More

    ಶಬರಿಮಲೆ ಅಯ್ಯಪ್ಪ ದೇವಳ ಮೇಲ್ಛಾವಣಿಯಲ್ಲಿ ಮಳೆ ನೀರು ಸೋರಿಕೆ

    ಕಾಸರಗೋಡು: ಶಬರಿಮಲೆಯ ಅಯ್ಯಪ್ಪ ದೇವಳದ ಸ್ವರ್ಣ ಕವಚದ ಗರ್ಭಗುಡಿಯಲ್ಲಿ ಮಳೆ ನೀರು ಸೋರಿಕೆಯಾಗುತ್ತಿದೆ. ಸ್ವರ್ಣ ಕವಚಕ್ಕೆ ಅಳವಡಿಸಿರುವ ಮೊಳೆಗೆ ತುಕ್ಕು ಹಿಡಿದಿದ್ದೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ.
    ಗರ್ಭಗುಡಿಯ ತೆಂಕು ಭಾಗದ ಛಾವಣಿಯಲ್ಲಿ ಸೋರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಈ ಭಾಗದ ಚಿನ್ನದ ತಗಡನ್ನು ಶಿಲ್ಪಿಗಳ ಸಹಾಯದಿಂದ ತೆರವುಗೊಳಿಸಿ ಪರಿಶೀಲಿಸಿದಾಗ ಮೊಳೆ ತುಕ್ಕು ಹಿಡಿದಿರುವುದು ಪತ್ತೆಯಾಗಿದೆ.

    ದೇವಸ್ವಂ ಬೋರ್ಡ್ ಅಧ್ಯಕ್ಷ ಕೆ.ಅನಂತಗೋಪನ್, ಶಬರಿಮಲೆ ವಿಶೇಷ ಆಯುಕ್ತ ಮನೋಜ್, ಮುಖ್ಯ ಅಭಿಯಂತ ಅಜಿತ್ ಕುಮಾರ್, ವಿಜಿಲೆನ್ಸ್ ಎಸ್.ಪಿ ಸುಬ್ರಹ್ಮಣ್ಯ, ಸ್ವರ್ಣಾಭರಣ ಆಯುಕ್ತ ಬೈಜು ನೇತೃತ್ವ ಹಾಗೂ ತಂತ್ರಿ ಕಂಠರರ್ ಮಹೇಶ್ ಮೋಹನರ್, ಮುಖ್ಯ ಅರ್ಚಕ ಎನ್.ಪರಮೇಶ್ವರನ್ ನಂಬೂದಿರಿ, ಗಿರೀಶ್ ಕುಮಾರ್ ಉಪಸ್ಥಿತಿಯಲ್ಲಿ ಈ ತಪಾಸಣಾ ಕಾರ್ಯ ನಡೆದಿದೆ.

    ಚಿನ್ನದ ಹಾಳೆ ಅಳವಡಿಸಲು ಬಳಸಿರುವ ಇತರ ಮೊಳೆಗಳನ್ನೂ ಪರಿಶೀಲಿಸಲು ತೀರ್ಮಾನಿಸಲಾಗಿದೆ. ಇವುಗಳನ್ನು ಆ.22ರಿಂದ ಬದಲಾಯಿಸುವ ಕೆಲಸ ನಡೆಯಲಿದೆ ಎಂದು ದೇವಸ್ವಂ ಬೋರ್ಡ್ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts