ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಸಿನಿಮಾ ಇಂದು ತೆರೆಗೆ ಅಪ್ಪಳಿಸಿದೆ. ಒಟ್ಟು ಒಂದೂವರೆ ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ರಾಬರ್ಟ್ ಚಿತ್ರ ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದು, ದರ್ಶನ್ ಕರಿಯರ್ನಲ್ಲೇ ಅತಿದೊಡ್ಡ ಓಪನಿಂಗ್ ಎನಿಸಿಕೊಂಡಿದೆ.
ಇನ್ನು ಚಿತ್ರ ಹೇಗಿದೆ ಎಂಬ ಕುತೂಹಲಕ್ಕೆ ಈಗಾಗಲೇ ಚಿತ್ರ ನೋಡಿರುವ ಕೆಲವು ನೆಟ್ಟಿಗರು ತೆರೆ ಎಳೆದಿದ್ದಾರೆ. ಮೊದಲ ದಿನ ಮೊದಲ ಶೋ ನೋಡಿದ ಅನೇಕ ನೆಟ್ಟಿಗರು ಟ್ವೀಟ್ ಮೂಲಕ ಚಿತ್ರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ರಾಬರ್ಟ್ ಸಿನಿಮಾ ಪಕ್ಕಾ ಪೈಸಾ ವಸೂಲ್ ಚಿತ್ರವೆಂದು ಗುಣಗಾನ ಮಾಡಿದ್ದಾರೆ.
ಅನೇಕರು ಚಿತ್ರದಲ್ಲಿ ನಟ ದರ್ಶನ್ ಎಂಟ್ರಿ ಚಿಂದಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದರ್ಶನ್ ನಟನೆಗೆ ಪೂರ್ಣ ಅಂಕವನ್ನು ನೆಟ್ಟಿಗರು ನೀಡಿದ್ದಾರೆ. ಹಿನ್ನೆಲೆ ಧ್ವನಿ ಅಂತೂ ಸೂಪರ್ ಎಂದಿದ್ದಾರೆ. ವಿಶೇಷವಾಗಿ ರಾವಣ ಫೈಟ್ ಮಾತ್ರ ಮೈನವಿರೇಳಿಸುವಂತಿದೆ. ಚಿಕ್ಕಣ್ಣ ಕಾಮಿಡಿ ಮಾತ್ರ ಸಖತ್ ಆಗಿದೆ ಎಂದು ಚಿತ್ರದ ಬಗ್ಗೆ ನೆಟ್ಟಿಗರು ಕೊಂಡಾಡಿದ್ದಾರೆ.
Interval:#Roberrt#DBoss Entry🤘👌@dasadarshan in the role of a Stammer is just Brilliant!
Amazingly shot. BGM adds up!
Watch out for the Raavana Fight!
Pure Goosebumps stuff!!'Avan yaar range gu sigalla kano, avan range'e bere' pic.twitter.com/ALycTfQn1A
— Creative Guyz (@creativeguyz77) March 11, 2021
ಚಿತ್ರ ಪವರ್ ಪ್ಯಾಕ್ಡ್ ಆ್ಯಕ್ಸನ್ ಚಿತ್ರವಾಗಿದೆ. ತರುಣ್ ಸುಧೀರ್ ನಿರ್ದೇಶನ ಸೊಗಸಾಗಿದೆ. ಚಿತ್ರಕತೆ ಥ್ರಿಲ್ಲಿಂಗ್ ಆಗಿದೆ ಎಂದು ಬಹುತೇಕರು ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಚಿತ್ರದಲ್ಲಿ ವಿಶೇಷವಾಗಿ ಹಾಡುಗಳಂತೂ ಬ್ಲಾಕ್ಬಸ್ಟರ್ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Nakkan Fabulous movie guys., you will thoroughly enjoy the movie🔥@TharunSudhir @dasadarshan #ROBERRT #RoberrtStormMarch11 #DBOSS pic.twitter.com/94UMdHmrIG
— Thugs of Sandalwood (@SandalwoodThugs) March 11, 2021
ಒಟ್ಟಾರೆ ಟ್ವಿಟರ್ನಲ್ಲಿ ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದ್ದು, ದರ್ಶನ್ ಕರಿಯರ್ನಲ್ಲಿ ಈ ಚಿತ್ರ ಹೊಸ ಮೈಲಿಗಲ್ಲಾಗಾಲಿದೆಯಾ ಎಂದು ಕಾದು ನೋಡಬೇಕಿದೆ.
#Roberrt Postive Talk All over
Superb First Half & Interval Bang@TharunSudhir Direction✌️@dasadarshan Out Standing Performance & Screen presence
Ravana Scene Maatra Chindi 🔥👌🏻
Visual Treat ❤ Harikrishna Sir Bgm 👌
Chikkanna comedy Highlight
Fans ge Antu Habba 🥁 pic.twitter.com/aPpuf7HJ5j— Vikram Aditya (@vickey9036) March 11, 2021
ಗುಜರಾತ್ ಬಳಿಕ ಭಾರತದಲ್ಲಿ 2ನೇ ಬಾರಿಗೆ ಪತ್ತೆಯಾಯ್ತು ನಿಗೂಢ ಏಕಶಿಲೆ..!