More

    ನೀರಿನ ರಭಸಕ್ಕೆ ರಸ್ತೆ ಸಂಪರ್ಕ ಕಟ್ – ವಿವಿಧೆಡೆ 57 ಮನೆ ಕುಸಿತ

    ಮುದ್ದೇಬಿಹಾಳ: ತಾಲೂಕಿನ ಬಸರಕೋಡದಿಂದ ಸಿದ್ದಾಪೂರ ಪಿ.ಟಿ.ಗ್ರಾಮಕ್ಕೆ ಸಂಪರ್ಕಿಸುವ ಗ್ರಾಮೀಣ ಸೇತುವೆ ಮಳೆಗೆ ಕುಸಿದು ಕಂದಕ ಬಿದ್ದಿದ್ದರಿಂದ ಭಾರೀ ವಾಹನಗಳ ಸಂಚಾರ ಗುರುವಾರ ಸ್ಥಗಿತಗೊಂಡಿದೆ.

    ಇದರಿಂದ ಶಾಲೆ, ಕಾಲೇಜ್ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಈ ಊರಿನ ಸಂಪರ್ಕ ರಸ್ತೆ ಹಾನಿಗೀಡಾಗಿದ್ದು ಜನ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದೆ. ಪಿಡಬ್ಲೂಡಿ ಅಧಿಕಾರಿ ಸಂದೀಪ ಕುಡ್ಲೂರ, ಗ್ರಾಮ ಲೆಕ್ಕಾಧಿಕಾರಿ ಡಿ.ಎಸ್. ಮಠಪತಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ರಸ್ತೆ ಕೆಳಗೆ ನೀರು ಹರಿದು ಹೋಗಲು ಹಾಕಿರುವ ಸಿಮೆಂಟ್ ಪೈಪ್ ಒತ್ತಡದಿಂದ ಒಡೆದು ಸಮಸ್ಯೆ ಉಂಟಾಗಿದೆ. ನೀರಿನ ರಭಸ ಹೆಚ್ಚಾಗಿದ್ದರಿಂದ ದುರಸ್ತಿ ಸದ್ಯಕ್ಕೆ ಸಾಧ್ಯವಿಲ್ಲದಂತಾಗಿದೆ. ನೀರಿನ ಹರಿವು ಇಳಿಮುಖಗೊಂಡ ಬಳಿಕ ಪಿಡಬ್ಲೂಡಿ ಇಲಾಖೆಯಿಂದ ತಾತ್ಕಾಲಿಕ ದುರಸ್ತಿ ಕಾರ್ಯ ಕೈಗೊಂಡು ಜನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.

    ಅಲ್ಲದೆ, ಈ ರಸ್ತೆಯನ್ನು ಹೊಸದಾಗಿ ನಿರ್ಮಿಸಲು ಶಾಸಕ ನಡಹಳ್ಳಿ ಕಾರ್ಯೋನ್ಮುಖರಾಗಿದ್ದು, ಕೆಬಿಜೆಎನ್‌ಎಲ್‌ನಿಂದ ಟೆಂಡರ್ ಕರೆಯಲಾಗಿದೆ. ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ. ತಾಲೂಕಿನಲ್ಲಿ ಲಭ್ಯವಾದ ಮಾಹಿತಿ ಪ್ರಕಾರ ಮಳೆಗೆ 57 ಮನೆಗಳು ಕುಸಿದಿವೆ ಎಂದು ಶಿರಸ್ತೇದಾರ ವೀರೇಶ ತೊನಶ್ಯಾಳ ಹೇಳಿದ್ದಾರೆ.

    ಸಿದ್ದಾಪುರ ಪಿ.ಟಿ.ಗೆ ಹೋಗುವ ಸಂಪರ್ಕ ಸೇತುವೆ ಕುಸಿದಿದ್ದರಿಂದ ನೀರು ಹರಿಯುವ ಸಂದರ್ಭ ಗ್ರಾಮಸ್ಥರು ರಸ್ತೆ ನೀರಿನ ಹರಿವಿನಲ್ಲಿಯೇ ದಾಟಲು ಯತ್ನಿಸುವಾಗ ಜಾರಿ ಬೀಳುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು. ಅಲ್ಲದೆ, ಸಮಸ್ಯೆಯ ಗಂಭೀರತೆಯನ್ನು ವಿಡಂಬನೆಯ ಮೂಲಕ ಸರ್ಕಾರದ ಗಮನ ಸೆಳೆಯಲು ಕಾರಣವಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts