More

    ರಗ್ಗು, ದಿಂಬು, ಲೋಟ, ತಟ್ಟೆ ಸಹಿತ ಬೀದಿಗಿಳಿದ ರೋಹಿಣಿ ಅಭಿಮಾನಿಗಳು!

    ಮೈಸೂರು: ಐಪಿಎಸ್‌ ಅಧಿಕಾರಿ ಡಿ.ರೂಪಾ ಮತ್ತು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಯಾವುದೇ ಕಾರಣಕ್ಕೂ ಇನ್ಮುಂದೆ ಸಾರ್ವಜನಿಕವಾಗಿ, ಸಾಮಾಜಿಕ ಜಾಲತಾಣ, ಮಾಧ್ಯಮಗಳಿಗೆ ಹೇಳಿಕೆ ನೀಡುವಂತಿಲ್ಲ ಎಂದು ಇಬ್ಬರು ಉನ್ನತ ಅಧಿಕಾರಿಗಳಿಗೆ ಸಿಬ್ಬಂದಿ ಮತ್ತು ಆಡಳಿತ ಇಲಾಖೆಯಿಂದ ನೋಟಿಸ್ ನೀಡಲಾಗಿತ್ತು. ಆದರೆ, ಈ ನೋಟಿಸ್​ಗೂ ‘ಡೋಂಟು ಕೇರ್’ ಎನ್ನದ ಐಪಿಎಸ್ ಅಧಿಕಾರಿ ಡಿ. ರೂಪಾ ಮತ್ತೆ ಫೇಸ್​ಬುಕ್​​ನಲ್ಲಿ ರೋಹಿಣಿ ವಿರುದ್ಧ ಫೋಸ್ಟ್ ಮಾಡಿದ್ದಾರೆ. ಈ ಕುರಿತಾಗಿ ರೋಹಿಣಿ ಸಿಂಧೂರಿ ಅಭಿಮಾನಿಗಳು ಪ್ರತಿಭಟನೆ ಮಾಡುತ್ತಿದ್ದಾರೆ.

    ತಮ್ಮ ಫೇಸ್​ಬುಕ್​​ ಖಾತೆಯಲ್ಲಿ ವರದಿಯೊಂದನ್ನು ಹಂಚಿಕೊಂಡಿರುವ ಡಿ. ರೂಪಾ, ಮೈಸೂರು ATI ನಿಂದಾ ರೋಹಿಣಿ ಸಿಂಧೂರಿ ಅವರು ಸರ್ಕಾರಿ ಸಾಮಾನುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಅವುಗಳು ಡಿಸಿ ಮನೆಯಲ್ಲಿ ಕೂಡ ಇಲ್ಲ. ಎಲ್ಲಿ ಹೋದವು ಎಂದಾಗಿ ಸಿಂಧೂರಿ ಅವರಿಗೆ ನೊಟೀಸ್ ಜಾರಿ ಮಾಡಿದ್ದು ವರದಿಯಾಗಿದೆ. ಇದರ ಮೇಲೆ ಕ್ರಮ ಆಯಿತೇ? ಸರ್ಕಾರಿ ವಸ್ತು 50 ರೂಪಾಯಿ ಇರಲಿ, 50 ಕೋಟಿ ಇರಲಿ, ತಪ್ಪು ತಪ್ಪೇ. 1000 ರೂಪಾಯಿ ಲಂಚ ತೆಗೆದುಕೊಂಡವರು ಕೂಡ ಲೋಕಾಯುಕ್ತ ವಿಚಾರಣೆಗೆ ಒಳಗಾಗಿದ್ದಾರೆ. ಕಾನೂನು ಡಿಸಿ, ಗುಮಸ್ತನಿಗೂ ಒಂದೇ ಎಂದು ಪೋಸ್ಟ್​​ ಮಾಡಿದ್ದಾರೆ.

    ಇದನ್ನೂ ಓದಿ: ಸಮುದ್ರದ ಮಧ್ಯದಲ್ಲಿಯೇ ಎರಡು ಭಾಗವಾದ ದೋಣಿ, 60 ಮಂದಿ ಮೃತ್ಯು!

    ಈ ವಿಚಾರವಾಗಿ ಸಿಟ್ಟಿಗೆದ್ದ ರೋಹಿಣಿ ಅಭಿಮಾನಿಗಳು ರಗ್ಗು, ದಿಂಬು, ಲೋಟ, ತಟ್ಟೆ ಸಹಿತ ಬೀದಿಗಿಳಿದ ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ಎದುರು ವಿನೂತನವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ರೋಹಿಣಿ ಪರ ಜೈಕಾರ ಕೂಗಿ ರೂಪ ವಿರುದ್ಧ ದಿಕ್ಕಾರ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.

    ರೋಹಿಣಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಲೋಟ, ದಿಂಬು ಹೊತ್ತೊಯ್ದಿದ್ದಾರೆ ಎಂದು ಆರೋಪ ಮಾಡಿದ್ದಾರೆ‌. ಅದು ನಿಜವಾಗಿದ್ದರೆ ಆ ಎಲ್ಲಾ ಪದಾರ್ಥಗಳನ್ನ ನಾವೇ ಕೊಡುತ್ತೇವೆ ಎಂದು ರೋಹಿಣಿ ಅಭಿಮಾನಿಗಳು ಎಟಿಐ ಮುಂದೆ ವಸ್ತುಗಳನ್ನು ತಂದಿಟ್ಟಿದ್ದಾರೆ.

    ಇದನ್ನೂ ಓದಿ: ಗರ್ಲ್ ಫ್ರೆಂಡ್​​ಗಾಗಿ ಸ್ನೇಹಿತನ ಹೃದಯ ಕಿತ್ತು, ಬೆರಳು ಕತ್ತರಿಸಿ ಕೊಂದ ಯುವಕ

    ಪ್ರತಿಭಟನೆಗೆ ಅನುಮತಿ ಪಡೆಯದ ಕಾರಣ ಪ್ರತಿಭಟನಕಾರರನ್ನು ಪೊಲೀಸರು ಸ್ಥಳದಿಂದ ಕಳುಹಿಸಿದ್ದಾರೆ. ಪ್ರತಿಭಟನೆಗೆ ತಂದಿದ್ದ ತಟ್ಟೆ, ಲೋಟಗಳ ಜೊತೆಗೆ ವಾಪಸ್ ಕಳುಹಿಸಿದ್ದಾರೆ.

    BJP ಅಧಿಕಾರದಲ್ಲಿ ಇರಬಾರದೆಂದು ಎಚ್​ಡಿಕೆ ಅವರನ್ನೇ ಸಿಎಂ ಮಾಡಿದ್ವಿ; ಆ ಪುಣ್ಯಾತ್ಮ ಮಾತ್ರ ವೆಸ್ಟೆಂಡ್ ಹೋಟೆಲ್​​ನಲ್ಲೇ ಇದ್ದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts