More

    ಉಪನಾಯಕತ್ವದಿಂದ ರೋಹಿತ್ ಶರ್ಮ ಕೆಳಗಿಸಲು ಯತ್ನಿಸಿದ್ದರೇ ವಿರಾಟ್ ಕೊಹ್ಲಿ!

    ನವದೆಹಲಿ: ವಿರಾಟ್ ಕೊಹ್ಲಿ ಮುಂದಿನ ವಿಶ್ವಕಪ್ ಬಳಿಕ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಪ್ರಕಟಿಸಿದ ಬೆನ್ನಲ್ಲೇ, ರೋಹಿತ್ ಶರ್ಮ ಹೊಸ ನಾಯಕರಾಗುವುದು ನಿಶ್ಚಿತವೆನಿಸಿದೆ. ಆದರೆ, ರೋಹಿತ್ ಶರ್ಮ ಅವರನ್ನು ಸೀಮಿತ ಓವರ್ ತಂಡದ ಉಪನಾಯಕತ್ವದಿಂದಲೂ ಕೆಳಗಿಳಿಸಲು ವಿರಾಟ್ ಕೊಹ್ಲಿ ಈ ಪ್ರಯತ್ನಿಸಿದ್ದರು ಎಂದು ಇದೀಗ ಹೇಳಲಾಗುತ್ತಿದೆ. ಅಲ್ಲದೆ ಈ ಪ್ರಯತ್ನವೇ ಈಗ ಅವರು ಟಿ20 ತಂಡದ ನಾಯಕತ್ವವನ್ನು ಕಳೆದುಕೊಳ್ಳುವಂತೆ ಮಾಡಿದೆ ಎಂದೂ ಹೇಳಲಾಗಿದೆ. ಆಗಿದ್ದೇನೆಂದರೆ…

    ಕೆಲ ಸಮಯದ ಹಿಂದೆ, ರೋಹಿತ್ ಶರ್ಮ ಅವರನ್ನು ಉಪನಾಯಕ ಹುದ್ದೆಯಿಂದ ಕೆಳಗಿಳಿಸುವ ಪ್ರಸ್ತಾಪವೊಂದನ್ನು ಕೊಹ್ಲಿ ಆಯ್ಕೆ ಸಮಿತಿಯ ಮುಂದೆ ಇಟ್ಟಿದ್ದರು ಎನ್ನಲಾಗಿದೆ. ರೋಹಿತ್‌ಗೆ 34 ವರ್ಷವಾಗಿದೆ. ಹೀಗಾಗಿ ಕೆಎಲ್ ರಾಹುಲ್‌ಗೆ ಏಕದಿನ ಮತ್ತು ರಿಷಭ್ ಪಂತ್‌ಗೆ ಟಿ20 ತಂಡದ ಉಪನಾಯಕತ್ವವನ್ನು ನೀಡಿ ಎಂದು ಕೊಹ್ಲಿ ಹೇಳಿದ್ದರು.

    ಆದರೆ ಈ ಪ್ರಸ್ತಾಪ ಬಿಸಿಸಿಐ ಅಧಿಕಾರಿಗಳನ್ನು ಕೆರಳಿಸಿತ್ತು. ಸದ್ಯದಲ್ಲೇ ತಮ್ಮ ಉತ್ತರಾಧಿಕಾರಿ ಆಗಬಲ್ಲವರನ್ನು ಜತೆಯಲ್ಲೇ ಇಟ್ಟುಕೊಳ್ಳುವುದನ್ನು ತಪ್ಪಿಸಲು ಕೊಹ್ಲಿ ಈ ಉಪಾಯ ಮಾಡಿದ್ದರು ಎಂದು ಮಂಡಳಿ ಅಧಿಕಾರಿಗಳು ಕೆರಳಿದ್ದರು ಎನ್ನಲಾಗಿದೆ. ಅಲ್ಲದೆ ವಿರಾಟ್ ಕೊಹ್ಲಿ ಅವರನ್ನು ಸೀಮಿತ ಓವರ್ ತಂಡದ ನಾಯಕತ್ವದಿಂದ ಕೆಳಗಿಳಿಸಿ ರೋಹಿತ್‌ಗೆ ಪಟ್ಟ ವಹಿಸಲು ಬಿಸಿಸಿಐ ವಲಯದಲ್ಲಿ ಬಿಸಿಸಿಐ ಚರ್ಚೆ ಹುಟ್ಟಿಕೊಂಡಿತ್ತು ಎನ್ನಲಾಗಿದೆ.

    ಭಾರತ ಟಿ20 ತಂಡದ ಉಪನಾಯಕತ್ವಕ್ಕೆ ತ್ರಿಕೋನ ಸ್ಪರ್ಧೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts