More

    ರಾಹುಲ್​ ದ್ರಾವಿಡ್​ಗೆ ಕಾದಿದೆ ಟೀಮ್​ ಇಂಡಿಯಾ ಸರ್ಪ್ರೈಸ್​ ಗಿಫ್ಟ್​!

    ನವದೆಹಲಿ: ಟೀಮ್​ ಇಂಡಿಯಾದ ಸಂಪೂರ್ಣ ಜವಬ್ದಾರಿ ಹೊತ್ತಿರುವ ಮುಖ್ಯ​ ಕೋಚ್​ ರಾಹುಲ್​ ದ್ರಾವಿಡ್​ಗೆ ಈ ಬಾರಿ ಸರ್ಪ್ರೈಸ್​ ಗಿಫ್ಟ್​ ಒಂದು ಕಾದಿದೆ. ನಾಯಕ ರೋಹಿತ್​ ಶರ್ಮ ಸೇರಿದಂತೆ ತಂಡದ ಎಲ್ಲ ಆಟಗಾರರು ಸೇರಿ ದ್ರಾವಿಡ್​​ಗೆ ವೃತ್ತಿ ಜೀವನದಲ್ಲಿ ಎಂದೂ ಮರೆಯದ ಉಡುಗೊರೆಯೊಂದನ್ನು ನೀಡಲು ತೀರ್ಮಾನ ಮಾಡಿದ್ದಾರೆ. ನಿಜವಾಗಿಯೂ ಹೇಳಬೇಕೆಂದರೆ, ದ್ರಾವಿಡ್​ಗೆ ಇದಕ್ಕಿಂತ ದೊಡ್ಡ ಗಿಫ್ಟ್​ ಬೇರೆ ಯಾವುದೂ ಇಲ್ಲ ಅಂತಾನೇ ಹೇಳಬಹುದು. ಏಕೆಂದರೆ, ಈ ಗಿಫ್ಟ್​ ಹಲವರ ಜೀವನದ ಕನನಸಾಗಿದೆ. ಆದರೆ, ಇಂದು ಆ ಕನಸು ದ್ರಾವಿಡ್​ ಜೀವನದಲ್ಲಿ ನನಸಾಗುವ ಹಂತಕ್ಕೆ ಬಂದಿದೆ. ಹಾಗಾದ್ರೆ ಟೀಮ್​ ಇಂಡಿಯಾ ದ್ರಾವಿಡ್​​ಗೆ ಕೊಡಲಿರುವ ಆ ಸರ್ಪ್ರೈಸ್​ ಗಿಫ್ಟ್ ಯಾವುದು ಅಂತ ಯೋಚನೆ ಮಾಡುತ್ತಿದ್ದೀರಾ? ಉತ್ತರ ಮುಂದಿದೆ ಓದಿ.

    ವಿಶ್ವಕಪ್​ ಟೂರ್ನಿಯಲ್ಲಿ ಇದುವರೆಗೂ ಆಡಿದ 10 ಪಂದ್ಯಗಳಲ್ಲೂ ಭಾರತ ಗೆಲುವು ಸಾಧಿಸಿ, ಫೈನಲ್​ಗೆ ಲಗ್ಗೆ ಇಟ್ಟಿದೆ. ಟ್ರೋಫಿಯನ್ನು ಎತ್ತಿ ಹಿಡಿಯಲು ಇನ್ನೂ ಒಂದು ಹೆಜ್ಜೆ ಮಾತ್ರ ಬಾಕಿ ಇದ್ದು, ಅದಕ್ಕಾಗಿ ಟೀಮ್​ ಇಂಡಿಯಾ ಸಕಲ ತಯಾರಿ ಮಾಡಿಕೊಳ್ಳುತ್ತಿದೆ. ಲೀಗ್​ ಹಂತದಿಂದ ಫೈನಲ್​ ತಲುಪುವರೆಗೂ ಭಾರತ ಈ ಅತ್ಯದ್ಭುತ ಯಶಸ್ಸಿಗೆ ಹೆಡ್​ ಕೋಚ್​ ಕನ್ನಡಿಗ ರಾಹುಲ್​ ದ್ರಾವಿಡ್​​ ಕಾರಣ ಎಂದು ನಾಯಕ ರೋಹಿತ್​ ಶರ್ಮ ಹೇಳಿದ್ದಾರೆ. ಹೀಗಾಗಿ ಈ ಬಾರಿಯ ವಿಶ್ವಕಪ್​ ಟ್ರೋಫಿಯನ್ನು ದ್ರಾವಿಡ್​ಗೆ ಉಡುಗೊರೆಯಾಗಿ ನೀಡಲು ಟೀಮ್​ ಇಂಡಿಯಾ ನಿರ್ಧರಿಸಿದೆ.

    ನಾಳಿನ ಫೈನಲ್​ ಪಂದ್ಯಕ್ಕೂ ಮುನ್ನ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಹಿತ್​ ಶರ್ಮ, ತಂಡದ ಪ್ರತಿಯೊಬ್ಬ ಆಟಗಾರನಿಗೂ ತನ್ನದೇಯಾದ ಆಟವಾಡಲು ಸ್ವಾತಂತ್ರ್ಯ ನೀಡುವ ದ್ರಾವಿಡ್​​ ಅವರ ವಿಧಾನವನ್ನು ರೋಹಿತ್​ ಹೊಗಳಿದರು. ಸವಾಲಿನ ಸಂದರ್ಭಗಳಲ್ಲಿ ಪ್ರತಿ ಆಟಗಾರನಿಗೆ ದ್ರಾವಿಡ್​ ಅವರು ನೀಡುವ ಅಚಲ ಬೆಂಬಲವನ್ನು ಒತ್ತಿ ಹೇಳಿದರು. ಅಲ್ಲದೆ, ರಾಹುಲ್​ ದ್ರಾವಿಡ್​ಗಾಗಿ ವಿಶ್ವಕಪ್​ ಗೆಲ್ಲಲು ಬಯಸಿರುವುದಾಗಿ ತಿಳಿಸಿದ ರೋಹಿತ್​, ದ್ರಾವಿಡ್​ಗಾಗಿ ವಿಶ್ವಕಪ್ ಗೆಲ್ಲುವ ಬಹುದೊಡ್ಡ ಜವಾಬ್ದಾರಿ ಈಗ ತಂಡದ ಮೇಲಿದೆ ಎಂದರು.

    ಪ್ರಸಕ್ತ ಟೂರ್ನಿಯಲ್ಲಿ ಟೀಮ್​ ಇಂಡಿಯಾದ ಯಶಸ್ಸಿನಲ್ಲಿ ದ್ರಾವಿಡ್​ ಅವರ ಪಾತ್ರವು ಸಂಪೂರ್ಣವಾಗಿ ದೊಡ್ಡದಾಗಿದೆ. ಆ ಸ್ಪಷ್ಟತೆಯನ್ನು ಪಡೆದೇ ನಾನು ಅದರ ಬಗ್ಗೆ ಮಾತನಾಡುತ್ತಿದ್ದೇನೆ. ಕೆಲವು ವಿಚಾರಗಳನ್ನು ಕೋಚ್​ ಒಪ್ಪದೇ ಇದ್ದರೆ ಏನು ಮಾಡೋದು ಎಂಬ ಚಿಂತೆ ಎಲ್ಲರಂತೆ ನನಗೂ ಕಾಡಿತು. ರಾಹುಲ್ ಭಾಯ್​ ಅವರು ಕ್ರಿಕೆಟ್ ಅನ್ನು ಹೇಗೆ ಆಡಿದ್ದಾರೆ ಮತ್ತು ಈ ದಿನಗಳಲ್ಲಿ ನಾನು ಹೇಗೆ ಆಡುತ್ತಿದ್ದೇನೆ ಎಂದು ನಿಮಗೆಲ್ಲರಿಗೂ ತಿಳಿದಿದೆ. ನಿಜಕ್ಕೂ ಇದು ಸಾಕಷ್ಟು ವ್ಯತಿರಿಕ್ತವಾಗಿದೆ. ಆದರೆ, ಎಲ್ಲಿಯೂ ನಮ್ಮ ಮೇಲೆ ಕಮ್ಯಾಂಡ್​ ಮಾಡದೇ ನಮ್ಮದೇ ರೀತಿಯಲ್ಲಿ ನಾವು ಆಟವಾಡಲು ಸ್ವಾತಂತ್ರ್ಯ ನೀಡಿದರು. ಇದೇ ಗುಣ ಅವರು ಏನು ಎಂಬುದನ್ನು ಹೇಳುತ್ತದೆ ಎಂದು ರೋಹಿತ್​ ತಿಳಿಸಿದರು.

    ಟಿ20 ವಿಶ್ವಕಪ್​ನಲ್ಲಿ ಸೆಮಿಫೈನಲ್​ವರೆಗೆ ಹೋಗಿ ಅಲ್ಲಿ ಸೋತೆವು. ಇಂತಹ ಕಠಿಣ ಸಮಯದಲ್ಲೂ ಪ್ರತಿಯೊಬ್ಬ ಆಟಗಾರನ ಪರವಾಗಿ ದ್ರಾವಿಡ್​​ ನಿಂತುಕೊಂಡರು. ಕೆಲವು ಕಷ್ಟದ ಸಂದರ್ಭಗಳಲ್ಲಿ ಡ್ರಾವಿಡ್​ ಅವರು ಆಟಗಾರರೊಂದಿಗೆ ಪ್ರತಿಕ್ರಿಯಿಸುತ್ತಿದ್ದ ರೀತಿ ಆಟಗಾರರಿಗೆ ಸಾಕಷ್ಟು ಸಹಾಯ ಮಾಡಿದೆ. ದ್ರಾವಿಡ್​ ಅವರು ಈ ದೊಡ್ಡ ಸಂದರ್ಭದ (ವಿಶ್ವಕಪ್​) ಭಾಗವಾಗಲು ಬಯಸುತ್ತಾರೆ ಮತ್ತು ಅವರಿಗಾಗಿ ನಾವು ಅದನ್ನು ಮಾಡಬೇಕಾಗಿದೆ ಅಂದರೆ, ವಿಶ್ವಕಪ್​ ಗೆಲ್ಲಲೇಬೇಕಾಗಿದೆ ಎಂದು ರೋಹಿತ್​ ಹೇಳಿದರು.

    ತಂಡದಲ್ಲಿ ನಾನು ಮತ್ತು ರಾಹುಲ್ ಭಾಯ್ ಸೃಷ್ಟಿಸಿದ ವಾತಾವರಣದ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ. ಆಟಗಾರರು ಪಂದ್ಯದ ಹೊರಗಿನ ಗದ್ದಲ, ಟೀಕೆ ಅಥವಾ ಸ್ಕೋರ್‌ಗಳ ಬಗ್ಗೆ ಚಿಂತಿಸದೆ ಉತ್ತಮವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ರೋಹಿತ್​ ಹೇಳಿದರು.

    ನಾಳೆ ಫಿನಾಲೆ
    ಅಂದಹಾಗೆ ಭಾರತ ವಿಶ್ವಕಪ್​ ಟೂರ್ನಿಯಲ್ಲಿ ಲೀಗ್​ ಹಂತದಲ್ಲಿ 9 ಮತ್ತು ಒಂದು ಸೆಮಿಫೈನಲ್​ ಸೇರಿ ಆಡಿದ 10 ಪಂದ್ಯಗಳಲ್ಲೂ ಜಯ ಸಾಧಿಸಿದೆ. ಪ್ರತಿಯಾಗಿ ಆಸ್ಟ್ರೇಲಿಯಾ ತಂಡ 10 ಪಂದ್ಯಗಳಲ್ಲಿ ಎರಡರಲ್ಲಿ ಸೋತು ಉಳಿದ ಎಂಟು ಪಂದ್ಯಗಳಲ್ಲಿ ಜಯಸಿದೆ. ಅ.8ರಂದು ಚೆನ್ನೈ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಲೀಗ್​ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿತು. ಇದೀಗ ನಾಳೆ (ನ.19) ಗುಜರಾತಿನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್​ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿದ್ದು, ಟ್ರೋಫಿ ಯಾರಾ ಪಾಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಭಾರತ ಗೆದ್ದರೆ, ಟ್ರೋಫಿ ರೋಹಿತ್​ ಹೇಳಿದಂತೆ ದ್ರಾವಿಡ್​​ಗೆ ಗಿಫ್ಟ್​ ಆಗಲಿದೆ. ಭಾರತ ಗೆಲ್ಲಲಿ ಎಂದು ನಾವೆಲ್ಲರು ಪ್ರಾರ್ಥಿಸೋಣ. (ಏಜೆನ್ಸೀಸ್​)

    ವಿಶ್ವಕಪ್​ ಫಿನಾಲೆ: ರೋಹಿತ್​​ಗೆ ಕಾಡುತ್ತಿದೆ ಈ ಚಿಂತೆ, ಆದ್ರೂ ಆಸಿಸ್​ ಬಗ್ಗೆ ಸ್ಪಷ್ಟ ಅರಿವಿದೆ ಎಂದ ನಾಯಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts