More

    VIDEO | ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಕ್ರಿಶ್ಚಿಯಾನೊ ರೊನಾಲ್ಡೊ ಗೋಲುಗಳ ಶತಕ!

    ಸ್ಟಾಕ್‌ಹೋಮ್: ಪೋರ್ಚುಗಲ್ ಸೂಪರ್‌ಸ್ಟಾರ್ ಕ್ರಿಶ್ಚಿಯಾನೊ ರೊನಾಲ್ಡೊ ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ 100 ಗೋಲು ಪೂರೈಸಿದ ಸಾಧನೆ ಮಾಡಿದ್ದಾರೆ. 35 ವರ್ಷದ ಅವರು ರಾಷ್ಟ್ರೀಯ ತಂಡದ ಪರ 100 ಗೋಲು ಸಿಡಿಸಿದ 2ನೇ ಆಟಗಾರ ಮತ್ತು ಯುರೋಪ್‌ನ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

    ನೇಷನ್ಸ್ ಲೀಗ್‌ನಲ್ಲಿ ಮಂಗಳವಾರ ನಡೆದ ಸ್ವೀಡನ್ ವಿರುದ್ಧದ ಪಂದ್ಯದಲ್ಲಿ ರೊನಾಲ್ಡೊ 2 ಗೋಲು ಸಿಡಿಸಿ ಪೋರ್ಚುಗಲ್‌ಗೆ 2-0 ಗೆಲುವು ತಂದರು. ಈ ವೇಳೆ 25 ಮೀಟರ್ ದೂರದಿಂದ ಕಿಕ್ ಮಾಡಿ ಸಿಡಿಸಿದ ಮೊದಲ ಗೋಲಿನ ವೇಳೆ ಶತಕ ಪೂರೈಸಿದ ಸಾಧನೆ ಮಾಡಿದರು.

    ಇರಾನ್ ಸ್ಟ್ರೈಕರ್ ಅಲಿ ಡೇಯಿ 109 ಗೋಲು ಸಿಡಿಸಿ ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಅತ್ಯಧಿಕ ಗೋಲು ಬಾರಿಸಿ ವಿಶ್ವದಾಖಲೆ ಹೊಂದಿದ್ದಾರೆ. ರೊನಾಲ್ಡೊ ಪೋರ್ಚುಗಲ್ ಪರ ಆಡಿದ 165ನೇ ಪಂದ್ಯದಲ್ಲಿ 100 ಗೋಲು ಪೂರೈಸಿದ್ದಾರೆ. ಡೇಯಿ 1993-2006ರ ಅವಧಿಯಲ್ಲಿ ಆಡಿದ 149 ಪಂದ್ಯಗಳಲ್ಲಿ 109 ಗೋಲು ಸಿಡಿಸಿದ್ದರು. ರೊನಾಲ್ಡೊ ಇನ್ನು 9 ಗೋಲು ಸಿಡಿಸಿದರೆ ವಿಶ್ವದಾಖಲೆಯ ಒಡೆಯರಾಗಲಿದ್ದಾರೆ.

    ಇದನ್ನೂ ಓದಿ: VIDEO | ಸ್ಟೀವನ್ ಸ್ಮಿತ್ ವಿವಾದಾತ್ಮಕ ಕ್ಯಾಚ್; ಔಟ್ ಅಥವಾ ಸಿಕ್ಸರ್?

    ಸತತ 17ನೇ ವರ್ಷ ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಕನಿಷ್ಠ 1 ಗೋಲು ಸಿಡಿಸಿದ ದಾಖಲೆ ರೊನಾಲ್ಡೊ ಅವರದಾಗಿದೆ. ಇದೀಗ ಒಟ್ಟು 101 ಗೋಲುಗಳ ಒಡೆಯರಾಗಿರುವ ರೊನಾಲ್ಡೊ ತಮ್ಮ ಪ್ರಬಲ ಪ್ರತಿ ಸ್ಪರ್ಧಿ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿಗಿಂತ (70) 31 ಅಧಿಕ ಗೋಲು ಸಿಡಿಸಿದ ಸಾಧನೆ ಮಾಡಿದ್ದಾರೆ. ಇದಲ್ಲದೆ ಫುಟ್‌ಬಾಲ್ ದಿಗ್ಗಜರಾದ ದೇಶಬಾಂಧವ ಡೀಗೊ ಮರಡೋನಾ (34) ಅವರಿಗಿಂತ 67, ಬ್ರೆಜಿಲ್‌ನ ಪೀಲೆ (77) ಅವರಿಗಿಂತ 34, ರೊನಾಲ್ಡೊ (62) ಅವರಿಗಿಂತ 39 ಮತ್ತು ಸಮಕಾಲೀನ ನೇಮರ್ (61) ಅವರಿಗಿಂತ 40 ಗೋಲು ಅಧಿಕ ಸಿಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts