಸ ತಂಡ ಸೇವಾ ಚಟುವಟಿಕೆಗೆ ಸಜ್ಜಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ತಾಲೂಕಿನಲ್ಲಿ ಶೈಕ್ಷಣಿಕ ಸೌಲಭ್ಯಗಳನ್ನು ಕಲ್ಪಿಸಿ ಗುಣಮಟ್ಟದ ಶಿಕ್ಷಣ ದೊರಕಿಸಬೇಕು ಎನ್ನುವ ಕಳಕಳಿಗೆ ರೋಟರಿ ಕ್ಲಬ್ ಕೈ ಜೋಡಿಸಬೇಕು ಎಂದರು.

    ಕ್ಲಬ್ ಅಧ್ಯಕ್ಷ ಡಾ. ಸುರೇಶ ಕಾಳಪ್ಪನವರ, ಕಾರ್ಯದರ್ಶಿ ಸಂತೋಷ ದೊಡ್ಡಮನಿ, ಸದಸ್ಯರಾದ ಡಾ. ಗಗನ ಮಾಳೋದೆ, ಡಾ.ಲೋಹಾರ, ಬಸವರಾಜ ಹಾದಿಮನಿ, ರಾಮು ಯಳ್ಳೂರ, ಎಂ.ಎಸ್. ಅಮರದ, ನಾಗರಾಜ ಹಾದಿಮನಿ, ಪಾಂಡುರಂಗ ನಾಗೋಜಿ, ಹರೀಶ ಕಿತ್ತೂರ, ನಾಗರಾಜ ಹಿರೇಗೌಡ, ವಿನಾಯಕ ಕಳಸೂರ, ತೀರ್ಥರಾಜ, ಮಂಜುನಾಥ ಶೆಟ್ಟರ್, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts