More

    ಕನ್ನಡಿಗ ರಾಬಿನ್ ಉತ್ತಪ್ಪ ಭರ್ಜರಿ ಬ್ಯಾಟಿಂಗ್, ಕೇರಳಕ್ಕೆ ಹ್ಯಾಟ್ರಿಕ್ ಗೆಲುವು

    ಮುಂಬೈ: ಆರಂಭಿಕ ಬ್ಯಾಟ್ಸ್‌ಮನ್ ಹಾಗೂ ಕನ್ನಡಿಗ ರಾಬಿನ್ ಉತ್ತಪ್ಪ (91 ರನ್, 54 ಎಸೆತ, 3 ಬೌಂಡರಿ, 8 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ನಿರ್ವಹಣೆಯ ನೆರವಿನಿಂದ ಕೇರಳ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ. ದೆಹಲಿ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ಕೇರಳ ತಂಡ ದಾಖಲೆಯ ಚೇಸಿಂಗ್ ಮಾಡುವ ಮೂಲಕ 6 ವಿಕೆಟ್‌ಗಳಿಂದ ಗೆಲುವು ಒಲಿಸಿಕೊಂಡಿತು. ಈ ಮುನ್ನ ಮುಂಬೈ ತಂಡಕ್ಕೂ ಕೇರಳ ಆಘಾತ ನೀಡಿತ್ತು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದೆಹಲಿ ತಂಡ, 4 ವಿಕೆಟ್‌ಗೆ 212 ರನ್ ಪೇರಿಸಿತು. ನಾಯಕ ಶಿಖರ್ ಧವನ್ (77) ದೆಹಲಿ ತಂಡಕ್ಕೆ ಆಸರೆಯಾದರು. ನಿಷೇಧದಿಂದ ವಾಪಸಾಗಿರುವ ವೇಗಿ ಎಸ್. ಶ್ರೀಶಾಂತ್ 2 ವಿಕೆಟ್ ಕಬಳಿಸಿ ಮಿಂಚಿದರು. ಟೀಮ್ ಇಂಡಿಯಾ ಬ್ಯಾಟ್ಸ್‌ಮನ್ ಶಿಖರ್ ಧವನ್ ವಿಕೆಟ್ ಕೂಡ ಶ್ರೀಶಾಂತ್ ಪಾಲಾಗಿದ್ದು ಗಮನಾರ್ಹ.

    ಇದನ್ನೂ ಓದಿ: ಜೋ ರೂಟ್ ದಾಖಲೆಯ ಶತಕ, ಇಂಗ್ಲೆಂಡ್ ಭಾರಿ ಮುನ್ನಡೆ

    ಬೃಹತ್ ಮೊತ್ತದ ಚೇಸಿಂಗ್ ಆರಂಭಿಸಿದ ಕೇರಳ ತಂಡ ಕಳೆದ ಪಂದ್ಯದ ಶತಕವೀರ ಮೊಹಮದ್ ಅಜರುದ್ದೀನ್ (0) ವಿಕೆಟ್ ಬೇಗನೆ ಕಳೆದುಕೊಂಡಿತ್ತು. ಬಳಿಕ ನಾಯಕ ಸಂಜು ಸ್ಯಾಮ್ಸನ್ (16) ಕೂಡ ಅಲ್ಪ ಮೊತ್ತಕ್ಕೆ ಔಟಾದರು. ಆದರೆ ಒಂದೆಡೆಯಿಂದ ಭದ್ರವಾಗಿ ನಿಂತು, ದೆಹಲಿ ಬೌಲರ್‌ಗಳನ್ನು ಬೆಂಡೆತ್ತಿದ ರಾಬಿನ್ ಉತ್ತಪ್ಪ, ಮುಂಬರುವ ಐಪಿಎಲ್ ಹರಾಜಿಗೆ ಪೂರ್ವಭಾವಿಯಾಗಿ ಭರ್ಜರಿ ಆಟವಾಡಿ ಗಮನಸೆಳೆದರು. ವಿಷ್ಣು ವಿನೋದ್ (71*) ನೀಡಿದ ಸಾಥ್‌ನಿಂದ ಉತ್ತಪ್ಪ, ಕೇರಳ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಶತಕದ ಸನಿಹ ಬಂದಾಗ ಉತ್ತಪ್ಪ ಔಟಾದರೂ, ಕೇರಳ ತಂಡ 19 ಓವರ್‌ಗಳಲ್ಲಿ 4 ವಿಕೆಟ್‌ಗೆ 218 ರನ್ ಪೇರಿಸಿ ಜಯಿಸಿತು.

    ಈ ಗೆಲುವಿನೊಂದಿಗೆ ಒಟ್ಟು 12 ಅಂಕ ಸಂಪಾದಿಸಿ ಇ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿರುವ ಕೇರಳ ತಂಡ, ನಾಕೌಟ್ ಪ್ರವೇಶಿಸುವ ಅವಕಾಶವನ್ನು ವೃದ್ಧಿಸಿಕೊಂಡಿದೆ. ಇನ್ನು ಹರಿಯಾಣ ವಿರುದ್ಧದ ಪಂದ್ಯ ಕೇರಳ ಪಾಲಿಗೆ ನಿರ್ಣಾಯಕವೆನಿಸಿದೆ.

    ತೆಂಡುಲ್ಕರ್ ಪುತ್ರ ಅರ್ಜುನ್ ಮುಂಬೈ ಪರ ದೇಶೀಯ ಕ್ರಿಕೆಟ್‌ಗೆ ಪದಾರ್ಪಣೆ

    VIDEO: ನೆಟ್ ಬೌಲರ್ ಕೋಟಾದಲ್ಲಿ ಆಸೀಸ್‌ಗೆ ಹೋದವ…ಈಗ ಟೀಮ್ ಇಂಡಿಯಾದ ಭರವಸೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts