More

    ರೋಹಿತ್-ರವೀಂದ್ರ ಶತಕದಬ್ಬರ: ರಾಜ್‌ಕೋಟ್‌ನಲ್ಲಿ ಭಾರತ ಪ್ರಾಬಲ್ಯ

    ರಾಜ್‌ಕೋಟ್: ನಾಯಕ ರೋಹಿತ್ ಶರ್ಮ (131 ರನ್, 196 ಎಸೆತ, 14 ಬೌಂಡರಿ, 3 ಸಿಕ್ಸರ್) ಜವಾಬ್ದಾರಿಯುತ ಶತಕದಾಟ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ (110* ರನ್, 212 ಎಸೆತ, 9 ಬೌಂಡರಿ, 2 ಸಿಕ್ಸರ್) ತವರಿನಲ್ಲಿ ಸಿಡಿಸಿದ 2ನೇ ಶತಕದ ನೆರವಿನಿಂದ ಆತಿಥೇಯ ಭಾರತ ತಂಡ ಮೂರನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ಎದುರು ಮೊದಲ ದಿನದ ಗೌರವ ಸಂಪಾದಿಸಿದೆ. ಆರಂಭಿಕ ಆಘಾತದಿಂದ ಚೇತರಿಸಿಕೊಂಡಿರುವ ಟೀಮ್ ಇಂಡಿಯಾ, ಆಂಗ್ಲರಿಗೆ ತಿರುಗೇಟು ನೀಡುವ ಮೂಲಕ ಬೃಹತ್ ಮೊತ್ತದತ್ತ ಸಾಗಿದೆ. ಪದಾರ್ಪಣೆಯ ಟೆಸ್ಟ್‌ನಲ್ಲೇ ಬಿರುಸಿನ ಅರ್ಧಶತಕ ಬಾರಿಸಿ ಮಿಂಚಿದ ರ್ಸ್ರಾಜ್ ಖಾನ್ (62 ರನ್, 66 ಎಸೆತ, 9 ಬೌಂಡರಿ, 1 ಸಿಕ್ಸರ್) ಕೂಡ ಮೊದಲ ದಿನದ ಹೈಲೈಟ್ ಎನಿಸಿದರು.

    https://x.com/ThakurArunS/status/1758100261900329105?s=20

    ಅಲ್ಪ ವಿರಾಮದ ಬಳಿಕ ನಿರಂಜನ್ ಷಾ ಕ್ರೀಡಾಂಗಣದಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಬ್ಯಾಟಿಂಗ್ ಆಯ್ದುಕೊಂಡರು. ಇನಿಂಗ್ಸ್‌ನ ಆರಂಭದಲ್ಲಿ ರೋಹಿತ್ ಆಯ್ಕೆ ಯಲ್ಲಿ ಎಡವಿದರೇ ಎಂಬ ಕಳವಳ ಮೂಡಿದರೂ, ರೋಹಿತ್-ಜಡೇಜಾ ಜೋಡಿಯ ದ್ವಿಶತಕದ ಜತೆಯಾಟ ಭಾರತವನ್ನು ಸುಸ್ಥಿತಿಗೆ ತಂದಿತು. ಚಹಾ ವಿರಾಮದ ಬಳಿಕ ರ್ಸಾಜ್ ಖಾನ್ ಬಿರುಸಿನ ಬ್ಯಾಟಿಂಗ್‌ನಿಂದ ಭಾರತ ಮತ್ತಷ್ಟು ಬಲಿಷ್ಠಗೊಂಡಿತು. ದಿನದಂತ್ಯಕ್ಕೆ ಭಾರತ 86 ಓವರ್‌ಗಳಲ್ಲಿ 5 ವಿಕೆಟ್‌ಗೆ 326 ರನ್‌ಗಳಿಸಿದ್ದು, ಶತಕವೀರ ರವೀಂದ್ರ ಜಡೇಜಾ ಜತೆಗೆ ನೈಟ್ ವಾಚ್‌ಮನ್ ಕುಲದೀಪ್ ಯಾದವ್ (1* ರನ್, 10 ಎಸೆತ) ಕ್ರೀಸ್‌ನಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts