More

    ನೂತನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಹರಿಹಾಯ್ದ ಸಾರಾ ಮಹೇಶ್​..!

    ಮೈಸೂರು: ನೂತನ ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ರೋಹಿಣಿ ಸಿಂಧೂರಿ ಹಾಗೂ ನೇಮಕ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಹಾಗೂ ಜೆಡಿಎಸ್​ ಶಾಸಕ ಸಾರಾ ಮಹೇಶ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಆಂಧ್ರ ಮೂಲದ ಅಧಿಕಾರಿಗಾಗಿ ಕನ್ನಡದ ಅಧಿಕಾರಿಗೆ ಅನ್ಯಾಯ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು. ಬಿ.ಶರತ್ ಅವರು ಅಧಿಕಾರ ಸ್ವೀಕರಿಸಿ ಒಂದು ತಿಂಗಳು ಆಗಿಲ್ಲ. ಅವರೊಬ್ಬ ದಲಿತ ಸಮುದಾಯದ ಅಧಿಕಾರಿ. ಕೇವಲ 29 ದಿನಕ್ಕೆ ದಲಿತ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದೇ ಸರ್ಕಾರದ ಸಾಧನೆಯೇ? ಅವರನ್ನು ಏಕಾಏಕಿ ವರ್ಗಾವಣೆ ಮಾಡಿರುವುದರ ಹಿಂದಿನ ಉದ್ದೇಶವೇನೆಂದು ಪ್ರಶ್ನಿಸಿದರು.

    ಇದೇ ಮೊದಲು
    ಮೈಸೂರು ದಸರಾ ಉನ್ನತಮಟ್ಟದ ಮಟ್ಟದ ಸಭೆ ನಡೆದ ಬಳಿಕ ದಸರಾ ವಿಶೇಷಾಧಿಕಾರಿಯಾಗಿರುವ ಜಿಲ್ಲಾಧಿಕಾರಿಯನ್ನೇ ವರ್ಗಾವಣೆ ಮಾಡಿರುವುದು ಇದೇ ಮೊದಲು. ಹಿಂದೆಂದೂ ವರ್ಗಾವಣೆ ಮಾಡಿರಲಿಲ್ಲ ಎಂದು ರಾಜ್ಯ ಸರ್ಕಾರದ ಕಾರ್ಯ ವೈಖರಿಯ ವಿರುದ್ಧ ಶಾಸಕ ಸಾ.ರಾ.ಮಹೇಶ್ ಟೀಕಾಪ್ರಹಾರ ನಡೆಸಿದರು.

    ಇದನ್ನೂ ಓದಿ: ಪತಿಯೊಂದಿಗೆ ಚಾಮುಂಡಿ ದರ್ಶನ ಪಡೆದ ರೋಹಿಣಿ ಸಿಂಧೂರಿ: ಡಿಸಿ ಆಗಿ ಅಧಿಕಾರ ಸ್ವೀಕಾರ ಬೆನ್ನಲ್ಲೇ ಖಡಕ್​ ಸಂದೇಶ!

    ಮತ್ತಷ್ಟು ಸಮಸ್ಯೆಗಳು ಎದುರಾಗಲಿವೆ
    ಡಿಜಿಟಲ್ ಸಹಿ ಬರುವ ಮೊದಲೇ ವರ್ಗಾವಣೆ ಮಾಡಲಾಗಿದೆ. ಕಳೆದ 29 ದಿನಗಳಿಂದ ಮೈಸೂರಿನಲ್ಲಿ ಯಾವುದೇ ಬಿಲ್​ಗಳು ಪಾಸ್ ಆಗಿರಲಿಲ್ಲ. ಸರ್ಕಾರದಿಂದ ಡಿಜಿಟಲ್ ಬಿಲ್ ಬಂದಿಲ್ಲ. ಆದ್ದರಿಂದಲೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಹಾರ ಪದಾರ್ಥಗಳ ಬಿಲ್ ಕೂಡ ಆಗಿಲ್ಲ. ಕೆಲವೊಂದು ಪ್ರಕ್ರಿಯೆಗಳು ಮುಗಿದ ಬಳಿಕ ಜಿಲ್ಲಾಧಿಕಾರಿ ಬಿಲ್‌ಗಳಿಗೆ ಸಹಿ ಹಾಕಬೇಕಾಗಿರುತ್ತದೆ‌. ಆ ಎಲ್ಲ ವಿಧಿಗಳು ಪೂರ್ಣಗೊಳ್ಳುವ ಸಮಯದಲ್ಲಿ ಏಕಾಏಕಿ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿದ್ದು ಸರಿಯಲ್ಲ. ಇದರಿಂದ ಮತ್ತಷ್ಟು ಸಮಸ್ಯೆಗಳು ಎದುರಾಗಲಿವೆ ಎಂದರು.

    ಆಂಧ್ರದ ಮಹಿಳೆಗಾಗಿ ಕನ್ನಡಿಗನಿಗೆ ಅವಮಾನ
    ಕನ್ನಡಿಗರು ಐಎಎಸ್ ಅಧಿಕಾರಿ ಆಗುವುದೇ ಅಪರೂಪ. ಹೀಗಿರುವಾಗ ಅಂತಹವರನ್ನು ಸರಿಯಾಗಿ ನಡೆಸಿಕೊಳ್ಳಬೇಕು. ಶರತ್ ಅವರನ್ನು ಮೈಸೂರಿಗೆ ಪೋಸ್ಟಿಂಗ್ ಮಾಡಬಾರದಿತ್ತು. ಈಗ ಪೋಸ್ಟಿಂಗ್ ಮಾಡಿದ ಒಂದೇ ತಿಂಗಳಲ್ಲಿ ವರ್ಗಾವಣೆ ಮಾಡಿದ್ದು, ಅವಮಾನ ಮಾಡಿದಂತೆ ಆಯ್ತು. ಒಬ್ಬ ಡಿಸಿಯಾಗಿ ಅವರ ಮನಸ್ಸು ಎಷ್ಟು ನೋವು ಅನುಭವಿಸಿರುತ್ತದೆ. ಕನ್ನಡದಲ್ಲಿ ಐಎಎಸ್ ಮಾಡುವವರ ಸಂಖ್ಯೆಯೇ ವಿರಳ. ಅಂತಹದರಲ್ಲಿ ಆಂಧ್ರದ ಮಹಿಳೆಗಾಗಿ ಕನ್ನಡಿಗನಿಗೆ ಅವಮಾನ ಮಾಡ್ತಿದ್ದಾರೆ. ರಾಜ್ಯದಲ್ಲಿ ಆಂಧ್ರ ಸಿಎಂ ಸರ್ಕಾರ ನಡೆಸುತ್ತಿದ್ದಾರಾ ಅನ್ನಿಸುತ್ತಿದೆ ಎಂದು ಟೀಕಿಸಿದರು.

    ರೋಹಿಣಿ ಸಿಂಧೂರಿ ಹಠಕ್ಕೆ ಬಿದ್ದಿದ್ದಾರೆ
    ಇದೇ ವೇಳೆ ರೋಹಿಣಿ ಸಿಂಧೂರಿ ವಿರುದ್ಧ ಹರಿಹಾಯ್ದ ಸಾರಾ ಮಹೇಶ್​, ನಾನು ಡಿಸಿ ಆಗಿಯೇ ಇರಬೇಕು ಎಂದು ರೋಹಿಣಿ ಸಿಂಧೂರಿ ಹಠಕ್ಕೆ ಬಿದ್ದಿದ್ದಾರೆ. ಅದಕ್ಕಾಗಿಯೇ ಸರ್ಕಾರದ ವಿರುದ್ಧವೇ ಹಾಸನದಲ್ಲಿ ಮೂರು ಬಾರಿ ನ್ಯಾಯಾಲಯಕ್ಕೆ ಹೋಗಿದ್ದರು. ಇದೀಗ ಮೈಸೂರಿಗೆ ಬಂದಿದ್ದಾರೆಂದು ಜರಿದರು. ಜಿಲ್ಲಾ ಮಂತ್ರಿಗಳಿಗೆ ಮಾಹಿತಿ ಇಲ್ಲದೇ ವರ್ಗಾವಣೆ ಆಗಿದೆಯಾ? ಆಗಿದ್ರೆ ನೀವೂ ಹೆಲ್ಪ್ ಲೆಸ್ ಸಚಿವರೇ? ಇದಕ್ಕೆ ಎಸ್.ಟಿ. ಸೋಮಶೇಖರ್ ಅವರೇ ಉತ್ತರ ಕೊಡಬೇಕೆಂದು ಸಾ.ರಾ. ಮಹೇಶ್ ಪ್ರಶ್ನಿಸಿದರು. (ಏಜೆನ್ಸೀಸ್​)

    ರೋಹಿಣಿ ಸಿಂಧೂರಿ ವರ್ಗಾವಣೆಗೆ ಕಾರಣವಾಯ್ತಾ ಸಿಎಂ ಬಿಎಸ್​ವೈ ತಿರುಪತಿ ಭೇಟಿ..?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts