ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, 2020ರ ಏಪ್ರಿಲ್ನಲ್ಲಿಯೇ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ನಟನೆ ‘ರಾಬರ್ಟ್’ ಸಿನಿಮಾ ಬಿಡುಗಡೆ ಆಗಬೇಕಿತ್ತು. ಕರೊನಾ ಹಿನ್ನೆಲೆಯಲ್ಲಿ ಅದು ಈಡೇರಲಿಲ್ಲ. ಇತ್ತ ಅಭಿಮಾನಿ ವಲಯದಲ್ಲಿ ಸಿನಿಮಾ ಬಿಡುಗಡೆ ಯಾವಾಗ ಎಂಬ ಕಾಯುವಿಕೆ ಕಾಡುತ್ತಲೇ ಇತ್ತು. ಇದೀಗ ಅದೆಲ್ಲದಕ್ಕೂ ಉತ್ತರವೆಂಬಂತೆ ಚಿತ್ರದ ಬಿಡುಗಡೆ ದಿನಾಂಕವನ್ನು ಸ್ವತಃ ದರ್ಶನ್ ಘೋಷಿಸಿಕೊಂಡಿದ್ದಾರೆ. ಮಾರ್ಚ್ 11ಕ್ಕೆ ರಾಬರ್ಟ್ ಚಿತ್ರ ರಿಲೀಸ್ ಆಗಲಿದೆ.
#Roberrt Coming To Theaters On Maha Shivarathri March11 2021 #RoberrtStormMarch11 @TharunSudhir @umap30071 pic.twitter.com/OTecKUlN4v
— Darshan Thoogudeepa (@dasadarshan) January 10, 2021
ಈಗಾಗಲೇ ಕನ್ನಡದಲ್ಲಿ ಒಂದಾದ ಮೇಲೊಂದರಂತೆ ಸ್ಟಾರ್ ನಟರು ಸಿನಿಮಾ ರಿಲೀಸ್ ದಿನಾಂಕವನ್ನು ಘೋಷಿಸಿಕೊಳ್ಳುತ್ತಿದ್ದಾರೆ. ಪುನೀತ್ ಯುವರತ್ನ ಸಿನಿಮಾ ಏಪ್ರಿಲ್ 1ಕ್ಕೆ ಬಿಡುಗಡೆ ಆಗಲಿದ್ದರೆ. ಏಪ್ರಿಲ್ 23ಕ್ಕೆ ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ 3 ಸಿನಿಮಾ ತೆರೆಕಾಣಲಿದೆ. ಇನ್ನೇನು ಇದೇ ತಿಂಗಳ 29ಕ್ಕೆ ಧ್ರುವ ಪೊಗರು ತೆರೆಕಾಣಲಿದೆ ಎನ್ನಲಾಗುತ್ತಿದೆ. ಇದೀಗ ಮಾರ್ಚ್ 11ರ ಶಿವರಾತ್ರಿ ಹಬ್ಬದ ಪ್ರಯುಕ್ತ ರಾಬರ್ಟ್ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ.
ಇದನ್ನೂ ಓದಿ: ಓಟಿಟಿ ಮೇಲೆ ದರ್ಶನ್ ಗರಂ: ಅಂಬಾನಿ ವಿರುದ್ಧ ಗಂಭೀರ ಆರೋಪ ಮಾಡಿದ ದಚ್ಚು!
ಇನ್ನು ಕನ್ನಡದ ಜತೆಗೆ ತೆಲುಗಿನಲ್ಲೂ ಈ ಸಿನಿಮಾ ತೆರೆಕಾಣಲಿದೆ ಎಂದು ಈ ಹಿಂದೆ ಚಿತ್ರದ ನಿರ್ದೇಶಕ ತರುಣ್ ಸುಧೀರ್ ಹೇಳಿಕೊಂಡಿದ್ದರು. ಆದರೆ, ಇದೀಗ ಕೇವಲ ಕನ್ನಡದ ಬಿಡುಗಡೆ ಪೋಸ್ಟರ್ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ತಂಡ ಶೇರ್ ಮಾಡಿಕೊಂಡಿದೆ. ಅಥವಾ, ಇನ್ನೇನು ಬಿಡುಗಡೆ ದಿನಾಂಕ ಹತ್ತಿರ ಬರುತ್ತಿದ್ದಂತೆ ತೆಲುಗು ಬಿಡುಗಡೆ ಬಗ್ಗೆ ಅಧಿಕೃತವಾಗಿ ಘೋಷಿಸಿಕೊಳ್ಳಬಹುದು ಎನ್ನಲಾಗುತ್ತಿದೆ.
ಹುಟ್ಟುಹಬ್ಬದ ಆಚರಣೆಗೆ ಬ್ರೇಕ್ ಹಾಕಿ ನಟ ದರ್ಶನ್ ಅಭಿಮಾನಿಗಳಿಗೆ ನೀಡಿದ ಸಂದೇಶ ಹೀಗಿದೆ…