More

    ರಸ್ತೆ ನಿಯಮ ಪಾಲನೆ ಕಡ್ಡಾಯ

    ಸವದತ್ತಿ: ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು, ಅಪಘಾತದಲ್ಲಿ ಸಾಯುವ ವ್ಯಕ್ತಿಯ ಕುಟುಂಬದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ರಸ್ತೆ ಅಪರ ಸಾರಿಗೆ ಆಯುಕ್ತ ನರೇಂದ್ರ ಹೋಳ್ಕರ್ ಹೇಳಿದ್ದಾರೆ.

    ಪಟ್ಟಣದ ಲಿಂಗರಾಜ ಸರ್ಕಲ್‌ನಲ್ಲಿ ಮಂಗಳವಾರ ಸಾರಿಗೆ ಇಲಾಖೆ, ರಸ್ತೆ ಸುರಕ್ಷತಾ ಪ್ರಾಧಿಕಾರ ಹಾಗೂ ಪೊಲೀಸ್, ಆರೋಗ್ಯ, ಶಿಕ್ಷಣ ಹಾಗೂ ಲೋಕೋಪಯೋಗಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಸಾರ್ವಜನಿಕರು ರಸ್ತೆ ನಿಯಮಗಳ ಬಗ್ಗೆ ಅರಿತು ಪಾಲಿಸಿದರೆ ಅಪಘಾತಗಳ ಸಂಖ್ಯೆಯಲ್ಲಿ ಕಡಿಮೆಯಾಗುತ್ತದೆ..ಎಲ್ಲ ದ್ವಿಚಕ್ರ ವಾಹನ ಸವಾರರು ತಮ್ಮ ಪ್ರಾಣ ರಕ್ಷಣೆಗಾಗಿ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎಂದರು.

    ಬೀದಿ ನಾಟಕ , ರಸಮಂಜರಿ ಕಾರ್ಯಕ್ರಮ ಮತ್ತು ಹಾಸ್ಯ ಚಟಾಕಿ, ನೃತ್ಯದ ಮೂಲಕ ಸಾರ್ವಜನಿಕರಿಗೆ ರಸ್ತೆ ನಿಯಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಎಎಸ್‌ಐ ಕೆ.ಎಂ.ಕಲ್ಲೂರ, ರಾಜು ಚವ್ಹಾಣ, ವಿಠ್ಠಲ ಹಳಬರ್, ಹನುಮಂತರಡ್ಡಿ ವಾಸನ್, ಕಾರ್ಯಕ್ರಮದ ಸಂಯೋಜಕರಾದ ಗೋನಾ ಸ್ವಾಮಿ, ಹಾಸ್ಯ ಕಲಾವಿದರಾದ ಮಹಾದೇವ ಸತ್ತಿಗೇರಿ, ಬರ್ಕತ್‌ಅಲಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts