More

    ರಸ್ತೆ ಸರಿಯಿಲ್ಲ, ಜನರ ಗೋಳು ಕೇಳುವವರಿಲ್ಲ

    ಕಡಬಿ: ಸಮೀಪದ ಮಾಡಮಗೇರಿ ಗ್ರಾಮದಿಂದ ಯರಗಣವಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾದ ಕಾರಣ ಈ ಭಾಗದಲ್ಲಿ ಸಂಚರಿಸುವ ಪ್ರಯಾಣಿಕರು ಹಾಗೂ ಪಾದಚಾರಿಗಳು ನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ. ರಸ್ತೆಯಲ್ಲಿ ಭಾರಿ ಗಾತ್ರದ ಗುಂಡಿಗಳು ಬಿದ್ದಿರುವುದರಿಂದ ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚಾರ ಮಾಡಲು ಜನರು ಇನ್ನಿಲ್ಲದ ಕಸರತ್ತು ಮಾಡುತ್ತಾರೆ.

    ಈ ರಸ್ತೆ ಸಮೀಪದ ಯರಗಟ್ಟಿ, ಗೋಕಾಕ ಸೇರಿ ಸುತ್ತಮುತ್ತಲ ಪಟ್ಟಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಸೇರಿ ಉದ್ಯೋಗಕ್ಕಾಗಿ ನಗರಗಳತ್ತ ಪ್ರಯಾಣ ಮಾಡುವವರು ಇದೇ ಮಾರ್ಗದ ಮೂಲಕ ಸಂಚರಿಸುತ್ತಾರೆ. ಆದರೆ, ಈ ಮಾರ್ಗದಲ್ಲಿ ಪ್ರಯಾಣಿಸುವವರ ಅವಸ್ಥೆ ದೇವರಿಗೆ ಪ್ರೀತಿ ಎನ್ನುವಂತಾಗಿದೆ.

    ಬಸ್ ಇಲ್ಲ, ಸೈಕಲ್, ಬೈಕ್ ಪಂಚರ್ ಆಗೋದು ತಪ್ಪಲ್ಲ: ಈ ಗ್ರಾಮಗಳಿಗೆ ಸರಿಯಾದ ಬಸ್ ಸೌಲಭ್ಯವಿಲ್ಲದ ಕಾರಣ ಗ್ರಾಮಸ್ಥರು ಬೈಕ್, ಸೈಕಲ್ ಮೂಲಕ ಸಂಚಾರ ಮಾಡುತ್ತಾರೆ. ಆದರೆ, ರಸ್ತೆಗಳು ಹದಗೆಟ್ಟ ಕಾರಣ ಈ ವಾಹನಗಳು ಸಹ ಪಂಚರ್ ಆಗಿ ಸವಾರರು ಪರದಾಡುತ್ತಾರೆ. ಅನೇಕರು ಕಿ.ಮೀ. ಗಂಟಲೇ ತಮ್ಮ ದ್ವಿಚಕ್ರ ವಾಹನ ತಳ್ಳಿಕೊಂಡು ಮನೆ ಸೇರಿದ ಉದಾಹರಣೆಗಳಿವೆ. ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

    ಕರೊನಾ ಕಾರಣ ಕೂಲಿ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತಂದು ರಸ್ತೆ ಸಮಸ್ಯೆ ಬಗೆಹರಿಸಲಾಗುವುದು.
    | ವಿ.ಎಂ.ಪೂಜೇರ ಸಹಾಯಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಸವದತ್ತಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts