ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಕರ್ನಾಟಕದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಿಲೀಸ್ ಆದ ಒಂದೂವರೆ ತಿಂಗಳಲ್ಲಿ ಸ್ಯಾಂಡಲ್ವುಡ್ ಅನೇಕ ದಾಖಲೆಗಳನ್ನು ಮುರಿದಿರುವ ಈ ಸಿನಿಮಾ ಇದೀಗ ಅಮೇಜಾನ್ ಪ್ರೈಂ ಗೆ ಬರಲು ಸಿದ್ಧವಾಗಿದೆ.
ಇದೇ ತಿಂಗಳ 25ರಿಂದ ಅಮೇಜಾನ್ನಲ್ಲಿ ರಾಬರ್ಟ್ ಸಿನಿಮಾ ಪ್ರದರ್ಶನ ಕಾಣಲಿದೆ. ದರ್ಶನ್ ಜತೆ ನಾಯಕ ನಟಿಯಾಗಿ ಆಶಾ ಭಟ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ತರುಣ್ ಕಿಶೋರ್ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಎಸ್ ಉಮಾಪತಿ ಬಂಡವಾಳ ಹೂಡಿರುವ ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಮಾರ್ಚ್ 11 ರಂದು ಬಿಡುಗಡೆಗೊಂಡಿತ್ತು. ಇದೀಗ ಈ ಐದೂ ಭಾಷೆಗಳಲ್ಲಿ ಅಮೇಜಾನ್ ಪ್ರೈಂ ಸೇರಲಿದೆ.
ರಿಲೀಸ್ ಆಗಿ ಕೆಲವೇ ದಿನಗಳಲ್ಲಿ ಒಟಿಟಿ ಸೇರಿದ ಸಿನಿಮಾಗಳಲ್ಲಿ ಇದೇ ಮೊದಲೇನಲ್ಲ. ಈ ಹಿಂದೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಯುವರತ್ನ ಸಿನಿಮಾ ಕೂಡ ರಿಲೀಸ್ ಆಗಿ ಕೆಲವೇ ದಿನಗಳಲ್ಲಿ ಪ್ರೈಂನಲ್ಲಿ ಲಭ್ಯವಾಗಿತ್ತು. ಕರೊನಾ ಕಾರಣದಿಂದಾಗಿ ಜನರು ಥಿಯೇಟರ್ಗಳತ್ತ ಬರಲು ಹಿಂಜರಿಯುತ್ತಿರುವ ಹಿನ್ನೆಲೆಯಲ್ಲಿ ಸಿನಿಮಾಗಳನ್ನು ಒಟಿಟಿಗಳಿಗೆ ಮಾರಾಟ ಮಾಡಲಾಗುತ್ತಿದೆ. (ಏಜೆನ್ಸೀಸ್)
ಬಿಗ್ಬಾಸ್ ಮನೆ ಖಾಲಿ ಖಾಲಿ! ಇದ್ದಕ್ಕಿದ್ದಂತೆ ಎಲ್ಲವನ್ನೂ ಹಿಂಪಡೆಯುವುದಕ್ಕೆ ಕಾರಣವೇನು?
ಲಾಕ್ಡೌನ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ! ರಾಜ್ಯ ಸರ್ಕಾರದಿಂದ ವರದಿ ಕೇಳಿದ ನ್ಯಾಯಾಲಯ