More

  ನಾಥೂರಾಮ್ ಗೋಡ್ಸೆ ರಸ್ತೆ: ವಿವಾದಿತ ಫಲಕ ತೆರವು, ಪೊಲೀಸರಿಗೂ ದೂರು..

  ಉಡುಪಿ: ತೀವ್ರ ಆಕ್ಷೇಪ ಹಾಗೂ ವಿವಾದಕ್ಕೆ ಗುರಿಯಾಗಿದ್ದ ಗೋಡ್ಸೆ ಹೆಸರಿನ ರಸ್ತೆಫಲಕವನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಸಂಬಂಧಿತ ಗ್ರಾಮಪಂಚಾಯತ್ ಅಧಿಕಾರಿಗಳು ಈ ತೆರವು ಕ್ರಮಕೈಗೊಂಡಿದ್ದಾರೆ.

  ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ “ಪಡುಗಿರಿ ನಾಥೂರಾಮ್​ ಗೋಡ್ಸೆ ರಸ್ತೆ” ಎಂಬ ಫಲಕವೊಂದನ್ನು ರಸ್ತೆಗೆ ಅಳವಡಿಸಿರುವ ಫೋಟೋ ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿ ವೈರಲ್ ಆಗಿತ್ತು.

  ಮಹಾತ್ಮ ಗಾಂಧಿಯನ್ನು ಹತ್ಯೆಗೈದ ವ್ಯಕ್ತಿಯ ಹೆಸರನ್ನು ರಸ್ತೆಗೆ ಇಡುವ ಮೂಲಕ ಗಾಂಧಿಗೆ ಅವಮಾನ ಮಾಡಲಾಗಿದೆ ಎಂಬಿತ್ಯಾದಿ ಆಕ್ಷೇಪಗಳೊಂದಿವೆ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಗ್ರಾಮಪಂಚಾಯತ್ ಆ ಫಲಕವನ್ನು ತೆಗೆದು ಹಾಕಿದೆ.

  ರಸ್ತೆಗೆ ಹೀಗೆ ಹೆಸರಿಟ್ಟಿರುವುದು ಅಚ್ಚರಿ ಮೂಡಿಸಿದೆ. ಗ್ರಾಮಪಂಚಾಯತ್ ವತಿಯಿಂದ ಈ ರೀತಿ ಹೆಸರು ಇಡುವ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಫಲಕ ತೆರವುಗೊಳಿಸಿರುವ ಗ್ರಾಮಪಂಚಾಯತ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಈ ಕುರಿತು ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಮತ್ತು ಈ ಕೃತ್ಯದ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

  ಯುವ ಕಾಂಗ್ರೆಸ್ ಜೀಪ್ ಪಲ್ಟಿ; ಒಬ್ಬ ಸ್ಥಳದಲ್ಲೇ ಸಾವು, ಮೂವರಿಗೆ ಗಾಯ..

  ಡ್ರಾಪ್​ ಕೊಡುವುದಾಗಿ ಕರೆದೊಯ್ದು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನ..

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts