More

    ಹುಬ್ಬಳ್ಳಿಯಲ್ಲಿ ರಾಬರ್ಟ್; ಚಪ್ಪಲಿ ಬದಿಗಿಟ್ಟು ಮಾತನಾಡಿದ ದರ್ಶನ್..

    ಬೆಂಗಳೂರು: ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ನಟನೆಯ ‘ರಾಬರ್ಟ್’ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಮಾರ್ಚ್ 11ಕ್ಕೆ ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲೂ ಸಿನಿಮಾ ಬಿಡುಗಡೆ ಆಗುತ್ತಿದೆ. ಹಾಗಾಗಿ ಇತ್ತೀಚೆಗಷ್ಟೇ ಹೈದರಾಬಾದ್​ನಲ್ಲಿ ಕಾರ್ಯಕ್ರಮವೊಂದನ್ನು ಮಾಡಿದ್ದ ತಂಡ, ಭಾನುವಾರ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯ ದೇಸಾಯಿ ಸರ್ಕಲ್​ನಲ್ಲಿನ ರೇಲ್ವೆ ಮೈದಾನದಲ್ಲಿ ಅಂಥದ್ದೇ ಅದ್ದೂರಿ ಆಡಿಯೋ ರಿಲೀಸ್ ಕಾರ್ಯಕ್ರಮ ಮಾಡಿದೆ. ಚಿತ್ರದಲ್ಲಿನ ಬಹುತೇಕ ಎಲ್ಲ ಕಲಾವಿದರು, ತಂತ್ರಜ್ಞರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಹುಬ್ಬಳ್ಳಿ ಮಂದಿಯನ್ನು ರಂಜಿಸಿದ್ದಾರೆ. ಸ್ವತಃ ದರ್ಶನ್ ಹುಬ್ಬಳ್ಳಿ ಜತೆಗಿನ ಭಾವನಾತ್ಮಕ ನಂಟನ್ನೂ ಬಿಚ್ಚಿಟ್ಟಿದ್ದಾರೆ.

    ಚಪ್ಪಲಿ ಬದಿಗಿರಿಸಿ ದರ್ಶನ್ ಮಾತು: ‘ಹುಬ್ಬಳ್ಳಿ ಮಂದಿಗೆ ಈ ನಿಮ್ಮ ಚಿಕ್ಕ ಕಲಾವಿದನ ನಮಸ್ಕಾರಗಳು..’ ಎನ್ನುತ್ತಲೇ ಮಾತು ಆರಂಭಿಸಿದ ದರ್ಶನ್, ‘ಹೀಗೆ ಚಪ್ಪಲಿ ಬಿಟ್ಟು ನಾನು ಎಲ್ಲಿಯೂ ಯಾವುದೇ ಕಾರ್ಯಕ್ರಮದಲ್ಲಿಯೂ ಮಾತನಾಡಿಲ್ಲ. ಆದರೆ ಉತ್ತರ ಕರ್ನಾಟಕಕ್ಕೆ ಬಂದು ಚಪ್ಪಲಿ ಬಿಟ್ಟು ಮಾತನಾಡಿದರೆ ಅದೊಂದು ಗೌರವ. ಇದು ಸಂಗೊಳ್ಳಿ ರಾಯಣ್ಣ ಹುಟ್ಟಿದ ನಾಡು. ಆ ಚಿತ್ರದ ಸಲುವಾಗಿ ವಿಜಯಯಾತ್ರೆ ವೇಳೆ ಮಹಿಳೆಯರು ತಲೆ ಮೇಲೆ ಸೆರಗು ಹಾಕಿಕೊಂಡು ಗೌರವ ತೋರುತಿದ್ರು. ಆವತ್ತು ತೋರಿಸಿದ ಆ ಪ್ರೀತಿಗೆ ಇವತ್ತು ನಾವು ಚಪ್ಪಲಿ ಬಿಟ್ಟು ಮಾತಾಡಬೇಕು. ಚಪ್ಪಲಿ ಬಿಟ್ಟು ಇಲ್ಲಿನ ಅಭಿಮಾನಿಗಳ ಪಾದಗಳಿಗೆ ನಾವು ಚಪ್ಪಲಿ ಆಗ್ಬೇಕು’ ಎಂದರು.

    ಮೈಸೂರಿನ ಮನೆ ಕೊಟ್ಟಿದ್ದು ಇದೇ ಮಂದಿಯೇ!: ‘ಅಪ್ಪನಿಗೆ ಒಂದು ವರ್ಷ ಸಿನಿಮಾ ಕೆಲಸ ಇರಲಿಲ್ಲ. ಆ ಸಮಯದಲ್ಲಿ ಉತ್ತರ ಕರ್ನಾಟಕಕ್ಕೆ ಬಂದು ಸತತ ಆರು ತಿಂಗಳು ನಾಟಕ ಮಾಡಿದ್ದರು. ಆಗ ಇಲ್ಲಿನ ಮಂದಿ ನಾಟಕ ನೋಡಿ ಎರಡೂವರೆ ರೂಪಾಯಿಯಿಂದ, 5 ರೂ, 10 ರೂಪಾಯಿ ನೀಡಿ ಪ್ರೋತ್ಸಾಹಿಸಿದ್ದರು. ಆರು ತಿಂಗಳ ಬಳಿಕ ಹಾಗೆ ದುಡಿದ ದುಡ್ಡಿನಲ್ಲಿಯೇ ಮೈಸೂರಿನಲ್ಲಿ ಮನೆ ಕಟ್ಟಿದ್ವಿ. ಆ ಮನೆಯನ್ನು ಕೊಟ್ಟಿದ್ದು ಇದೇ ಉತ್ತರ ಕರ್ನಾಟಕ ಜನ’ ಎಂದು ಹಳೇ ದಿನಗಳನ್ನು ದರ್ಶನ್ ಮೆಲುಕು ಹಾಕಿದರು.

    ನಟಿಯರಿಂದ ದಾಸನ ಗುಣಗಾನ: ‘ರಾಬರ್ಟ್’ ಚಿತ್ರದಲ್ಲಿ ದರ್ಶನ್​ಗೆ ಆಶಾ ಭಟ್ ಜೋಡಿಯಾದರೆ, ಇನ್ನುಳಿದಂತೆ ಸೋನಲ್ ಮೊಂತೆರೋ, ಐಶ್ವರ್ಯಾ ಪ್ರಸಾದ್, ತೇಜಸ್ವಿನಿ ಸಹ ನಟಿಸಿದ್ದಾರೆ. ಈ ನಾಲ್ವರು ನಟಿಯರು ದರ್ಶನ್ ಅವರ ಗುಣಗಾನ ಮಾಡಿದ್ದಾರೆ. ಹೊಸಬಳು ಎಂಬ ಫೀಲ್ ಬರದಂತೆ ನನ್ನನ್ನು ನೋಡಿಕೊಂಡರು ಎಂದು ಸೋನಲ್ ಹೇಳಿದರೆ, ದರ್ಶನ್ ಜತೆಒಂದು ಸಿನಿಮಾ ಮಾಡಿದ್ದು 10 ಸಿನಿಮಾ ಮಾಡಿದ ಅನುಭವ ಸಿಕ್ಕಿತು ಎಂದು ಐಶ್ವರ್ಯಾ ತಿಳಿಸಿದ್ದಾರೆ. ‘ಗಜ’ ಚಿತ್ರದ ಬಳಿಕ ಮತ್ತೆ ದರ್ಶನ್ ಜತೆ ನಟಿಸಿದ ಅನುಭವ ಹಂಚಿಕೊಂಡರು ತೇಜಸ್ವಿನಿ. ಮೊದಲ ಚಿತ್ರದಲ್ಲಿಯೇ ದರ್ಶನ್ ಜತೆ ನಟಿಸುವ ಅವಕಾಶ ಸಿಗುವ ಎಂದುಕೊಂಡಿರಲಿಲ್ಲ. ಅದೀಗ ಈಡೇರಿದೆ ಎಂದರು ಆಶಾ.

    ಎಲ್ಲ ಕಲಾವಿದರದ್ದು ಒಂದೇ ಜಾತಿ!: ‘ನಾವು ಯಾರೋ ಒಬ್ಬರ ಸ್ವತ್ತಲ್ಲ. ಯಾವ ಜಾತಿಗೂ ನಾವು ಸೀಮಿತವಲ್ಲ. ಯಾರಾದ್ರೂ ಸತ್ತಾಗ ಅವರ ಮನೆಯಲ್ಲಿ ಅಂತ್ಯಕ್ರಿಯೆ ಹೀಗೇ ಮಾಡಬೇಕೆಂಬ ಪದ್ಧತಿ ಇದೆ. ಆದರೆ, ಅದು ನಮಗಿಲ್ಲ. ನಮಗೆ ಜಾತಿ, ಮತ ಇಲ್ಲ. ಇಲ್ಲಿ ಎಲ್ಲ ವರ್ಗದವರೂ ಸೇರಿದ್ದೀರಿ, ಇಷ್ಟೆಲ್ಲ ಜನ ಹಾಕಿದ ಕೂಳಿನಿಂದ ಈ ದೇಹ ನಿಂತಿದೆ. ಸೆಲೆಬ್ರಿಟಿಗಳೇ (ಅಭಿಮಾನಿಗಳು) ನಮಗೆಲ್ಲ’ ಎಂದು ದರ್ಶನ್ ಹೇಳಿದ್ದಾರೆ.

    ಬಿಗ್​ಬಾಸ್​ ಶೋ ಆರಂಭದಲ್ಲೇ ಕೇಳಿಬಂತು ಅಪಸ್ವರ: ಕಲರ್ಸ್​ ಕನ್ನಡಕ್ಕೆ ಜನರಿಟ್ಟ ಬೇಡಿಕೆ ಏನು?

    ಪ್ರಾಣಾಪಾಯದಿಂದ ನಟ ರಿಷಬ್​ ಶೆಟ್ಟಿ, ನಟಿ ಗಾನವಿ ಜಸ್ಟ್ ಮಿಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts