More

    ಅರುಣ್ ಜೇಟ್ಲಿ ಪುತ್ರ ರೋಹನ್ ದೆಹಲಿ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ

    ನವದೆಹಲಿ: ಮಾಜಿ ಕೇಂದ್ರ ಸಚಿವ ದಿವಂಗತ ಅರುಣ್ ಜೇಟ್ಲಿ ಅವರ ಪುತ್ರ ರೋಹನ್ ಜೇಟ್ಲಿ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನವೆಂಬರ್ 5ರಿಂದ 8ರವರೆಗೆ ಡಿಡಿಸಿಎಯ ವಿವಿಧ ಪದಾಧಿಕಾರಿಗಳ ಹುದ್ದೆಗೆ ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಸ್ಥಾನಕ್ಕೆ ರೋಹನ್ ಜೇಟ್ಲಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಇದರಿಂದ ಅವರ ಅವಿರೋಧ ಆಯ್ಕೆ ನಿಶ್ಚಿತವೆನಿಸಿದೆ.

    ರೋಹನ್ ಜೇಟ್ಲಿ ಅಕ್ಟೋಬರ್ 7ರಂದು ನಾಮಪತ್ರ ಸಲ್ಲಿಸಿದ್ದರು. ವಕೀಲರಾಗಿರುವ ರೋಹನ್ ಕ್ರಿಕೆಟ್ ಆಡಳಿತಾಧಿಕಾರಿಯಾಗಿ ಇದೇ ಮೊದಲ ಬಾರಿಗೆ ಕಾರ್ಯನಿರ್ವಹಿಸಲಿದ್ದಾರೆ. ಅರುಣ್ ಜೇಟ್ಲಿ ಅವರು ಡಿಡಿಸಿಎಗೆ ಸುದೀರ್ಘ 13 ವರ್ಷಗಳ (1999-2013) ಅಧ್ಯಕ್ಷರಾಗಿದ್ದರು.

    ಡಿಡಿಸಿಎ ಖಜಾಂಚಿ ಸ್ಥಾನಕ್ಕೆ ಮಾತ್ರ ನಿಟಕ ಪೈಪೋಟಿ ಏರ್ಪಟ್ಟಿದ್ದು, ಬಿಸಿಸಿಐ ಮಾಜಿ ಅಧ್ಯಕ್ಷ ಸಿಕೆ ಖನ್ನಾ ಅವರ ಪತ್ನಿ ಶಶಿ ಮತ್ತು ಗೌತಮ್ ಗಂಭೀರ್ ಅವರ ಸಂಬಂಧಿ ಪವನ್ ಗುಲಾಟಿ ಸ್ಪರ್ಧೆಯಲ್ಲಿದ್ದಾರೆ.

    ನಾಲ್ವರು ನಿರ್ದೇಶಕರ ಹುದ್ದೆಗೂ ಚುನಾವಣೆ ನಡೆಯಲಿದ್ದು, ಅಶೋಕ್ ಶರ್ಮ, ದಿನೇಶ್ ಕುಮಾರ್ ಶರ್ಮ, ಹರೀಶ್ ಸಿಂಗ್ಲಾ, ಹರ್ಷ ಗುಪ್ತಾ, ಕರ್ನೈಲ್ ಸಿಂಗ್, ಮಂಜಿತ್ ಸಿಂಗ್, ಪ್ರದೀಪ್ ಕುಮಾರ್ ಅರೋರ, ಪ್ರದೀಪ್ ಅಗರ್ವಾಲ್ ಮತ್ತು ಸುದೀರ್ ಕುಮಾರ್ ಅಗರ್ವಾಲ್ ಸ್ಪರ್ಧೆಯಲ್ಲಿದ್ದಾರೆ.

    ಅನಿಲ್ ಕುಂಬ್ಳೆಗೆ ಅರ್ಧಶತಕದ ಸಂಭ್ರಮ, ಸ್ಪಿನ್​ ದಿಗ್ಗಜನ ಜನ್ಮದಿನಕ್ಕೆ ಶುಭಾಶಯಗಳ ಸುರಿಮಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts