More

    ಕಮರೂರು ಶಾಲೆಗೆ 30 ಕುರ್ಚಿ ಕೊಡುಗೆ

    ಸೊರಬ: ಕಮರೂರು ಗ್ರಾಮದ ಯುವ ಮಿತ್ರರು ಹಾಗೂ ಹಳೇ ವಿದ್ಯಾರ್ಥಿಗಳು ಸೇರಿ ಕಮರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 30 ಕುರ್ಚಿಗಳನ್ನು ಸೋಮವಾರ ಕೊಡುಗೆಯಾಗಿ ನೀಡಿದರು. ಶಾಲೆಯ ಮುಖ್ಯ ಶಿಕ್ಷಕ ವಾಸುದೇವ್ ಮಾತನಾಡಿ, ಯುವ ಮಿತ್ರರ ಸೇವಾ ಭಾವದಿಂದ ಗ್ರಾಮೀಣ ಭಾಗದ ಶಾಲೆಗಳು ಭೌತಿಕವಾಗಿ ಹಾಗೂ ಶೈಕ್ಷಣಿಕವಾಗಿ ಬೆಳೆಯಲು ಸಾಧ್ಯ. ಇಂತಹ ಕಾರ್ಯಗಳಿಂದ ಶಾಲೆಯ ಅಭಿವೃದ್ಧಿ ಜತೆಗೆ ಸಮುದಾಯದೊಂದಿಗೆ ಬೆರೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಗ್ರಾಪಂ ಸದಸ್ಯ ಎಂ.ಕೆ.ದೇವರಾಜ್ ಕಮರೂರು ಮಾತನಾಡಿ, ನಾವು ಕಲಿತಂತಹ ಶಾಲೆ ಎಂಬ ಅಭಿಮಾನದಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಮ್ಮ ಗ್ರಾಮವೂ ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಗುತ್ತದೆ ಎಂದರು. ಶಿಕ್ಷಕರಾದ ಗಣೇಶ್ ಪ್ರಸಾದ್, ನಾಮದೇವ ನಾಯ್ಕ್, ಶ್ರೀಕೃಷ್ಣ, ಅಕ್ಷಯ್‌ಕುಮಾರ್, ಅತಿಥಿ ಶಿಕ್ಷಕರಾದ ಅಣ್ಣಪ್ಪ, ಕಾವ್ಯಾ, ಸುವರ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts