More

    ಬಸವಣ್ಣನವರ ಆದರ್ಶ ಪಾಲನೆ ಅವಶ್ಯ

    ಕಡಬಿ: ಬಸವಣ್ಣ 12ನೇ ಶತಮಾನ ಹಿಂದು ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು. ಶಿವ ಕೇಂದ್ರೀಕತ ಭಕ್ತಿ ಚಳವಳಿಯಲ್ಲಿ ಕನ್ನಡ ಕವಿಯಾಗಿದ್ದರು ಎಂದು ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ ಹೇಳಿದರು.

    ತಾಲೂಕಿನ ಕುರಬಗಟ್ಟಿ ಗ್ರಾಮದಲ್ಲಿ ಬಸವ ಜಯಂತಿ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಸವೇಶ್ವರ ಮೂರ್ತಿ ಅನಾವರಣಗೊಳಿಸಿ ಮಾತನಾಡಿದ ಅವರು, ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು. ಇಂತಹ ಮಹಾತ್ಮರ ಜೀವನದ ತತ್ತ್ವಾದರ್ಶಗಳನ್ನು ಇಂದಿನ ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

    ಸತ್ತಿಗೇರಿ ಹೀರೆಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರೇಣುಕಾ ಯಲ್ಲಮ್ಮ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹೀರೆಮಠ, ಅಜಿತಕುಮಾರ ದೇಸಾಯಿ, ಅಜಯರಾವ ದೇಸಾಯಿ, ಮಹಾದೇವ ದೊಡ್ಡಲಿಂಗನವರ, ವೀರಭದ್ರಪ್ಪ ಕುರಬಗಟ್ಟಿ, ಈರಣ್ಣ ಕಾರಬಾರಿ, ಶಿವಯ್ಯ ಹೀರೆಮಠ, ಕ್ಕೀರಪ್ಪ ಸಕ್ರಿ, ಶಿವಾನಂದ ಉಳ್ಳಿಗಡ್ಡಿ, ಶಿವಾನಂದ ಗಿಡಗೌಡ್ರ, ಈರಣ್ಣ ಲಕ್ಷಟ್ಟಿ, ಈರಣ್ಣ ಅಡಿ, ಮಹಾಲಿಂಗಪ್ಪ ಮಹಾಲಿಂಗಪುರ, ಮಂಜುಳಾ ಬಂಡಿವಡ್ಡರ, ಮಹಾದೇವಿ ಗಟನಟ್ಟಿ, ಕಲ್ಲೋಳೆಪ್ಪ ಸಿದ್ದನವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts