More

    ಪುಟ್ಟ ಮಕ್ಕಳ ಪ್ರಾಣದ ಜತೆ ಚಲ್ಲಾಟ, ಸರ್ಕಾರದ ಆದೇಶಕ್ಕೂ ಮುನ್ನವೇ ಸ್ಕೂಲ್ ಓಪನ್​!

    ವಿಜಯಪುರ: ಪ್ರಸಕ್ತ ಸಾಲಿನಲ್ಲಿ ಶಾಲೆಗಳನ್ನು ಪುನರಾರಂಭ ಮಾಡಬೇಕೋ-ಬೇಡವೋ? ಒಂದು ವೇಳೆ ಆರಂಭಸಿದರೂ ಅದು ಯಾವಾಗ? ಎಂಬ ಚಿಂತನೆಯಲ್ಲಿ ಸರ್ಕಾರ ಇದೆ. ಈ ನಿಟ್ಟಿನಲ್ಲಿ ಅಭಿಪ್ರಾಯ ಸಂಗ್ರಹಿಸಲು ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಜೂನ್ 10, 11, 12ರಂದು ಪಾಲಕರ ಸಭೆ ನಡೆಸುವಂತೆ ಸೂಚಿಸಿದೆ. ಆದರೆ, ಇದ್ಯಾವುದಕ್ಕೂ ಕ್ಯಾರೆ ಎನ್ನದ ಖಾಸಗಿ ಶಾಲೆಯೊಂದು ಪುಟ್ಟ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡಿದೆ!

    ಇದನ್ನೂ ಓದಿರಿ VIDEO| ಶಾಲೆಗಳ ಪುನರಾರಂಭದ ಬಗೆಗಿರುವ ಗೊಂದಲಗಳಿಗೆ ತೆರೆ ಎಳೆದ ಶಿಕ್ಷಣ ಸಚಿವರು

    ಸರ್ಕಾರದ ಆದೇಶ ಬರೋಕು ಮುನ್ನವೇ ಇಲ್ಲಿನ ರಹೀಂ ನಗರದ ರೋಸ್ ಲೈನ್ ನರ್ಸರಿ ಶಾಲೆಯು ಅನಧಿಕೃತವಾಗಿ ಇಂದು (ಗುರುವಾರ) ತರಗತಿ ನಡೆಸಿದೆ. ಪಾಲಕರಿಂದ ಶುಲ್ಕ ವಸೂಲಿ ಆರಂಭಿಸಿರುವ ಶಾಲೆಯಲ್ಲಿ 15ಕ್ಕೂ ಹೆಚ್ಚು ಮಕ್ಕಳು ಹಾಜರಿದ್ದರು. ಕರೊನಾ ಹರಡುವ ಆತಂಕ ಇದ್ದರೂ ಮಕ್ಕಳನ್ನು ಎಂದಿನಂತೆ ಕೂರಿಸಿ ಪಾಠ ಮಾಡಲಾಗುತಿತ್ತು. ಇಲ್ಲಿ ಕನಿಷ್ಠ ದೈಹಿಕ ಅಂತರದ ಬಗ್ಗೆಯೂ ಜಾಗ್ರತೆ ವಹಿಸಿರಲಿಲ್ಲ. ಕುರಿದೊಡ್ಡಿಯಂತೆ ಮಕ್ಕಳನ್ನು ಕೂರಿಸಲಾಗಿತ್ತು.

    ಇದನ್ನೂ ಓದಿರಿ ಜುಲೈ 1ಕ್ಕೆ ಶಾಲೆ ಆರಂಭ ಅನುಮಾನ? ಕ್ಲಾಸ್​ ಬೇಕಾ-ಬೇಡ್ವಾ ಪಾಲಕರೇ ನಿರ್ಧರಿಸ್ತಾರೆ..!

    ಪುಟಾಣಿ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ ಈ ನರ್ಸರಿ ಶಾಲಾ ಆಡಳಿತ ಮಂಡಳಿ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶಾಲಾ ಮಂಡಳಿಯವರನ್ನು ತರಾಟೆಗೆ ತೆಗೆದುಕೊಂಡ ಬಿಇಒ ನದಾಫ್, ಮಕ್ಕಳನ್ನು ಮನೆಗೆ ಕಳುಹಿಸಿದರು.

    ಇದನ್ನೂ ನೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts