More

    ಕರೊನಾ ಸಂಕಷ್ಟದಲ್ಲಿರುವ ಸಿನಿಮಂದಿಯ ಸಹಾಯಕ್ಕೆ ಯಶ್​; 3 ಸಾವಿರಕ್ಕೂ ಅಧಿಕ ಜನರಿಗೆ ತಲಾ 5 ಸಾವಿರ ರೂ.!

    ಬೆಂಗಳೂರು: ಕರೊನಾ ಸಂಕಷ್ಟದಲ್ಲಿರುವ ಸಿನಿಮಾ ಕ್ಷೇತ್ರದವರ ಸಹಾಯಕ್ಕೆ ಇದೀಗ ರಾಕಿಂಗ್ ಸ್ಟಾರ್ ಯಶ್​ ಮುಂದಾಗಿದ್ದು, ಕನ್ನಡ ಚಿತ್ರರಂಗದ ಸುಮಾರು 3 ಸಾವಿರ ಜನರ ಖಾತೆಗಳಿಗೆ ತಲಾ 5 ಸಾವಿರ ರೂಪಾಯಿ ಟ್ರಾನ್ಸ್​ಫರ್ ಮಾಡಲು ನಿರ್ಧರಿಸಿದ್ದಾರೆ.

    ಕಣ್ಣಿಗೆ ಕಾಣದ ವೈರಸ್ ಮನುಷ್ಯನ ಬದುಕನ್ನು ಹೆಚ್ಚೂಕಮ್ಮಿ ಬುಡಮೇಲು ಮಾಡಿದೆ. ಅದರಲ್ಲೂ ಕಳೆದೊಂದು ವರ್ಷದಿಂದ ನನ್ನ ಸಿನಿಮಾ ಕುಟುಂಬ ಅಸಹಾಯಕತೆಯಿಂದ ಕೈಕಟ್ಟಿ ಕುಳಿತಿದೆ. ಇದು ಬರೀ ಮಾತನಾಡುವ ಸಮಯವಲ್ಲ, ಸಂಕಷ್ಟದಲ್ಲಿರುವ ಸಿನಿಮಾ ಕುಟುಂಬದ ಜತೆಗೆ ನಿಲ್ಲುವ ಸಮಯ ಎಂದು ಹೇಳಿರುವ ಅವರು ತಮ್ಮ ಈ ಸಹಾಯವನ್ನು ಘೋಷಿಸಿದ್ದಾರೆ.

    ಕನ್ನಡ ಚಿತ್ರರಂಗದಲ್ಲಿ 3 ಸಾವಿರಕ್ಕೂ ಅಧಿಕ ಇರುವ ಸಿನಿಮಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರ ಅಧಿಕೃತ ಖಾತೆಗಳಿಗೆ ತಲಾ 5 ಸಾವಿರ ರೂಪಾಯಿಯನ್ನು ನನ್ನ ವೈಯಕ್ತಿಕ ಸಂಪಾದನೆಯ ಹಣದಿಂದ ನೀಡುವುದಾಗಿ ಹೇಳಿದ್ದಾರೆ. ಈ ಕುರಿತು ಸಿನಿ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಸಾ.ರಾ.ಗೋವಿಂದು, ಉಪಾಧ್ಯಕ್ಷ ರವೀಂದ್ರನಾಥ್ ಅವರ ಜತೆ ಚರ್ಚಿಸಿದ್ದು, ಅಧಿಕೃತ ಖಾತೆಗಳ ವಿವರ ಸಿಗುತ್ತಿದ್ದಂತೆ ಹಣವನ್ನು ರವಾನಿಸಲು ಆರಂಭಿಸಲಾಗುವುದು ಎಂದು ಯಶ್​ ಭರವಸೆ ನೀಡಿದ್ದಾರೆ. ಈ ಮೂಲಕ ಯಶ್​ ಸುಮಾರು 1.5 ಕೋಟಿ ರೂ. ಆರ್ಥಿಕ ಸಹಾಯಕ್ಕೆ ಮುಂದಾಗಿದ್ದು, ಅವರ ಈ ಕಾರ್ಯಕ್ಕೆ ಸಿನಿಮಾ ಕ್ಷೇತ್ರ ಸೇರಿ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಲು ಆರಂಭಿಸಿದೆ.

    ಕರೊನಾ ಸಂಕಷ್ಟದಲ್ಲಿರುವ ಸಿನಿಮಂದಿಯ ಸಹಾಯಕ್ಕೆ ಯಶ್​; 3 ಸಾವಿರಕ್ಕೂ ಅಧಿಕ ಜನರಿಗೆ ತಲಾ 5 ಸಾವಿರ ರೂ.!

    ಬರಲಿದೆ ಮತ್ತೊಂದು ಭೀಕರ ರೋಗ!: ಕರೊನಾ ಪೂರ್ತಿ ಹೋಗಲು ವರ್ಷಗಳೆಷ್ಟು ಬೇಕು ಗೊತ್ತಾ?; ಇಲ್ಲಿದೆ ಭವಿಷ್ಯ..

    ರಾಜಧಾನಿಯಲ್ಲಿ ನಡೆಯಿತು ಭೀಕರ ಆತ್ಮಹತ್ಯೆ; 15 ಅಂತಸ್ತುಗಳ ಕಟ್ಟಡದಿಂದ ಕೆಳಕ್ಕೆ ಹಾರಿ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts